ಬಳ್ಳಾರಿ: ನಗರದ ಸುತ್ತಮುತ್ತಲಿನ ಗ್ರಾಮದ ಜನರ ವೃದ್ಧಾಪ್ಯ ವೇತನ, ವಿಕಲಚೇತರಿಗೆ ಮಾಸಿಕ ಪಿಂಚಣಿ ಸೌಲಭ್ಯ ನೀಡಬೇಕೆಂದು ಒತ್ತಾಯಿಸಿ, ಎಸ್.ಯು.ಸಿ.ಐ ಪಕ್ಷದ ನೇತೃತ್ವದಲ್ಲಿ ವೃದ್ಧರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ತಾಲೂಕಿನ ಶ್ರೀಧರಗಡ್ಡೆ, ಕೋಳೂರು, ಮದಿರೆ, ಬಸರಕೋಡು, ಕುಡಿತಿನಿ, ಸೇರಿ ಮುಂತಾದ ಗ್ರಾಮಗಳಲ್ಲಿ ನೂರಾರು ಫಲಾನುಭವಿಗಳಿದ್ದು, ವೃದ್ಧಾಪ್ಯ ವೇತನ, ಅಂಗವಿಕಲರಿಗೆ ಮಾಸಿಕ ಪಿಂಚಣಿ ನೀಡಬೇಕು. ಹಲವಾರು ತಿಂಗಳ ಪಿಂಚಣಿ ಬಾಕಿಯಿದ್ದು, ಕೆಲವರಿಗೆ ಮಾತ್ರ ನೀಡಲಾಗುತ್ತಿದೆ. ಜೀವನ ವೆಚ್ಚ ದುಬಾರಿಯಾಗಿದ್ದು, ಅಗತ್ಯ ವಸ್ತುಗಳ ದರ ಗಗನಕ್ಕೇರಿದೆ. ಹಾಗಾಗಿ ವಿಳಂಬ ಮಾಡದೇ ಪಿಂಚಣಿ ನೀಡಬೇಕೆಂದು ಜಿಲ್ಲಾ ಕಾರ್ಮಿಕ ಸಮಿತಿ ಕಾರ್ಯದರ್ಶಿ ಎ.ದೇವದಾಸ್ ಆಗ್ರಹಿಸಿದ್ರು.
ಮಾಸಿಕ ₹10 ಸಾವಿರ ಪಿಂಚಣಿ ನೀಡಬೇಕು. ಸಂಕಷ್ಟದಲ್ಲಿರುವ ಜನರಿಗೆ ಪಿಂಚಣಿ ನೀಡಿ ಬದುಕುವ ಭರವಸೆ ಮಾಡಿಸಬೇಕು ಎಂದು ಅವರು ಒತ್ತಾಯಿಸಿದರು.