ETV Bharat / state

ಹೊಸಪೇಟೆಯಲ್ಲಿ 'ಅಪ್ಪು' ಪುತ್ಥಳಿ ಅನಾವರಣ - ಹೊಸಪೇಟೆಯಲ್ಲಿ ಪುನೀತ್ ರಾಜ್​ಕುಮಾರ್ ಪುತ್ಥಳಿ ಅನಾವರಣ

ಹೊಸಪೇಟೆಯಲ್ಲಿ ದಿ. ಪುನೀತ್ ರಾಜ್​ಕುಮಾರ್ ಅವರ ಏಳು ಅಡಿ ಎತ್ತರದ ಕಂಚಿನ ಪುತ್ಥಳಿಯನ್ನು ಅಭಿಮಾನಿಗಳು ಪ್ರತಿಷ್ಠಾಪನೆ ಮಾಡಿದ್ದಾರೆ..

'ಅಪ್ಪು' ಪುತ್ಥಳಿ
'ಅಪ್ಪು' ಪುತ್ಥಳಿ
author img

By

Published : Jun 5, 2022, 4:09 PM IST

Updated : Jun 5, 2022, 9:16 PM IST

ವಿಜಯನಗರ : ಹೊಸಪೇಟೆ ನಗರದಲ್ಲಿ ಪ್ರತಿಷ್ಠಾಪಿಸಲಾಗಿರುವ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಅವರ ಕಂಚಿನ ಪುತ್ಥಳಿಯನ್ನು ರಾಘವೇಂದ್ರ ರಾಜ್ ಕುಮಾರ್ ಅನಾವರಣಗೊಳಿಸಿದರು. ಈ ವೇಳೆ ರಾಘವೇಂದ್ರ ರಾಜ್​ಕುಮಾರ್​ ಹಾಗೂ ಅವರ ಪತ್ನಿ ಮಂಗಳಾ ಅವರು ದುಃಖ ತಡೆಯಲಾಗದೆ ಕಣ್ಣೀರು ಹಾಕಿದರು.

'ಅಪ್ಪು' ಪುತ್ಥಳಿ ಅನಾವರಣ ಸಂಭ್ರಮ

ಇದಕ್ಕೂ ಮುನ್ನ ರಾಘವೇಂದ್ರ ರಾಜ್‌ಕುಮಾರ್ ಅವರು ಹೊಸಪೇಟೆಗೆ ಬಂದ ವೇಳೆ ಅಪ್ಪು ಅಭಿಮಾನಿಗಳು ಸ್ವಾಗತಿಸಿದರು. ಈ ವೇಳೆ ಮಾತನಾಡಿದ ಅವರು, ಪುನೀತ್ ರಾಜ್​ಕುಮಾರ್​ ಮೇಲಿರುವ ಪ್ರೀತಿ, ವಿಶ್ವಾಸ, ಅಭಿಮಾನಕ್ಕೆ ನಾನು ಕೃತಜ್ಞತೆ ಸಲ್ಲಿಸುತ್ತಿದ್ದೇನೆ ಎಂದು ಹೇಳಿದರು.

ನಾನೊಬ್ಬ ಅಪ್ಪಟ ಅಪ್ಪು ಅಭಿಮಾನಿಯಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದೇನೆ. ಪುನೀತ್ ರಾಜ್ ಕುಮಾರ್​ ಅವರ ಮೇಲೆ ಅಪಾರ ಅಭಿಮಾನ ಇಟ್ಟುಕೊಂಡಿರುವ ಹೊಸಪೇಟೆ ಜನ ಜಿಲ್ಲಾ ಕ್ರೀಡಾಂಗಣಕ್ಕೆ ಹಾಗೂ ನಗರದ ಹೃದಯಭಾಗದಲ್ಲಿರುವ ವೃತ್ತಕ್ಕೆ ಪುನೀತ್ ರಾಜ್‌ಕುಮಾರ್​ ವೃತ್ತ ಎಂದು ನಾಮಕರಣ ಮಾಡಿದ್ದಾರೆ.

'ಅಪ್ಪು' ಪುತ್ಥಳಿ ಅನಾವರಣಕ್ಕೆ ರಾಘವೇಂದ್ರ ರಾಜ್‌ಕುಮಾರ್ ಆಗಮನ

ಇದೀಗ ಈ ವೃತ್ತದಲ್ಲಿ ಪುನೀತ್ ಅವರ ಏಳು ಅಡಿ ಎತ್ತರದ ಕಂಚಿನ ಪುತ್ಥಳಿ ಪ್ರತಿಷ್ಠಾಪನೆ ಮಾಡಿರುವ ಕಾರ್ಯವನ್ನು ಮುಕ್ತ ಕಂಠದಿಂದ ಶ್ಲಾಘಿಸಿ ಅಭಿಮಾನಿಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಓದಿ: ನಿಮ್ಮ ನಿಮ್ಮ ಚಡ್ಡಿ ಉದುರಿಸಿಕೊಳ್ಳಿ, ರಾಜ್ಯದ ಜನರ ಚಡ್ಡಿ ಉದುರಿಸಲು ಹೋಗಬೇಡಿ ; ಹೆಚ್‌ಡಿಕೆ

Last Updated : Jun 5, 2022, 9:16 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.