ETV Bharat / state

ಕುಡಿಯುವ ನೀರಿಗಾಗಿ ಆಗ್ರಹ: ಮರಿಯಮ್ಮನಹಳ್ಳಿ ಪಟ್ಟಣ ಬಂದ್​ ಮಾಡಿ ಬಿಸಿ ಮುಟ್ಟಿಸಿದ ಜನ

ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಹೋರಾಟ ಸಮಿತಿಯು ಮರಿಯಮ್ಮನಹಳ್ಳಿ ಪಟ್ಟಣ ಬಂದ್ ಮಾಡಿ ಪ್ರತಿಭಟನೆ ಮಾಡುತ್ತಿದೆ.

protest
ಮರಿಯಮ್ಮನಹಳ್ಳಿ ಪಟ್ಟಣ ಬಂದ್​ ಮಾಡಿ ಪ್ರತಿಭಟನೆ
author img

By

Published : Oct 10, 2022, 12:21 PM IST

ವಿಜಯನಗರ: ಶಾಶ್ವತ ಕುಡಿಯುವ ನೀರಿಗಾಗಿ ಆಗ್ರಹಿಸಿ ಮರಿಯಮ್ಮನಹಳ್ಳಿ ಪಟ್ಟಣ ಬಂದ್​ಗೆ ಹೋರಾಟ ಸಮಿತಿ ಕರೆ ನೀಡಿದೆ. ಪರಿಣಾಮ ಅಂಗಡಿ ಮುಂಗಟ್ಟುಗಳನ್ನು ಬಂದ್​ ಮಾಡಲಾಗಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ.

ಬೆಳಗ್ಗೆ 10 ಗಂಟೆಯಿಂದ ಸಂಜೆಯವರೆಗೆ ಸ್ವಯಂ ಪ್ರೇರಿತ ಪಟ್ಟಣ ಬಂದ್​ಗೆ ಕರೆ ನೀಡಲಾಗಿದೆ. ಪಟ್ಟಣದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಿದೆ.

ಮರಿಯಮ್ಮನಹಳ್ಳಿ ಪಟ್ಟಣ ಬಂದ್​ ಮಾಡಿ ಪ್ರತಿಭಟನೆ

ಹಲವು ದಶಕಗಳಿಂದ ಮರಿಯಮ್ಮನಹಳ್ಳಿ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಕೂಗಳತೆ ದೂರದಲ್ಲಿ ತುಂಗಭದ್ರಾ ಜಲಾಶಯವಿದ್ದರೂ ಸಹ ಮರಿಯಮ್ಮನಹಳ್ಳಿ ಪಟ್ಟಣಕ್ಕೆ ನೀರಿಲ್ಲ. ಆದ್ರೆ, ದೂರದ ಪಾವಗಡಕ್ಕೆ ಕುಡಿಯುವ ನೀರು ಕೊಂಡೊಯ್ಯಲಾಗುತ್ತಿದೆ. ನಮಗೆ ನೀರು ಕೊಡೋವರೆಗೂ ಪಾವಗಡಕ್ಕೆ ನೀರು ತೆಗೆದುಕೊಂಡು ಹೋಗಲು ಬಿಡುವುದಿಲ್ಲ. ಕೂಡಲೇ ಸಂಬಂಧಪಟ್ಟವರು ಇತ್ತ ಗಮನಹರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಇದನ್ನೂ ಓದಿ: ಗ್ರಾಮಸ್ಥರಿಗೆ ಕಂಟಕವಾಗಿರುವ ಕುಡಿಯುವ ನೀರು : ಕಾಯಿಲೆಗೆ ಬೀಳುತ್ತಿರುವ ಮಕ್ಕಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.