ETV Bharat / state

ದೆಹಲಿ ಕಾರ್ಯಕ್ರಮಕ್ಕೆ ಹೋಗಿ ಬಂದ ಕೆಲವರು ಟೆರರಿಸ್ಟ್ ಮನಸ್ಥಿತಿಗಳು: ಸೋಮಶೇಖರ ರೆಡ್ಡಿ ಕಿಡಿ

ತಮಿಳುನಾಡು, ಆಂಧ್ರ ಪ್ರದೇಶದಲ್ಲಿ ಕೊರೊನಾ ವೈರಸ್ ಸೋಂಕಿನ ಭೀತಿ ಹೆಚ್ಚಾಗಿದೆ‌. ಒಂದ್ವೇಳೆ ಇವರು ಚಿಕಿತ್ಸೆಗೆ ಸಹಕರಿಸಿದ್ದರೆ ಈ ದೇಶದಲ್ಲಿ ಇಷ್ಟೊಂದು ಸೊಂಕಿತ ಪ್ರಕರಣಗಳು ವರದಿಯಾಗುತ್ತಿರಲಿಲ್ಲ. ಯಾರು ಏನೇ ಮಾಡಿದ್ರೂ ಭಗವಂತ ನಮ್ಮನ್ನು ಕಾಪಾಡುತ್ತಾನೆ ಎಂದು ಸೋಮಶೇಖರ ರೆಡ್ಡಿ ಹೇಳಿದರು.

ಸೋಮಶೇಖರ ರೆಡ್ಡಿ
ಸೋಮಶೇಖರ ರೆಡ್ಡಿ
author img

By

Published : Apr 5, 2020, 2:48 PM IST

Updated : Apr 5, 2020, 3:17 PM IST

ಬಳ್ಳಾರಿ: ದೆಹಲಿಯ ನಿಜಾಮುದ್ದೀನ್‌ನಲ್ಲಿ ನಡೆದ ತಬ್ಲಿಘಿ ಧರ್ಮಸಭೆಗೆ ಹೋಗಿ ವಾಪಸ್ ಬಳ್ಳಾರಿಗೆ ಬಂದವರ ವಿರುದ್ದ ಬಳ್ಳಾರಿ‌ ನಗರ ಶಾಸಕ ಸೋಮಶೇಖರ ರೆಡ್ಡಿ ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಚಿಕಿತ್ಸೆಗೆ ಸಹಕಾರ ಕೊಡಲ್ಲ ಅಂದ್ರೆ ಇವರದು ಅದೆಂಥಾ ಮನಸ್ಥಿತಿ ಅಂತ ನೀವೇ ಅರ್ಥ ಮಾಡ್ಕೊಳಿ. ಇಂತಹ ಟೆರರಿಸ್ಟ್ ಮನಸ್ಥಿತಿಗಳಿಗೆ ಏನು ಮಾಡಬೇಕು? ಎಲ್ಲರೂ ಟೆರರಿಸ್ಟ್ ಮನಸ್ಥಿತಿಯವರು ಅಂತಾ ನಾನು ಹೇಳಲ್ಲ. ಕೆಲವರು ಮೇಲೆ ಒಳ್ಳೆಯವರಂತೆ ಕಂಡ್ರೂ ಮನಸ್ಥಿತಿಗಳು ಟೆರರಿಸ್ಟ್‌ಗಳ ರೀತಿಯೇ ಇರುತ್ತದೆ ಎಂದು ವಾಗ್ದಾಳಿ ನಡೆಸಿದರು.

ಸೋಮಶೇಖರ ರೆಡ್ಡಿ

ತಮಿಳುನಾಡು, ಆಂಧ್ರಪ್ರದೇಶದಲ್ಲಿ ಈ ಕೊರೊನಾ ವೈರಸ್ ಸೋಂಕಿನ ಭೀತಿ ಹೆಚ್ಚಾಗಿದೆ‌. ಒಂದು ವೇಳೆ ಇವರು ಚಿಕಿತ್ಸೆಗೆ ಸಹಕರಿಸಿದ್ದರೆ ಈ ದೇಶದಲ್ಲಿ ಇಷ್ಟೊಂದು ಕೇಸ್‌ಗಳು ದಾಖಲಾಗುತ್ತಿರಲಿಲ್ಲ. ಯಾರು ಏನೇ ಮಾಡಿದ್ರೂ ಭಗವಂತ ನಮ್ಮನ್ನು ಕಾಪಾಡುತ್ತಾನೆ. ಅದಕ್ಕೆ ಮೋದಿ ಹೇಳಿದಂತೆ ದೀಪ ಹಚ್ಚುತ್ತೇವೆ. ಕೆಲವು ಕೋಮುವಾದಿಗಳು ದೀಪ ಹಚ್ಚಲ್ಲ. ಆದ್ರೆ, ನಾವು ಹಚ್ಚದಿರುವವರ ಪರವಾಗಿ ದೀಪ ಹಚ್ಚಿ ಕವರ್ ಮಾಡ್ತೇವೆ. ನಮ್ಮ ಮನೆಯಲ್ಲಿ 150 ದೀಪ ಹಚ್ಚುತ್ತೇವೆ ಎಂದರು.

ಉದ್ದೇಶ ಪೂರ್ವಕವಾಗಿಯೇ ಅವರು ಹೀಗೆ ಮಾಡ್ತಿದಾರೆ. ಬೇರೆಯವರಿಗೆ ರೋಗ ಹರಡಬೇಕು ಅಂತಾನೇ ಹೀಗೆ ಮಾಡ್ತಿದ್ದಾರೆ. ಜಮಾತ್ ಮರ್ಕಜ್‌ನಿಂದ ಈ ದೇಶಕ್ಕೆ ಸಾಕಷ್ಟು ಹಾನಿಯಾಗಿದೆ. ಇಲ್ಲಾಂದ್ರೆ ನಮ್ಮ ದೇಶದಲ್ಲಿ ಸಾವಿರದ ಕೆಳಗೆ ಸೋಂಕಿನ ಸಂಖ್ಯೆ ಇರ್ತಾ ಇತ್ತು ಎಂದು ಕಿಡಿಕಾರಿದರು.

Last Updated : Apr 5, 2020, 3:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.