ಬಳ್ಳಾರಿ: ಶತಾಯುಷಿ ಈರಮ್ಮ ಹೊಸಪೇಟೆ ದಾಸೋಹಮಠ (105) ಅವರು ಇಂದು ಬೆಳಿಗ್ಗೆ ವಿಧಿವಶರಾಗಿದ್ದಾರೆ. ಈರಮ್ಮ ಅವರ ದೇಹ, ಕಣ್ಣುಗಳನ್ನು ಕುಟುಂಬಸ್ಥರು ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವಿದ್ಯಾರ್ಥಿಗಳ ಅಧ್ಯಯನ ಹಾಗೂ ಸಂಶೋಧನೆಗಾಗಿ ದಾನ ಮಾಡಿದರು.
1914 ರಂದು ರಾಯಚೂರು ಜಿಲ್ಲೆಯ ಮಟಮಾರಿಯಲ್ಲಿ ಸಾಂಪ್ರದಾಯಿಕ ಕುಟುಂಬದಲ್ಲಿ ಇರಮ್ಮ ಜನಿಸಿದ್ದರು. 1975 ರಲ್ಲಿ ಹೊಸಪೇಟೆಯ ಚೋಳಯ್ಯ ಸ್ವಾಮಿ ಅವರೊಂದಿಗೆ ವಿವಾಹವಾಗಿದ್ದರು.2005ರಲ್ಲಿ ಪತಿ, ಪುತ್ರ ಮೃತಪಟ್ಟ ಬಳಿಕ ಬಳ್ಳಾರಿಯ ಸಂಜಯ ಗಾಂಧಿ ನಗರದಲ್ಲಿ ಸೊಸೆ ಹಾಗೂ ಮೊಮ್ಮಗನ ಕುಟುಂಬದೊಂದಿಗಿದ್ದರು.
ಈರಮ್ಮನವರಿಗೆಇತ್ತೀಚೆಗೆ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಸನ್ಮಾನ ಮಾಡಲಾಗಿತ್ತು.