ETV Bharat / state

ಡಿಸಿ ಮತ್ತು ಎಸ್​ಪಿ ಮತಗಟ್ಟೆಗೆ ಭೇಟಿ ನೀಡಿದ ವೇಳೆ ಸಿಬ್ಬಂದಿ ಮೊಬೈಲ್ ನಲ್ಲಿ ಮಗ್ನ

ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆ ಜಿಲ್ಲಾಧಿಕಾರಿ ಮತ್ತು ಎಸ್​ಪಿ ಮತಗಟ್ಟೆಗೆ ಭೇಟಿ ನೀಡಿದ್ದರು. ಈ ವೇಳೆ ಮೊಬೈಲ್​ನಲ್ಲಿ ಮಗ್ನರಾಗಿದ್ದ ಪೊಲೀಸ್​ ಸಿಬ್ಬಂದಿ ಮತ್ತು ಚುನಾವಣಾ ಏಜೆಂಟ್​ರನ್ನು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ತರಾಟೆಗೆ ತೆಗೆದುಕೊಂಡಿದ್ದಾರೆ.

poll booth
poll booth
author img

By

Published : Apr 27, 2021, 7:10 PM IST

Updated : Apr 27, 2021, 8:42 PM IST

ಬಳ್ಳಾರಿ: ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆ ಮತದಾನ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ವರಿಷ್ಠಾಧಿಕಾರಿ ಜೇಬಿನಲ್ಲಿ ಮೊಬೈಲ್​ ಇಟ್ಟುಕೊಂಡಿದ್ದ ಏಜೆಂಟ್ ಅನ್ನು ಎದ್ದು ಹೊರ ಹೋಗಿ ಎಂದು ಆದೇಶಿಸಿದ ಘಟನೆ ನಡೆದಿದೆ.

ಗ್ರಾಮಾಂತರ ಪ್ರದೇಶದ ಅಲ್ಲಿಪುರದ ಧಾರಮಿಲ್ಲಿನ ಹತ್ತಿರದ ಸರ್ಕಾರಿ ಪ್ರಾಥಮಿಕ ಶಾಲೆಗೆ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಅವರು ಭೇಟಿ ನೀಡಿದ ವೇಳೆ ಈ ಘಟನೆ ನಡೆದಿದೆ. ಮಾಸ್ಕ್ ಗಳನ್ನು ವಿತರಿಸಿ ಮತದಾರರಿಗೆ ಸಾಮಾಜಿಕ ಅಂತರದೊಂದಿಗೆ, ಮತದಾನ ಮಾಡಿ ಎಂದು ಎಚ್ಚರಿಕೆ ನೀಡಿದರು.

ಡಿಸಿ ಮತ್ತು ಎಸ್​ಪಿ ಮತಗಟ್ಟೆಗೆ ಭೇಟಿ ನೀಡಿದ ವೇಳೆ ಸಿಬ್ಬಂದಿ ಮೊಬೈಲ್ ನಲ್ಲಿ ಮಗ್ನ

ಕೌಲಬಜಾರ್ ಪ್ರದೇಶದ ಮಹಮ್ಮದಿಯ ಕಾಲೇಜ್ ನ ಮತಗಟ್ಟೆಗೆ ಭೇಟಿ ನೀಡಿದ ಕ್ಷಣದಲ್ಲಿ, ಪ್ರವೇಶ ದ್ವಾರದಲ್ಲಿ ಪೊಲೀಸ್​​ ಕಾನ್ಸ್​ಟೇಬಲ್​ ಮೊಬೈಲ್ ನೋಡುತ್ತಾ ಕುಳಿತಿದ್ದನ್ನು ಸಹ ಎಸ್​ಪಿ ಪ್ರಶ್ನಿಸಿದರು. ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಅವರು ಮತಗಟ್ಟೆಗೆ ಭೇಟಿ ನೀಡಿದಾಗ ಥರ್ಮಲ್ ಸ್ಯ್ಕಾನರ್ ಹೇಗೆ ? ಬಳಕೆ ಮಾಡಬೇಕು ಎಂದು ಆಶಾ ಕಾರ್ಯಕರ್ತೆಗೆ ಸಹ ಪ್ರಶ್ನೆ ಮಾಡಿದ್ರು.

Last Updated : Apr 27, 2021, 8:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.