ETV Bharat / state

ಬಳ್ಳಾರಿ: ನವಜಾತ ಶಿಶುವಿಗೆ ಡಿಸಿ ಹೆಸರಿಟ್ಟ ದಂಪತಿ - ballary latest news

ಕೊರೊನಾ ಸೋಂಕಿತ ಗರ್ಭಿಣಿಯೋರ್ವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಹಿಳೆಯ ಆರೋಗ್ಯ ವಿಚಾರಿಸಿದ ಡಿಸಿ ಎಸ್​​.ಎಸ್. ನಕುಲ್ ಅವರ ಹೆಸರನ್ನೇ ತಮ್ಮ ಮಗುವಿಗೆ ನಾಮಕರಣ ಮಾಡಿ, ಜಿಲ್ಲಾಧಿಕಾರಿಗೆ ವಿಶೇಷವಾಗಿ ಅಭಿನಂದನೆ ಸಲ್ಲಿಸಿದ್ದಾರೆ.

The couple named to their newborn baby as  Nakul
ಬಳ್ಳಾರಿ: ನವಜಾತ ಶಿಶುವಿಗೆ ಡಿಸಿ ಹೆಸರಿಟ್ಟ ದಂಪತಿ
author img

By

Published : Sep 26, 2020, 9:14 AM IST

ಬಳ್ಳಾರಿ: ನವಜಾತ ಶಿಶುವಿಗೆ ಜಿಲ್ಲಾಧಿಕಾರಿಯ ಹೆಸರಿಡುವ ಮೂಲಕ ಇಲ್ಲೊಂದು ದಂಪತಿ ಜಿಲ್ಲೆಯ ಡಿಸಿಗೆ ವಿಶೇಷವಾಗಿ ಅಭಿನಂದಿಸಿದೆ.

ಕೊರೊನಾ ಸೋಂಕಿತ ಗರ್ಭಿಣಿಯ ಹೆರಿಗೆಯಾದ ಬಳಿಕ ಎರಡು ತಿಂಗಳೊಳಗೆ ಆ ನವಜಾತ ಶಿಶುವಿನ ನಾಮಕರಣ ಕಾರ್ಯಕ್ರಮವನ್ನು ಗಣಿನಗರಿ ಬಳ್ಳಾರಿಯಲ್ಲಿ ಆಯೋಜಿಸಲಾಗಿತ್ತು.‌‌ ಆ ಮಗುವಿಗೆ ಮೂರು ಬಾರಿ ನಕುಲ್, ನಕುಲ್, ನಕುಲ್ ಎಂದು ಹೇಳುವ ಮೂಲಕ ನಾಮಕರಣ ಮಾಡಿದ್ದಾರೆ.

ಪಕ್ಕದ ದಾವಣಗೆರೆ ಜಿಲ್ಲೆಯಲ್ಲಿ ತನ್ನ ಗಂಡನೊಂದಿಗೆ ನೆಲೆಸಿರುವ ಆ ಗರ್ಭಿಣಿಯು ಹೆರಿಗೆಗಾಗಿ ತನ್ನ ತವರೂರು ಬಳ್ಳಾರಿಗೆ ಬಂದಿದ್ದರು. ಅವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿದ್ದು, ಸೋಂಕು ತಗುಲಿರುವುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಆಕೆಯನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಿಸಿ, ಬಳಿಕ ಹೆರಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು.

ಡಿಸಿ ಎಸ್​​.ಎಸ್.ನಕುಲ್

ಹೆರಿಗೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಅವರು ಕೋವಿಡ್ ಆಸ್ಪತ್ರೆಯಿಂದ ಗುಣಮುಖರಾಗಿ ಹೊರ ಬರುತ್ತಿದ್ದಂತೆಯೇ ದಂಪತಿಯ ಕುಶಲೋಪರಿಯನ್ನು ಡಿಸಿ ನಕುಲ್ ವಿಚಾರಿಸಿದ್ದಾರೆ. ಅವರ ಕಾಳಜಿ, ಕರ್ತವ್ಯ, ಸರಳತೆ, ನಡೆ-ನುಡಿಗೆ ಈ ದಂಪತಿ ಅಭಿಮಾನಿಗಳಾಗಿದ್ದಾರೆ. ಜಿಲ್ಲಾಧಿಕಾರಿ ನಕುಲ್ ಅವರ ಈ ವಿಶೇಷ ಗುಣಕ್ಕೆ ಮನ ಸೋತ ಈ ದಂಪತಿ ಸದ್ಯ ತಮ್ಮ ಗಂಡು ಮಗುವಿಗೆ ಅವರ ಹೆಸರನ್ನೇ ನಾಮಕಾರಣ ಮಾಡಿದ್ದಾರೆ.

ಈ ವಿಷಯದ ಕುರಿತು ಜಿಲ್ಲಾಧಿಕಾರಿ ಎಸ್.​ಎಸ್.ನಕುಲ್ ಅವರ ಗಮನ ಸೆಳೆದಾಗ, ಅವರಿಗೆ ಆಶ್ಚರ್ಯವಾಗಿದೆ. ಜೊತೆಗೆ ಸಂತಸ ವ್ಯಕ್ತಪಡಿಸಿದ್ದಾರೆ. ಇದೊಂದು ಅವಿಸ್ಮರಣೀಯ ಘಟನೆ. ನಿಜಕ್ಕೂ ಅಚ್ಚರಿಯಾಗುತ್ತಿದೆ. ದಂಪತಿ ಮತ್ತು ಮಗುವಿಗೆ ಶುಭವಾಗಲಿ ಎಂದು ಹಾರೈಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.