ಹೊಸಪೇಟೆ (ವಿಜಯನಗರ): ತುಂಗಭದ್ರಾ ಜಲಾಶಯದಲ್ಲಿ ನೀರಿನ ಸೋರಿಕೆ ತಡೆಗಟ್ಟಲು 33 ಕ್ರಸ್ಟ್ ಗೇಟ್ಗಳಿಗೆ ರಬ್ಬರ್ ಸೀಲ್ ವರ್ಕ್ ಮಾಡಲಾಗುತ್ತಿದೆ. ಕ್ರಸ್ಟ್ ಗೇಟ್ನ ಸೈಡ್ ಮತ್ತು ಬಾಟಂನಲ್ಲಿ ರಬ್ಬರ್ ಸೀಲ್ ವರ್ಕ್ ಮಾಡಲಾಗುತ್ತಿದೆ. ರಬ್ಬರ್ ಅಳವಡಿಸುವುದರಿಂದ ಗೇಟ್ಗೆ ಹೆಚ್ಚಿನ ಒತ್ತಡ ಆಗುವುದಿಲ್ಲ. ಅಲ್ಲದೇ ನೀರಿನ ಸೋರಿಕೆ ಕಡಿಮೆ ಮಾಡಬಹುದಾಗಿದೆ.
2015-16ರಲ್ಲಿ ರಬ್ಬರ್ ಸೀಲ್ ಮಾಡಲಾಗಿತ್ತು. ಗೇಟ್ ಮೂಲಕ ಈಗ ನೀರನ್ನು ಹರಿಬಿಡುತ್ತಿಲ್ಲ. ಹಾಗಾಗಿ ಬೇಸಿಗೆ ಸಂದರ್ಭದಲ್ಲಿ ಮಾಡಲಾಗುತ್ತಿದೆ. ‘ಡ್ಯಾಂ ಸೇಫ್ಟಿ ರಿವೀವ್ ಪ್ಯಾನಲ್’ ತಂಡ 5 ವರ್ಷಕ್ಕೊಮ್ಮೆ ಡ್ಯಾಂಗೆ ಭೇಟಿ ನೀಡಿ, ಪರಿಶೀಲನೆ ನಡೆಸಲಿದೆ.
ಬಳಿಕ ಸುರಕ್ಷಾ ಕ್ರಮಗಳನ್ನು ಅನುಸರಿಸಲು ಸೂಚನೆ ನೀಡಲಿದೆ. ತುಂಗಭದ್ರಾ ಮಂಡಳಿಯ ಇಇ ಮಧುಸೂದನ್ ಮಾತನಾಡಿ, ಕಳೆದ ಒಂದು ತಿಂಗಳಿಂದ ರಬ್ಬರ್ ಸೀಲ್ ವರ್ಕ್ ಮಾಡಲಾಗುತ್ತಿದೆ. ಇದನ್ನು ಪ್ರತಿ 5 ವರ್ಷಕ್ಕೊಮ್ಮೆ ಮಾಡಲಾಗುತ್ತದೆ. ಜಲಾಶಯದ ಸುರಕ್ಷತೆ ಹಾಗೂ ನೀರಿನ ಸೋರಿಕೆ ತಡೆಗಟ್ಟಲು ರಬ್ಬರ್ ಸೀಲ್ ಸಹಾಯ ಮಾಡಲಿದೆ ಎಂದರು.
ಇದನ್ನೂ ಓದಿ: ಎಣ್ಣೆ ಪ್ರಿಯರಿಗೆ ಬಿಗ್ ಶಾಕ್.. ಈ ನಿಗದಿಗಿಂತ ಹೆಚ್ಚು 'ಲಿಕ್ಕರ್' ಖರೀದಿಸಿದ್ರೆ 3 ವರ್ಷ ಜೈಲು,10 ಪಟ್ಟು ದಂಡ