ETV Bharat / state

ರಾಜಕೀಯದಲ್ಲಿ ರೆಡ್ಡಿ - ರಾಮುಲು ಬೆಳೆಯಲು ರಾಮಲಿಂಗಪ್ಪನವರೇ ಮೂಲ ಕಾರಣ: ಸೋಮಶೇಖರ್ ರೆಡ್ಡಿ - ಸೋಮಶೇಖರ್ ರೆಡ್ಡಿ ಲೇಟೆಸ್ಟ್ ನ್ಯೂಸ್

ರಾಮಲಿಂಗಪ್ಪ ಅವರಿಂದಲೇ ಕರುಣಾಕರ ರೆಡ್ಡಿ, ಜನಾರ್ದನ ರೆಡ್ಡಿ, ಶ್ರೀರಾಮುಲು ಮತ್ತು ನಾನು ರಾಜಕೀಯದಲ್ಲಿ ಬೆಳೆಯಲಲು ಸಾಧ್ಯವಾಯಿತು ಎಂದು ಶಾಸಕ ಜಿ.ಸೋಮಶೇಖರ್ ರೆಡ್ಡಿ ತಿಳಿಸಿದ್ದಾರೆ.

somashekar reddy latest news
ಸೋಮಶೇಖರ್ ರೆಡ್ಡಿ
author img

By

Published : Dec 4, 2020, 1:42 AM IST

ಬಳ್ಳಾರಿ: ಕರುಣಾಕರ ರೆಡ್ಡಿ, ಜನಾರ್ದನ ರೆಡ್ಡಿ, ಶ್ರೀರಾಮುಲು ಮತ್ತು ನಾನು ರಾಜಕೀಯದಲ್ಲಿ ಈ ಮಟ್ಟಕ್ಕೆ ಬೆಳೆಯಲು ಮೂಲ ಕಾರಣಕರ್ತರು ರಾಮಲಿಂಗಪ್ಪ ಅವರು ಎಂದು ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ್ ರೆಡ್ಡಿ ತಿಳಿಸಿದ್ದಾರೆ.

ನಗರದ ಬಿಡಿಎಎ ಫುಟ್ಬಾಲ್ ಮೈದಾನದ ಸಭಾಂಗಣದಲ್ಲಿ ನಡೆದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಬಳ್ಳಾರಿ ನಗರ ಶಾಸಕ‌ ಜಿ.ಸೋಮಶೇಖರ್ ರೆಡ್ಡಿ, ರಾಮಲಿಂಗಪ್ಪ ಅವರಿಂದಲೇ ಇಂದು ನಾವೆಲ್ಲ ರಾಜಕೀಯದಲ್ಲಿ ಬೆಳೆಯಲಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.

ರಾಮಲಿಂಗಪ್ಪ ಅವರು ತಮ್ಮ ಸ್ವಾರ್ಥ ನೋಡಿಕೊಳ್ಳುವುದಿಲ್ಲ. ನಾನು ರಾಜಕೀಯಕ್ಕೆ ಬರೋಲ್ಲ ಎಂದು ಕೈ ಮುಗಿದರು ಸಹ, ನೀನು ರಾಜಕೀಯಕ್ಕೆ ಬಾ ಎಂದು ಬೆನ್ನು ತಟ್ಟುವ ಕೆಲಸ ಮಾಡಿದರು. ನನ್ನನ್ನು ಕಾರ್ಪೋರೇಟರ್, ಉಪಮೇಯರ್, ಮೇಯರ್ ಹಾಗೂ ಎರಡು ಬಾರಿ ಶಾಸಕ, ಕೆ.ಎಂ.ಎಫ್ ಅಧ್ಯಕ್ಷನನ್ನಾಗಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಸೋಮಶೇಖರ್ ರೆಡ್ಡಿ, ಶಾಸಕ

ಮುಂದಿನ ದಿನಗಳಲ್ಲಿ ಕುರುಬ ಸಮಾಜದ ಹಾಸ್ಟೆಲ್ ಸ್ಥಳದಲ್ಲಿ ಎರಡು ಕಡೆ ವ್ಯಾಪಾರಕ್ಕಾಗಿ ಮಳಿಗೆಗಳ ನಿರ್ಮಾಣ ಮಾಡಿ, ಅದರಿಂದ ಬಂದ ಹಣದಿಂದ ವಿದ್ಯಾರ್ಥಿಗಳಿಗೆ ಉಚಿತ ಹಾಸ್ಟೆಲ್ ಸೌಲಭ್ಯವನ್ನು ಕಲ್ಪಿಸುವ ಕೆಲಸ ಆಗಬೇಕು ಎನ್ನುವ ಗುರಿಯನ್ನು ಹೊಂದಿದ್ದೆವೆ. ಅದರ ಸದುಪಯೋಗ ಪಡೆದುಕೊಂಡು ದೊಡ್ಡ ಹುದ್ದೆಗಳಿಗೆ ಮಕ್ಕಳು ಹೋಗಬೇಕು ಎನ್ನುವುದು ನಮ್ಮ ಆಶಯ ಎಂದರು.

ಬಿ.ಶ್ರೀರಾಮುಲು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾಗಿದ್ದಾಗ ಅವರು ಸಹ 50 ಲಕ್ಷ ಹಣವನ್ನು ಕುರುಬ ಸಮಾಜಕ್ಕೆ ನೀಡಿದ್ದಾರೆ‌. ಹಾಸ್ಟೆಲ್ ಸೌಲಭ್ಯಗಳನ್ನು ಪಡೆದು ಐಎಎಸ್, ಕೆಎಎಸ್ ಅಧಿಕಾರಿಗಳಾಗಿ ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡುವ ಯುವಕರಾಗಬೇಕು ಎಂದು ಶಾಸಕ ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.