ETV Bharat / state

ಗಣಿನಾಡಿನಲ್ಲಿ ಸಂಭ್ರಮದ ಮಣ್ಣೆತ್ತಿನ ಅಮಾವಾಸ್ಯೆ.. ಜೋಡೆತ್ತುಗಳಿಗೆ ವಿಶೇಷ ಪೂಜೆ!

ಮಣ್ಣೆತ್ತಿನ ಅಮಾವಾಸ್ಯೆಯನ್ನು ಸಂಭ್ರಮ-ಸಡಗರದಿಂದ ಆಚರಿಸಲಾಯಿತು. ಜೋಡಿ ಮಣ್ಣೆತ್ತುಗಳು ಹಾಗೂ ಗೋದಲಿಯನ್ನು ಖರೀದಿಸಿ ಈ ದಿನ ಬೆಳಿಗ್ಗೆಯೇ ವಿಶೇಷ ಹೂವಿನ ಅಲಂಕಾರದ ಮೂಲಕ ಪೂಜೆ ಸಲ್ಲಿಸಲಾಯಿತು.

ಗಣಿನಾಡಿನಲ್ಲಿ ಸಂಭ್ರಮದ ಮಣ್ಣೆತ್ತಿನ ಅಮಾವಾಸ್ಯೆ.
author img

By

Published : Jul 2, 2019, 11:56 PM IST

ಬಳ್ಳಾರಿ: ಹೈದರಾಬಾದ್​ ಕರ್ನಾಟಕ ಭಾಗದ ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿಯಲ್ಲಿ ಮಣ್ಣೆತ್ತಿನ ಅಮಾವಾಸ್ಯೆಯನ್ನು ಸಂಭ್ರಮ-ಸಡಗರದಿಂದ ಆಚರಿಸಲಾಯಿತು. ಜೋಡಿ ಮಣ್ಣೆತ್ತುಗಳು ಹಾಗೂ ಗೋದಲಿಯನ್ನು ಖರೀದಿಸಿ ಈ ದಿನ ವಿಶೇಷ ಹೂವಿನ ಅಲಂಕಾರದ ಮೂಲಕ ಪೂಜೆ ಸಲ್ಲಿಸಲಾಯಿತು.

ಬಳ್ಳಾರಿ ಜಿಲ್ಲೆಯ ಗ್ರಾಮೀಣ ಪ್ರದೇಶದ ಪ್ರತಿಯೊಬ್ಬರ ಮನೆಗಳಲ್ಲೂ ಕೂಡ ದೇವರ ಜಗುಲಿಯ ಮೇಲೆ ಈ ಮಣ್ಣಿನಿಂದ ತಯಾರಿಸಿದ ಜೋಡೆತ್ತುಗಳನ್ನು ಇಟ್ಟು ಪೂಜೆ ಮಾಡುತ್ತಾರೆ. ‌ಗೋಧಿ ಹುಗ್ಗಿ, ಕಾಯಿಪಲ್ಯೆ, ಅನ್ನ, ಸಾಂಬಾರ್ ಮಡೆಸ್ನಾನದಿಂದ ತಯಾರಿಸಿ, ಮಾದ್ಲಿ ಮಾಡಿ ಜೋಡಿ ಮಣ್ಣೆತ್ತುಗಳಿಗೆ ನೈವೇದ್ಯ ಮಾಡುತ್ತಾರೆ. ಬಳಿಕ ಮನೆಮಂದಿ ಸಹಭೋಜನ ಸವಿಯುತ್ತಾರೆ. ನಾಳೆಯ ದಿನ ಈ ಜೋಡಿ ಮಣ್ಣೆತ್ತುಗಳ ಕರಿಹರಿಬಿಡುವ ಭರಾಟೆ ಜೋರಾಗಿಯೇ ಇರುತ್ತದೆ.

ಗಣಿನಾಡಿನಲ್ಲಿ ಸಂಭ್ರಮದ ಮಣ್ಣೆತ್ತಿನ ಅಮಾವಾಸ್ಯೆ..

ರೈತಾಪಿ ವರ್ಗದ ಅಚ್ಚುಮೆಚ್ಚಿನ ಹಬ್ಬಗಳಲ್ಲೊಂದು:

ಉತ್ತರ ಕರ್ನಾಟಕ ಹಾಗೂ ಹೈ-ಕ ಭಾಗದ ನಾನಾ ಜಿಲ್ಲೆಗಳಲ್ಲಿನ ಗ್ರಾಮೀಣ ಪ್ರದೇಶ ವ್ಯಾಪ್ತಿಯಲ್ಲಿ ಜೀವಿಸುವ ರೈತಾಪಿ ವರ್ಗದಲ್ಲಿ ಈ ಮಣ್ಣೆತ್ತಿನ‌ ಅಮಾವಾಸ್ಯೆಯು ಒಂದು.‌ ಈ ಅಮಾವಾಸ್ಯೆ ಆಚರಣೆ ಮಾಡಲು ರೈತಾಪಿ ವರ್ಗದವರ ಮನೆಗಳಲ್ಲಿ ಸಂಭ್ರಮ ಮೂಡುತ್ತದೆ. ನಗರ ಪ್ರದೇಶಗಳಲ್ಲಿ ವಾಸಿಸುತ್ತಿರುವ ರೈತರು ಈ ದಿನ ತಮ್ಮ ಗ್ರಾಮಗಳತ್ತ ತೆರಳಿ, ಭೂಮಿ ತಾಯಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಕೆಲವರು ಆ ಭೂಮಿಯ‌ ಮಣ್ಣಿನಿಂದಲೇ ಜೋಡೆತ್ತುಗಳನ್ನು ತಯಾರಿಸುತ್ತಾರೆ. ನಗರ ಪ್ರದೇಶಗಳಲ್ಲಿ ಜೀವಿಸುವವರು ಕುಂಬಾರರು ತಯಾರಿಸಿದ ಮಣ್ಣೆತ್ತುಗಳನ್ನು ಖರೀದಿಸುವ ವಾಡಿಕೆ ಈ ಭಾಗದಲ್ಲಿದೆ.

ಮಣ್ಣೆತ್ತುಗಳ ಮಾರಾಟದ ಭರಾಟೆ ಜೋರು:

ಗಣಿನಾಡಿನಲ್ಲಿ ಮಣ್ಣೆತ್ತುಗಳ ಮಾರಾಟದ ಭರಾಟೆ ಜೋರಾಗಿಯೇ ಸಾಗಿತ್ತು.‌ ಬಳ್ಳಾರಿ ನಗರದ ಕುಂಬಾರ ಓಣಿ, ಬೆಂಗಳೂರು ರಸ್ತೆ, ಗಡಿಗಿ ಚನ್ನಪ್ಪ ವೃತ್ತ, ಸತ್ಯನಾರಾಯಣ ಪೇಟೆಯಲ್ಲಿನ ರಾಘವೇಂದ್ರ ಸ್ವಾಮಿ ದೇಗುಲ, ಕನಕದುರ್ಗಮ್ಮ ದೇಗುಲ, ಕುಮಾರಸ್ವಾಮಿ ದೇಗುಲ ಸೇರಿದಂತೆ ಇತರೆಡೆ ನಿನ್ನೆ ಹಾಗೂ ಈ ದಿನವೂ ಮಣ್ಣೆತ್ತುಗಳ ಮಾರಾಟ ನಡೆಯಿತು.‌

Intro:ಗಣಿನಾಡಿನಲ್ಲಿ ಸಂಭ್ರಮದ ಮಣ್ಣೆತ್ತಿನ ಅಮಾವಾಸ್ಯೆ
ಜೋಡಿ ಮಣ್ಣೆತ್ತಿನ ಎತ್ತುಗಳಿಗೆ ವಿಶೇಷ ಪೂಜಾಲಂಕಾರ!
ಬಳ್ಳಾರಿ: ಹೈಕ ಭಾಗದ ಅವಳಿ ಜಿಲ್ಲೆಗಳಾದ ರಾಯಚೂರು, ಕೊಪ್ಪಳ ಹಾಗೂ ಗಣಿನಾಡು ಬಳ್ಳಾರಿಯಲ್ಲಿ ಈ ಮಣ್ಣೆತ್ತಿನ ಅಮಾವಾಸ್ಯೆಯನ್ನು ಅತ್ಯಂತ ಸಂಭ್ರಮ- ಸಡಗರದಿಂದ ಆಚರಿಸಲಾಯಿತು.
ಜೋಡಿ ಮಣ್ಣೆತ್ತಿನ ಎತ್ತುಗಳು ಹಾಗೂ ಗೋದಲಿಯನ್ನು ಖರೀದಿಸಿ ಈ ದಿನ ಬೆಳ್ಳಂಬೆಳಿಗ್ಗೆಯೇ ವಿಶೇಷ ಹೂವಿನ ಅಲಂಕಾರದ ಮೂಲಕ ಪೂಜೆ ಸಲ್ಲಿಸಲಾಯಿತು.
ಗಣಿನಾಡು ಬಳ್ಳಾರಿ ಜಿಲ್ಲೆಯ ವಿವಿಧ ತಾಲೂಕಿನ ನಾನಾ ಗ್ರಾಮೀಣ ಪ್ರದೇಶದ ಪ್ರತಿಯೊಬ್ಬರ ಮನೆಗಳಲ್ಲೂ ಕೂಡ ದೇವರ ಜಗುಲಿಯ ಮೇಲೆ ಈ ಮಣ್ಣಿನಿಂದ ತಯಾರಿಸಿದ ಜೋಡೆತ್ತುಗಳನ್ನು ಇಟ್ಟು ಪೂಜೆ ಮಾಡುತ್ತಾರೆ. ‌ಗೋಧಿ ಹುಗ್ಗಿ, ಕಾಯಿಪಲ್ಯೆ, ಅನ್ನ, ಸಾಂಬಾರ್ ಮಡೆಸ್ನಾನದಿಂದ ತಯಾರಿಸಿ, ಮೊದ್ಲು ಜೋಡಿ ಮಣ್ಣೆತ್ತುಗಳಿಗೆ ನೈವೇದ್ಯ ಮಾಡುತ್ತಾರೆ. ಆ ಬಳಿಕ ಮನೆಮಂದಿಯೆಲ್ಲಾ ಸಹಭೋಜನ ಸವಿಯುತ್ತಾರೆ. ನಾಳೆಯ ದಿನ ಈ ಜೋಡಿ ಮಣ್ಣೆತ್ತುಗಳ ಕರಿಹರಿಬಿಡುವ ಭರಾಟೆ ಈ ಭಾಗದ ಗ್ರಾಮೀಣ ಪ್ರದೇಶಗಳಲ್ಲಿ ಜೋರಾಗಿ
ಯೇ ಇರುತ್ತದೆ.‌

Body:ರೈತಾಪಿ ವರ್ಗದ ಅಚ್ಚುಮೆಚ್ಚಿನ ಹಬ್ಬಗಳಲ್ಲೊಂದು: ಉತ್ತರ ಕರ್ನಾಟಕ ಹಾಗೂ ಹೈದರಾಬಾದ ಕರ್ನಾಟಕ ಭಾಗದ ನಾನಾ ಜಿಲ್ಲೆಗಳಲ್ಲಿನ ಗ್ರಾಮೀಣ ಪ್ರದೇಶ ವ್ಯಾಪ್ತಿಯಲ್ಲಿ ಜೀವಿಸುವ ರೈತಾಪಿ ವರ್ಗದಲ್ಲಿ ಈ ಮಣ್ಣೆತ್ತಿನ‌ ಅಮಾವಾಸ್ಯೆಯು ಒಂದು.‌
ಈ ಅಮಾವಾಸ್ಯೆ ಆಚರಣೆ ಮಾಡಲು ರೈತಾಪಿ ವರ್ಗದವರ ಮನೆಗಳಲ್ಲಿ ಸಂಭ್ರಮ ಮೂಡುತ್ತದೆ. ನಗರ ಪ್ರದೇಶಗಳಲ್ಲಿ ವಾಸಿಸುತ್ತಿರುವ ರೈತರು ಈ ದಿನ ತಮ್ಮತಮ್ಮ ಗ್ರಾಮಗಳತ್ತ ತೆರಳಿ, ಭೂಮಿ ತಾಯಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಕೆಲ ವರು ಆ ಭೂಮಿಯ‌ ಮಣ್ಣಿನಿಂದಲೇ ಜೋಡೆತ್ತುಗಳನ್ನು ತಯಾರಿಸುತ್ತಾರೆ. ನಗರ ಪ್ರದೇಶಗಳಲ್ಲಿ ಜೀವಿಸುವವರು ಕುಂಬಾರರು ತಯಾರಿಸಿದ ಮಣ್ಣೆತ್ತುಗಳನ್ನು ಖರೀದಿಸುವ ವಾಡಿಕೆ ಈ ಭಾಗದಲ್ಲಿದೆ.
ಮಣ್ಣೆತ್ತುಗಳ ಮಾರಾಟದ ಭರಾಟೆ ಜೋರು: ಗಣಿನಾಡಿನಲ್ಲಿ ಮಣ್ಣೆತ್ತುಗಳ ಮಾರಾಟದ ಭರಾಟೆ ಜೋರಾಗಿಯೇ ಸಾಗಿತ್ತು.‌
ಬಳ್ಳಾರಿ ನಗರದ ಕುಂಬಾರ ಓಣಿ, ಬೆಂಗಳೂರು ರಸ್ತೆ, ಗಡಿಗಿ ಚನ್ನಪ್ಪ ವೃತ್ತ, ಸತ್ಯನಾರಾಯಣ ಪೇಟೆಯಲ್ಲಿನ ರಾಘವೇಂದ್ರ ಸ್ವಾಮಿ ದೇಗುಲ, ಕನಕದುರ್ಗಮ್ಮ ದೇಗುಲ, ಕುಮಾರಸ್ವಾಮಿ ದೇಗುಲ ಸೇರಿದಂತೆ ಇತರೆಡೆ ನಿನ್ನೆ ಹಾಗೂ ಈ ದಿನವೂ ಮಣ್ಣೆ ತ್ತುಗಳ ಮಾರಾಟ ನಡೆಯಿತು.‌ ಸಾರ್ವಜನಿಕರು ಮಣ್ಣೆತ್ತುಗಳ ಖರೀದಿಗೂ‌ ಮುಗಿಬಿದ್ದಿರುವ ಸಾಮಾನ್ಯವಾಗಿತ್ತು. ಈ ಸಂಜೆ ಕೂಡ ಮಣ್ಣೆತ್ತುಗಳ ವಿಶೇಷ ಪೂಜಾಲಂಕಾರ ನಡೆಯಿತು.
ರೈತರ ಮಕ್ಕಳಲ್ಲಿ ಮನೆಮಾಡಿದ ಸಂಭ್ರಮ: ರೈತಾಪಿವರ್ಗದ ಮನೆಯ ಮಕ್ಕಳ ಅಚ್ಚುಮೆಚ್ಚಿನ ಮಣ್ಣೆತ್ತಿನ‌ ಅಮಾವಾಸ್ಯೆ ಇದಾಗಿದೆ. ಕಾರಹುಣ್ಣಿಮೆ ದಿನದಂದು ಜೋಡೆತ್ತುಗಳನ್ನು ಕರಿ ಹರಿಬಿಡುವ ಮೂಲಕ ಜಾನುವಾರುಗಳ ವಿಶೇಷಪೂಜೆಯನ್ನು ರೈತಾಪಿವರ್ಗ ಮಾಡಿದರೆ, ಈ‌ ಮಣ್ಣೆತ್ತುಗಳ ಅಮಾವಾಸ್ಯೆಯು ರೈತಾಪಿವರ್ಗದ ಮಕ್ಕಳಲ್ಲಿ ಸಂಭ್ರಮ ಮೂಡಿಸುವ ಹಬ್ಬವಾಗಿ ಪರಿಣಮಿಸಿದೆ.‌ ಹೀಗಾಗಿ, ಹಬ್ಬವನ್ನು ಅತ್ಯಂತ ವಿಶಿಷ್ಟ ರೀತಿಯಲ್ಲಿ ಆಚರಿಸಲಾಗುತ್ತದೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_02_MANETHINA_AMAVASHE_STORY_VISUALS_7203310

KN_BLY_02a_MANETHINA_AMAVASHE_STORY_VISUALS_7203310

KN_BLY_02b_MANETHINA_AMAVASHE_STORY_VISUALS_7203310

KN_BLY_02c_MANETHINA_AMAVASHE_STORY_VISUALS_7203310

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.