ETV Bharat / state

ಹೊಸಪೇಟೆ ತಾಲೂಕಿನಾದ್ಯಂತ ಜಿಟಿಜಿಟಿ ಮಳೆ... - hospete rain news

ಹೊಸಪೇಟೆ ತಾಲೂಕಿನಲ್ಲಿ ಸಂಜೆ ಎಡೆಬಿಡದೆ ಜಿಟಿ ಜಿಟಿ ಮಳೆಯಾಗಿದೆ.

author img

By

Published : Sep 12, 2020, 10:25 PM IST

ಹೊಸಪೇಟೆ: ತಾಲೂಕಿನಲ್ಲಿ ಸಂಜೆ ಎಡೆಬಿಡದೆ ಜಿಟಿ ಜಿಟಿ ಮಳೆಯಾಗಿದೆ.‌ ಬೆಳಿಗ್ಗೆ ಬಿಸಿಲಿನಿಂದ ಕೂಡಿದ ವಾತಾವರಣ ಸಂಜೆಯಾಗುತ್ತಿದ್ದಂತೆ ಜಿಟಿ ಜಿಟಿ ಮಳೆ ಪ್ರಾರಂಭವಾಯಿತು.

ಸಂಜೆ 5.45 ರಿಂದ ಪ್ರಾರಂಭವಾದ ಮಳೆ 6.45 ರವರೆಗೆ ಸುರಿಯುತ್ತಿತ್ತು. ನಗರದ ಚಿತ್ತವಾಡ್ಗಿ, ಪಟೇಲ್ ನಗರ, ವಾಲ್ಮೀಕಿ ವೃತ್ತ, ಅಂಬೇಡ್ಕರ್​ ವೃತ್ತ, ಪುಣ್ಯಮೂರ್ತಿ ವೃತ್ತ, ರಾಮಾ ಟಾಕೀಸ್, ಗಾಂಧಿ ಪ್ರತಿಮೆ, ಮೇನ್ ಬಜಾರ್, ಏಳು ಕೇರಿ ಸೇರಿದಂತೆ ವಿವಿಧೆಡೆ ಮಳೆಯಾಗಿದೆ.

ಹೊಸಪೇಟೆ ತಾಲೂಕಿನಲ್ಲಿ ಸಂಜೆ ಒಂದು ಗಂಟೆ ಸತತವಾಗಿ ಜಿಟಿ ಜಿಟಿ ಮಳೆಯಾಗಿದೆ.

ಇನ್ನು ತಾಲೂಕಿನ ಹಂಪಿ, ಕಡ್ಡಿರಾಂಪುರ, ಕಮಲಾಪುರ, ಮರಿಯಮ್ಮನಹಳ್ಳಿ ಸೇರಿದಂತೆ ನಾನಾ ಕಡೆ ಜಿಟಿ‌‌‌ ಜಿಟಿ ಮಳೆಯಾಗಿದೆ ಎಂದು ವರದಿಯಾಗಿದ್ದು, ಕಳೆದ ಎರಡು ಮೂರು ದಿನಗಳಿಂದ ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.