ಹೊಸಪೇಟೆ (ವಿಜಯನಗರ): ಹರಪನಹಳ್ಳಿ ತಾಲೂಕಿನ ಅಡವಿಹಳ್ಳಿ ಕ್ರಾಸ್ ಬಳಿ ನಿಂತಿದ್ದ ಟ್ರ್ಯಾಕ್ಟರ್ಗೆ ಟಾಟಾ ಏಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟಿದ್ದಾರೆ.
ಟ್ರ್ಯಾಕ್ಟರ್‌ನಲ್ಲಿದ್ದ ಒಂದೇ ಕುಟುಂಬದ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹೊಟ್ಟೆಗೇನಹಳ್ಳಿಯ ಹೊಳಿಯಮ್ಮ (32), ದೊಡ್ಡಹಾಳು ಹನುಮಂತಪ್ಪ (46) ಹಾಗೂ ಲಕ್ಷ್ಮವ್ವ (42) ಮೃತರು.
ಓದಿ: ಲಂಚ ಸ್ವೀಕಾರ: 'ಡಿ'ದರ್ಜೆ ನೌಕರನಿಗೆ 4 ವರ್ಷ ಜೈಲು ಶಿಕ್ಷೆ ವಿಧಿಸಿದ ಬಳ್ಳಾರಿ ಕೋರ್ಟ್
ಹೊಟ್ಟೆಗೇನಹಳ್ಳಿ ಗ್ರಾಮದಿಂದ ಕೊಟ್ಟೂರು ಪಟ್ಟಣಕ್ಕೆ ಜವಳ ಕಾರ್ಯಕ್ರಮಕ್ಕೆ ಹೋಗುವಾಗ ಈ ದುರ್ಘಟನೆ ನಡೆದಿದೆ. ಈ ಸಂಬಂಧ ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.