ಬಳ್ಳಾರಿ: ಗಣಿನಾಡಿನಲ್ಲಿ ಶ್ರಾವಣ ಮಾಸದ ಕಡೆಯ ಸೋಮವಾರದ ಸಂಭ್ರಮ ಮನೆಮಾಡಿತ್ತು. ತಾಲೂಕಿನ ಬೇವಿನಹಳ್ಳಿ ಗ್ರಾಮದ ಸಂಗಮೇಶ್ವರ ದೇಗುಲದಲ್ಲಿಂದು ಭಕ್ತರು ಅನ್ನಸಂತರ್ಪಣೆ ಮಾಡಿದರು.
ಆ ಗ್ರಾಮದ ಭಕ್ತರು ದೇಗುಲದ ಆವರಣದಲ್ಲೇ ಸ್ವತಃ ಗೋಧಿ ಹುಗ್ಗಿ, ಅನ್ನ ಸಾಂಬಾರ್, ಮೆಣಸಿನಕಾಯಿ ಚಟ್ನಿ, ಬದನೆಕಾಯಿ ಪಲ್ಯ ತಯಾರಿಸಿ, ನೆರೆಹೊರೆಯ ಗ್ರಾಮಗಳ ಭಕ್ತರಿಗೆ ಹಾಗೂ ಸ್ವಗ್ರಾಮದ ಭಕ್ತರಿಗೆ ಉಣಬಡಿಸಿದರು.
ಸಂಗಮೇಶ್ವರನಿಗೆ ಎಲೆಪೂಜೆ
ಗ್ರಾಮದ ಸಂಗಮೇಶ್ವರನ ದೇಗುಲದಲ್ಲಿಂದು ಬೇವಿನಹಳ್ಳಿಯ ಗ್ರಾಮಸ್ಥರು ಎಲೆಪೂಜೆ ಕಟ್ಟಿಸಿದರು. ಬಳಿಕ, ದೇಗುಲದ ಆವರಣದಲ್ಲೇ ಮಹಿಳೆಯರು ಭೋಜನ ಪಂಕ್ತಿಯಲ್ಲಿ ಗೋಧಿಹುಗ್ಗಿ, ಅನ್ನಸಾಂಬಾರ್ ಉಣ ಬಡಿಸಿದರು.
ಸ್ವತಃ ಮಹಿಳೆಯರೇ ಭಕ್ತರಿಗೆ ಭೋಜನ ಉಣಬಡಿಸುವುದು ಇಲ್ಲಿ ವಿಶೇಷವೆನಿಸಿತ್ತು. ಸಂಜೆ ಹೊತ್ತಿಗೆ ಗ್ರಾಮದ ಸಂಗಮೇಶ್ವರ ದೇಗುಲಕ್ಕೆ ವಿಶೇಷ ಪೂಜೆಯನ್ನು ಸಲ್ಲಿಸುವ ಮೂಲಕ ಕಡೆಯ ಸೋಮವಾರದ ಸಂಭ್ರಮಕ್ಕೆ ತೆರೆ ಎಳೆಯಲಿದ್ದಾರೆ.
ಕಡೆಯ ಸೋಮವಾರವಾದ್ದರಿಂದ ದೂರದ ನಗರ ಮತ್ತು ಪಟ್ಟಣ ಪ್ರದೇಶಗಳಿಗೆ ನೌಕರಿಗೆ ತೆರಳಿದವರು ಹಾಗೂ ಮನೆಯ ಹೆಣ್ಣುಮಕ್ಕಳು ಈ ದಿನದಂದು ಇಲ್ಲಿ ಸೇರಿಕೊಂಡೇ ಸಂಭ್ರಮಿಸೋದು ವಿಶೇಷವೇ ಸರಿ.