ಬಳ್ಳಾರಿ: ನೆರೆಯ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಕೊಡಮೂರು ಬಳಿ ಇಂದು ಲಾರಿ ಹರಿದು ಕರ್ನಾಟಕ ರಾಜ್ಯದ ಬಳ್ಳಾರಿ ತಾಲೂಕಿನ ಮೂಲದ ಮೂವರು ಶ್ರೀಶೈಲ ಪಾದಯಾತ್ರಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಬಳ್ಳಾರಿ ತಾಲೂಕಿನ ಹೊಸ ಯರ್ರಗುಡಿ ಗ್ರಾಮದ ಗಡ್ಡಮ್ ಹುಲುಗಯ್ಯ (29), ಜಿ.ಪೋತಲಿಂಗ (22) ಜಿ.ಶೇಖಪ್ಪ (18) ಸಾವಿಗೀಡಾದವರು. ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ.
ಬಳ್ಳಾರಿಯಿಂದ ಶ್ರೀ ಶೈಲಕ್ಕೆ ತೆರಳುತ್ತಿದ್ದ ಪಾದಯಾತ್ರಿಗಳ ಮೇಲೆ ಈ ಲಾರಿ ಹರಿದಿದ್ದು, ಮತ್ತಿಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಆರುಮಂದಿ ಗಾಯಾಳುಗಳನ್ನ ಕರ್ನೂಲ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.