ಬಳ್ಳಾರಿ: ಮಹಾಮಾರಿ ಕೊರೊನಾ ಸೋಂಕನ್ನು ದೂರವಾಗಿಸಲು ದಮ್ಮೂರು ಕಗ್ಗಲ್ ಗ್ರಾಮದಲ್ಲಿ ಮೊಸರನ್ನವನ್ನು ಚೆಲ್ಲಿರುವ ಘಟನೆ ಬೆಳಕಿಗೆ ಬಂದಿದೆ.
ಗಣಿನಾಡು ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ದಮ್ಮೂರು ಕಗ್ಗಲ್ ಗ್ರಾಮದಲ್ಲಿ ಪ್ರತಿ ಮನೆ ಮನೆಯಿಂದ ಅಂದಾಜು 5 ಕೆಜಿಯಷ್ಟು ಮೊಸರನ್ನವನ್ನು ಸಂಗ್ರಹಿಸಿ ಟ್ರ್ಯಾಕ್ಟರ್ನಲ್ಲಿ ತುಂಬಿಕೊಂಡು ಗ್ರಾಮದ ಸುತ್ತಲೂ ಅದನ್ನು ಚೆಲ್ಲಿದ್ದಾರೆ.
ಮೊನ್ನೆಯಷ್ಟೇ ಕೊಳಗಲ್ಲು ಗ್ರಾಮದಲ್ಲಿ ಇಂತಹ ಘಟನೆ ನಡೆದಿತ್ತು. ಇದೀಗ ಡಿ. ಕಗ್ಗಲ್ ಗ್ರಾಮದಲ್ಲಯೂ ಇಂತಹ ಘಟನೆ ನಡೆದಿದೆ. ಕೊರೊನಾ ದೂರಾಗಲೆಂದು ನೂರಾರು ಕೆಜಿ ಅನ್ನವನ್ನು ಮಣ್ಣು ಪಾಲು ಮಾಡಿದ್ದಾರೆ.
ಮನೆ ಮನೆಯಲ್ಲಿ ಮೊಸರನ್ನವನ್ನು ಮಾಡಿಸಿ, ತಡರಾತ್ರಿ ವೇಳೆಯಲ್ಲಿ ಗ್ರಾಮದಾಚೆ ಅದನ್ನು ಗ್ರಾಮಸ್ಥರು ಚೆಲ್ಲಿ ಬರುತ್ತಿದ್ದಾರೆ. ಗ್ರಾಮೀಣ ಭಾಗದ ನಾನಾ ಗ್ರಾಮಗಳ ಹೊರಗಡೆ ಹೋಗಿ ಮೊಸರನ್ನವನ್ನು ನೆಲಕ್ಕೆ ಸುರಿದಿರೋದು ವಿಪರ್ಯಾಸವೇ ಸರಿ.
ಇದನ್ನೂ ಓದಿ: ನಿಯಮ ಉಲ್ಲಂಘಿಸಿದ ಹುಬ್ಬಳ್ಳಿ ಪಾಲಿಕೆ ಅಧಿಕಾರಿಗಳಿಗೂ ಬಿತ್ತು ದಂಡ!
ಕೋವಿಡ್ ಕಾಲದಲ್ಲಿ ಒಂದೆಡೆ ತುತ್ತು ಅನ್ನಕ್ಕಾಗಿ ಜನರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಇದ್ರ ನಡುವೆ ಜನರು ನೂರಾರು ಕೆಜಿಯಷ್ಟು ಅನ್ನವನ್ನು ಮಣ್ಣು ಪಾಲು ಮಾಡಿದ್ದಾರೆ.