ಬಳ್ಳಾರಿ: ನಗರದ ರೇಡಿಯೋ ಪಾರ್ಕ್ನಲ್ಲಿನ ಮಹಾ ಗಣಪತಿ ದೇವಸ್ಥಾನದಲ್ಲಿ ಬೆಳಿಗ್ಗೆ 3 ಗಂಟೆ 30 ನಿಮಿಷದಿಂದ ಗಣಪತಿಗೆ ವಿಶೇಷ ಪೂಜೆ, ಅಭಿಷೇಕ ಅರ್ಪಿಸಲಾಯಿತು.
ಫಲ ಪಂಚಾಮೃತ ಅಭಿಷೇಕ, ವಿವಿಧ ಪುಷ್ಪ ಅಭಿಷೇಕ, ಗಂಧ ಲೇಪಿತ ಅಭಿಷೇಕ ಹೀಗೆ ಅನೇಕ ಅಭಿಷೇಕ, ಪೂಜೆಗಳನ್ನು ಗಣೇಶ ಚತುರ್ಥಿಯಂದು ಮಾಡಲಾಗುತ್ತದೆ.
ಜೀವನ ಪರ್ಯಂತ ಧರ್ಮ ಆಚರಣೆಗಳನ್ನು ಮಾಡುತ್ತಾನೊ, ಆ ಮಾನವನ್ನು ಸಕಲ ಸೌಕ್ಯಗಳನ್ನು ಅನುಭವಿಸಿ, ಕೈವಲ್ಯ ಪ್ರಾರ್ಥಿ ಪಡೆಯುತ್ತಾನೆ ಎನ್ನುವ ಮಾತು ವೇದ ಉಪನಿಷತ್ತು ನಲ್ಲಿದೆ. ಜೀವನದಲ್ಲಿ ಧರ್ಮ ಆಚರಣೆಗಳನ್ನು ಮಾಡುತ್ತ ಇರುವವರ ಮನಸ್ಸು ಮತ್ತು ಬುದ್ಧಿ ಕೋರಿಕೆಗಳಿಗೆ ಅವಕಾಶಗಳನ್ನು ಧರ್ಮ ಮಾರ್ಗದಲ್ಲಿ ಕಲ್ಪಿಸಲಾಗಿದೆ. ಹಾಗೇ ನಡೆಯಬೇಕು ಎಂಬ ಪ್ರೇರಣ ಶಕ್ತಿ ನೀಡುವ ಮಹಾನುಭಾವನೆ ಈ ವಿಘ್ನೇಶ್ವರ ಎಂದು ಅರ್ಚಕ ಮಹೇಶ ಶರ್ಮಾ ಹೇಳಿದರು.