ETV Bharat / state

ಸಿದ್ಧಾರ್ಥ್​ ನಾಪತ್ತೆ: ಮಂತ್ರಾಲಯ ಶ್ರೀ ಕಳವಳ - ಶ್ರೀಸುಬುಧೇಂದ್ರ ತೀರ್ಥ ಸ್ವಾಮೀಜಿ ಕಳವಳ

ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅಳಿಯ ಹಾಗೂ ಕಾಫಿ ಡೇ ಮಾಲೀಕ ಸಿದ್ಧಾರ್ಥ್​ ನಾಪತ್ತೆಯಾಗಿರೋದಕ್ಕೆ ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದ್ದಾರೆ.

ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥ ಸ್ವಾಮೀಜಿ
author img

By

Published : Jul 30, 2019, 10:18 PM IST

ಬಳ್ಳಾರಿ: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಳಿಯ ಸಿದ್ಧಾರ್ಥ್​ ನಾಪತ್ತೆಯಾಗಿರೋದಕ್ಕೆ ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದ್ದಾರೆ.ಜಿಲ್ಲೆಯ ಹೊಸಪೇಟೆ ನಗರದ ರಾಣಿಪೇಟೆ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿಂದು

ಚಾರ್ತುಮಾಸದ ನಿಮಿತ್ತ ಭಕ್ತರಿಗೆ ತಪ್ತ ಮುದ್ರಾಧಾರಣೆ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಸಿದ್ಧಾರ್ಥ್​ ಅವರು ಕಣ್ಮರೆಯಾಗಿರೋದು ಬೇಸರದ ಸಂಗತಿ. ಸಿದ್ಧಾರ್ಥ್​ ಹಾಗೂ ಎಸ್.ಎಂ. ಕೃಷ್ಣ ಮೊದಲಿನಿಂದಲೂ ಮಠದೊಂದಿಗೆ ಉತ್ತಮ ಒಡನಾಟ ಹೊಂದಿದ್ದರು ಎಂದರು ತಿಳಿಸಿದರು.

coffee day owner
ಸಿದ್ಧಾರ್ಥ ನಾಪತ್ತೆ: ಮಂತ್ರಾಲಯ ಶ್ರೀ ಕಳವಳ

ಯಾವುದೇ ತೊಂದರೆಯಾಗದಂತೆ ದೇವರು ಹಾಗೂ ಗುರುರಾಯರು ಸುರಕ್ಷಿತವಾಗಿ ಸಿದ್ಧಾರ್ಥ್​ ಅವರನ್ನು ವಾಪಸ್ ಮನೆಗೆ ಕರೆತರಲಿ ಎಂದರು. ಮಂತ್ರಾಲಯದಲ್ಲಿ ಇಂದು 7ನೇ ಚಾರ್ತುಮಾಸ ವ್ರತದಲ್ಲಿ ಶ್ರೀರಾಯರ ಕೋಟಿ ಸುಳಾದಿ ಜಪಯಜ್ಞ ಸೇರಿದಂತೆ ಧಾರ್ಮಿಕ, ಆಧ್ಯಾತ್ಮಿಕ, ಹೋಮ, ಹವನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

Intro:ಮಾಜಿ ಸಿಎಂ ಎಸ್.ಎಂ. ಕೃಷ್ಣರ ಅಳಿಯ ಸಿದ್ಧಾರ್ಥ ನಾಪತ್ತೆಗೆ ಮಂತ್ರಾಲಯ ಶ್ರೀ ಕಳವಳ
ಬಳ್ಳಾರಿ: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಳಿಯ ಸಿದ್ಧಾರ್ಥ ನಾಪತ್ತೆಯಾಗಿರೋದಕ್ಕೆ ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಹೊಸಪೇಟೆ ನಗರದ ರಾಣಿಪೇಟೆ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿಂದು ಚಾರ್ತುಮಾಸದ ನಿಮಿತ್ತ ಭಕ್ತರಿಗೆ ತಪ್ತ ಮುದ್ರಾಧಾರಣೆ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಎಸ್‍ಎಂ ಕೃಷ್ಣ ಅವರ ಅಳಿಯ ಸಿದ್ಧಾರ್ಥರವರು ಉಳ್ಳಾಲ ಸಮೀಪದ ಸೇತುವೆಯಿಂದ ಕಣ್ಮರೆಯಾಗಿರೋದು ಬೇಸರದ ಸಂಗತಿ. ಸಿದ್ಧಾರ್ಥ ಅವರು ಹಾಗೂ ಎಸ್.ಎಂ. ಕೃಷ್ಣ ಅವರು ಮೊದಲಿನಿಂದಲೂ ಮಠದೊಂದಿಗೆ ಉತ್ತಮ ಒಡನಾಟವನ್ನು ಹೊಂದಿದ್ದರು. ಆರ್.ವಿ. ಎಂಜಿನಿಯರಿಂಗ್ ಕಾಲೇಜು, ಎಬಿಸಿ ಸಂಸ್ಥೆ, ಕಾಫಿಡೇ ಸಂಸ್ಥೆ ಸೇರಿದಂತೆ ಇನ್ನಿತರೆ ಉದ್ಯಮಿ ಹೊಂದಿದ್ದು ಉತ್ತಮ ಸೇವೆ ಸಲ್ಲಿಸುತ್ತಿದ್ದರು. ಸಿದ್ಧಾರ್ಥ ಅವರಿಗೆ ಯಾವುದೇ ತೊಂದರೆ, ಹಾನಿಯಾಗದಂತೆ ದೇವರಲ್ಲಿ ಹಾಗೂ ಗುರುರಾಯರು ಸುರಕ್ಷಿತವಾಗಿ ವಾಪಸ್ ಮನೆಗೆ ಕರೆತರಲಿ ಎಂದರು.
ಮಂತ್ರಾಲಯದಲ್ಲಿ ಜು. 30ರಿಂದ ಕೈಗೊಳ್ಳುವ 7ನೇ ಚಾರ್ತುಮಾಸ ವ್ರತದಲ್ಲಿ ಶ್ರೀರಾಯರ ಕೋಟಿ ಸುಳಾದಿ ಜಪಯಜ್ಞ ಸೇರಿದಂತೆ ಧಾರ್ಮಿಕ, ಆಧ್ಯಾತ್ಮಿಕ, ಹೋಮ, ಹವನ, ಸಾಮಾಜಿಕ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
Body:ಶ್ರೀಮಠದ ವಿಚಾರಣಾಕರ್ತರಾದ ಗುರುರಾಜ ದಿಗ್ಗಾವಿ, ನರಸಿಂಹ ಮೂರ್ತಿ(ಅಪ್ಪಣ್ಣ), ಮಂತ್ರಾಲಯ ಶ್ರೀಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ಜಿಲ್ಲಾ ಸಮನ್ವಯಾಧಿಕಾರಿ ಅನಂತ ಪದ್ಮನಾಭ ರಾವ್, ಶ್ರೀಮಠದ ವ್ಯವಸ್ಥಾಪಕರಾದ ತಿರುಮಲ, ರಾಮಕೃಷ್ಣ, ಟೀಕಾಚಾರ್ಯ, ಬಿಜೆಪಿ ಮಂಡಲ ಅಧ್ಯಕ್ಷ ಅನಂತ ಪದ್ಮನಾಭ ಸ್ವಾಮಿ, ಹಿಂದೂಪರ ಸಂಘಟನೆ ಮುಖಂಡ ಅನಿಲ್ ಜೋಷಿ, ಮಠದ ಭಕ್ತರಾದ ಆಲೂರು ಮುರುಳೀಧರ, ಪ್ರಹ್ಲಾದಾಚಾರ್ಯ, ಭೀಮಸೇನ ಆಚಾರ್ಯ, ವಿಜಯೇಂದ್ರ ದೇಸಾಯಿ, ವಿನಯ ಕುಮಾರ ಇದ್ದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_4_MANTRALAYA_SREE_SPEECH_7203310
ETV Bharat Logo

Copyright © 2024 Ushodaya Enterprises Pvt. Ltd., All Rights Reserved.