ಬಳ್ಳಾರಿ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು, ಬಳ್ಳಾರಿಯಿಂದ-ಬೆಂಗಳೂರು ರಾಜಹಂಸ ಬಸ್ ಸಾರಿಗೆ ಹಾಗೂ ಬಳ್ಳಾರಿಯಿಂದ-ಶಿವಮೊಗ್ಗ ಹಾಗೂ ದಾವಣಗೆರೆ ಮಾರ್ಗಗಳಲ್ಲಿ ಸಂಚರಿಸುವ ಬಸ್ಗಳಿಗೆ ಮಾತ್ರ ಬಸ್ ಪ್ರಯಾಣ ದರಗಳನ್ನು ಇಳಿಕೆ ಮಾಡಲಾಗಿದೆ ಎಂದು ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಶಂಭೂಕಾರ್ ರಾಮರಾವ್ ಚಂದ್ರಶೇಖರ್ ತಿಳಿಸಿದ್ದಾರೆ.
ಬಳ್ಳಾರಿಯಿಂದ ಚಿತ್ರದುರ್ಗ ಮಾರ್ಗಕ್ಕೆ 146 ರೂ, ಬಳ್ಳಾರಿಯಿಂದ ಚಳ್ಳಕೆರೆಗೆ 113 ರೂ, ಚಳ್ಳಕೆರೆಯಿಂದ ಚಿತ್ರದುರ್ಗಕ್ಕೆ 30 ರೂ, ಚಿತ್ರದುರ್ಗದಿಂದ ದಾವಣಗೆರೆಗೆ 60 ರೂ, ಚಿತ್ರದುರ್ಗದಿಂದ ಶಿವಮೊಗ್ಗಕ್ಕೆ 90 ರೂ, ಬಳ್ಳಾರಿಯಿಂದ ಬೆಂಗಳೂರು ಮಾರ್ಗಕ್ಕೆ 421 ರೂ., ಚಳ್ಳಕೆರೆಯಿಂದ ಬೆಂಗಳೂರು ಮಾರ್ಗಕ್ಕೆ 260 ರೂ., ಹಿರಿಯೂರಿನಿಂದ ಬೆಂಗಳೂರು ಮಾರ್ಗಕ್ಕೆ 260 ರೂ. ಪ್ರೋತ್ಸಾಹದಾಯಕ ಪ್ರಯಾಣ ದರ ನಿಗದಿಪಡಿಸಲಾಗಿದೆ.
ಪ್ರತಿದಿನ ಬೆಳಿಗ್ಗೆ 08.30ಕ್ಕೆ ಬಳ್ಳಾರಿಯಿಂದ ಶಿವಮೊಗ್ಗ, ಬೆಳಿಗ್ಗೆ 9ಕ್ಕೆ ಬಳ್ಳಾರಿಯಿಂದ ದಾವಣಗೆರೆ ಹಾಗೂ ರಾತ್ರಿ 10.15ಕ್ಕೆ ಬಳ್ಳಾರಿಯಿಂದ ಬೆಂಗಳೂರು ಮಾರ್ಗಕ್ಕೆ ವೇಗದೂತ, ರಾಜಹಂಸ ಬಸ್ ಸಂಚರಿಸುತ್ತಿವೆ. ಇಳಿಕೆ ಮಾಡಿದ ಪ್ರೋತ್ಸಾಹದಾಯಕ ಪ್ರಯಾಣ ದರಗಳ ಸೌಲಭ್ಯವನ್ನು ಪ್ರಯಾಣಿಕರು ಸದುಪಯೋಗಪಡಿಸಿ ಕೊಳ್ಳಬೇಕು ಎಂದು ಅವರು ಕೋರಿದ್ದಾರೆ.