ಹಂಪಿ: ತಾಯಿ ಪ್ರೀತಿಗೆ ಈ ಭೂಮಿ ಮೇಲೆ ಯಾರೂ ಸಾಟಿಯಿಲ್ಲ ಎಂಬ ಮಾತು ಸಾವಿರಾರು ಸಲ ಸಾಬೀತುಗೊಂಡಿದೆ. ತಾಯಿ ಎದುರು ಆ ದೇವರೇ ಸಲಾಂ ಹೊಡೆಯುತ್ತಾನೆಂಬ ಮಾತಿದೆ. ಇದೀಗ ಹಂಪಿಯಲ್ಲಿ ನಡೆದ ಘಟನೆಯೊಂದು ಅದಕ್ಕೆ ಸಾಕ್ಷಿಯಾಗಿದೆ.
ಕೆರೆ ಹಾವೊಂದು ಮರಕಟಿಗ ಹಕ್ಕಿಯ ಗೂಡಿಗೆ ನುಗ್ಗಿ ಮರಿಯನ್ನ ನುಂಗಲು ಯತ್ನಿಸಿದ್ದು, ಈ ವೇಳೆ ತನ್ನ ಮರಿಯನ್ನು ಉಳಿಸಿಕೊಳ್ಳಲು ತಾಯಿ ಹಕ್ಕಿ ಹಾವಿನೊಂದಿಗೆ ಕಾದಾಟ ನಡೆಸಿದೆ. ಈ ದೃಶ್ಯವನ್ನು ಮಂಜುನಾಥ ಕೆಂಪಣ್ಣವರ್ ಎಂಬುವವರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.
ಮರಕುಟಿಕ ಪಕ್ಷಿ ತನ್ನ ಕೊಕ್ಕಿನಲ್ಲಿ ಹಾವಿನ ದೇಹವನ್ನು ಗಾಯಗೊಳಿಸಿ ಓಡಿಸುವ ಪ್ರಯತ್ನ ಮಾಡುತ್ತದೆ. ಆದರೆ ಕೆಲವೇ ನಿಮಿಷದಲ್ಲಿ ಹಾವು ಮರಿಯನ್ನು ಕಚ್ಚಿಕೊಂಡು ಮರದಿಂದ ಕೆಳಗಿಳಿಯಿತು. ಇದಾದ ಬಳಿಕ ಮರಕುಟಿಕ ಹಕ್ಕಿಗೆ ಏನೂ ಮಾಡಲು ಸಾಧ್ಯವಾಗಲಿಲ್ಲ. ಆದರೆ ಮರಿ ರಕ್ಷಣೆ ಮಾಡಿಕೊಳ್ಳಲು ತಾಯಿ ಹಕ್ಕಿ ನಡೆಸಿರುವ ಧೈರ್ಯಕ್ಕೆ ಇನ್ನಿಲ್ಲದ ಮೆಚ್ಚುಗೆ ವ್ಯಕ್ತವಾಗಿದೆ.