ಬಳ್ಳಾರಿ: ಲಾಕ್ಡೌನ್ ಜಾರಿ ಇದ್ದರೂ ಕೂಡ ನಗರದಲ್ಲಿಂದು ಚಿಕನ್ ಮಾರಾಟ ಜೋರಾಗಿ ನಡೆದಿದೆ. ಮೇ 24 ಮತ್ತು 25ರಂದು ಬೆಳಗ್ಗೆ 6ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಅದರ ಮುನ್ನಾ ದಿನವಾದ ಇಂದು ಜನರು ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದಾರೆ.
ನಗರದ ಮೋಕಾ ರಸ್ತೆಯಲ್ಲಿರುವ ಚಿಕನ್ ಶಾಪ್ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಂಡು ಮಾಂಸ ಖರೀದಿಗೆ ಜನರು ಸಾಲಾಗಿ ನಿಂತಿರೋದು ಕಂಡುಬಂದಿತು. ಇಂದು ಯಾವುದೇ ಅಂಗಡಿ ಮುಂಗಟ್ಟುಗಳ ತೆರೆಯಲಿಕ್ಕೆ ಅನುಮತಿ ನೀಡಿಲ್ಲ. ಆದರೂ ಸಹ ಚಿಕನ್ ಮಾರಾಟ ಮಾತ್ರ ಜೋರಾಗಿಯೇ ನಡೆದಿದೆ.