ETV Bharat / state

ಕೊರೊನಾ ನಿರ್ವಹಣೆ ವೈಫಲ್ಯವೇ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸೋಲಿಗೆ ಕಾರಣ: ಎಸ್.ಆರ್.ಹಿರೇಮಠ

ದೇಶದಲ್ಲಿ ಕೊರೊನಾ ನಿರ್ವಹಣೆ ವೈಫಲ್ಯವೇ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸೋಲಿಗೆ ಕಾರಣವಾಗಿದೆ. ಮುಂಬರುವ ಚುನಾವಣೆ ವೇಳೆ ಆ ಪಕ್ಷ ಹೀನಾಯವಾಗಿ ಸೋಲಬೇಕು. ಈ ಹಿಂದೆ ಇಂದಿರಾಗಾಂಧಿ ಸೋತಂತೆ ಬಿಜೆಪಿ ಸೋಲು ಕಾಣಲಿದೆ. ದೇಶದಲ್ಲಿ ಪರಿಸ್ಥಿತಿ ಎಮರ್ಜೆನ್ಸಿಗಿಂತ ಗಂಭೀರವಾಗಿದೆ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್ ಹಿರೇಮಠ ಹೇಳಿದರು.‌

ಎಸ್.ಆರ್ ಹಿರೇಮಠ
ಎಸ್.ಆರ್ ಹಿರೇಮಠ
author img

By

Published : Aug 29, 2021, 3:25 PM IST

Updated : Aug 29, 2021, 3:32 PM IST

ಬಳ್ಳಾರಿ: ಸೆ.18ರಂದು ಸರ್ಕಾರದ ವಿರುದ್ಧ ಹೋರಾಟಕ್ಕೆ ಸಿದ್ಧತೆ ಮಾಡಿಕೊಳ್ಳಲು ದೆಹಲಿಯಲ್ಲಿ ಸಮಾನ ಮನಸ್ಕರ ಸಭೆ ನಡೆಯಲಿದೆ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಹೇಳಿದರು.‌

ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್ ಹಿರೇಮಠ

ನಗರದ ಪತ್ರಿಕಾಭವನದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ನಿರ್ವಹಣೆಯಲ್ಲಿ ಮೋದಿ ಸರ್ಕಾರ ವಿಫಲವಾಗಿದೆ. ದೇಶದಲ್ಲಿ ಕೊರೊನಾ ನಿರ್ವಹಣೆ ವಿಫಲವೇ ಪಶ್ಚಿಮ ಬಂಗಾಳದಲ್ಲಿ ಸೋಲಿಗೆ ಕಾರಣವಾಗಿದೆ. ಕೊರೊನಾ ವೇಳೆ ಕುಂಭ ಮೇಳಕ್ಕೆ ಅವಕಾಶ ಕೊಟ್ಟ ಮಹಾನ್ ವ್ಯಕ್ತಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಎಂದು ವ್ಯಂಗ್ಯವಾಡಿದರು.‌

ಮುಂಬರುವ ಚುನಾವಣೆ ವೇಳೆ ಬಿಜೆಪಿ ಹೀನಾಯವಾಗಿ ಸೋಲಬೇಕು. ಈ ಹಿಂದೆ ಇಂದಿರಾಗಾಂಧಿ ಸೋತಂತೆ ಬಿಜೆಪಿ ಸೋಲು ಕಾಣಲಿದೆ. ಬಿಜೆಪಿ, ಆರ್​ಎಸ್​ಎಸ್ ಸಂಘ ಪರಿವಾರ, ಸೇರಿದಂತೆ ಎನ್‌ಡಿಎ ಎಲ್ಲ ಅಂಗಪಕ್ಷಗಳು ಸೋಲಬೇಕು ಎಂದರು.

ನಾಚಿಕೆ ಇಲ್ಲದ ಈ ಸರ್ಕಾರಕ್ಕೆ ದೆಹಲಿಯಲ್ಲಿ ಹೋರಾಟ ಮಾಡುತ್ತಿರುವ ರೈತರ ಕಷ್ಟ ತಿಳಿಯುತ್ತಿಲ್ಲ. ದೇಶದಲ್ಲಿ ಪರಿಸ್ಥಿತಿ ಎಮರ್ಜೆನ್ಸಿಗಿಂತ ಗಂಭೀರವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: ಕೆಂಗೇರಿವರೆಗಿನ ‘ನಮ್ಮ ಮೆಟ್ರೋ’ ರೈಲು ಸೇವೆಗೆ ಸಿಎಂ ಬೊಮ್ಮಾಯಿ ಹಸಿರು ನಿಶಾನೆ

Last Updated : Aug 29, 2021, 3:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.