ಬಳ್ಳಾರಿ: ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲಾತಿ ಕಲ್ಪಿಸಬೇಕೆಂದು ಕುರುಬರ ಎಸ್ಟಿ ಮೀಸಲಾತಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಕೆ. ವಿರೂಪಾಕ್ಷಪ್ಪ ಆಗ್ರಹಿಸಿದ್ದಾರೆ.ಊ
ಬಳ್ಳಾರಿಯ ಸರ್ಕಾರಿ ಅತಿಥಿಗೃಹದಲ್ಲಿಂದು ನಡೆದ ಮಾಧ್ಯಮಗೋಷ್ಠಿಯಲ್ಲಿ ವಿರೂಪಾಕ್ಷಪ್ಪ ಮಾತನಾಡಿ, ರಾಜ್ಯದ ಕುರುಬ ಸಮುದಾಯವು ಬುಡಕಟ್ಟು ಜನಾಂಗದ ನೆಲೆಗಟ್ಟು ಹೊಂದಿರುವುದರ ಬಗ್ಗೆ ಕೇಂದ್ರ- ರಾಜ್ಯ ಸರ್ಕಾರದ ದಾಖಲೆಗಳು ಹೇಳುತ್ತಿವೆ. ಹೀಗಾಗಿ ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲಾತಿ ಕಲ್ಪಿಸಬೇಕು. ಗೊಂಡ, ರಾಜಗೊಂಡ, ಹಾಲುಮತ, ಜೇನುಕುರುಬ, ಕುರುವನ್, ಕಾಡು ಕುರುಬ, ಕಾಟುನಾಯಕನ್ ಎಂಬ ಹೆಸರಿನಡಿ ಕರೆಯಿಸಿಕೊಳ್ಳುವವರೆಲ್ಲರಿಗೂ ಎಸ್ಟಿ ಮೀಸಲಾತಿ ಸೌಲಭ್ಯ ಕೊಡಬೇಕೆಂದು ಒತ್ತಾಯಿಸುತ್ತೇವೆ ಎಂದರು.
ರಾಜಕೀಯ ಪ್ರೇರಿತವಾದ ಹೋರಾಟ ಇಲ್ಲ. ಕಾಗಿನೆಲೆ ಕನಕಗುರು ಪೀಠದ ನಾಲ್ವರು ಪೀಠಾಧಿಪತಿಗಳ ಸಮ್ಮುಖದಲ್ಲಿ ನಡೆಯುವ ಈ ಹೋರಾಟದಲ್ಲೂ ಹಾಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯನವ್ರು ಕೂಡ ಭಾಗಿಯಾಗಲಿದ್ದಾರೆ. ಅವರು ಭಾಗಿಯಾದರೂ ಭಾಗಿಯಾಗದಿದ್ದರೂ ಪರವಾಗಿಲ್ಲ. ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲಾತಿ ಸೌಲಭ್ಯ ಕಲ್ಪಿಸಲೇಬೇಕೆಂಬ ಹೋರಾಟ ಪ್ರಬಲವಾಗಿರುತ್ತೆ ಎಂದು ಕೆ. ವಿರೂಪಾಕ್ಷಪ್ಪ ತಿಳಿಸಿದರು.
ಹಿರಿಯ ಮುಖಂಡರಾದ ಕಲ್ಲುಕಂಭ ಪಂಪಾಪತಿ, ಅಯ್ಯಾಳಿ ತಿಮ್ಮಪ್ಪ, ಶಂಕರಗೌಡ, ಶಶಿಕಲ ಕೃಷ್ಣಮೋಹನ್, ಕೆ.ಎ.ರಾಮಲಿಂಗಪ್ಪ, ಯುವ ಮುಖಂಡರಾದ ಕೆ.ಆರ್. ಮಲ್ಲೇಶ ಕುಮಾರ, ಕುರುಗೋಡು ಚನ್ನಬಸವರಾಜ, ಎರ್ರೆಗೌಡ ಉಪಸ್ಥಿತರಿದ್ದರು.