ETV Bharat / state

ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆಗೆ ವಿರೋಧ: ಬಳ್ಳಾರಿ ಪ್ರತಿಭಟನೆಗೆ ನೀರಸ ಪ್ರತಿಕ್ರಿಯೆ- Live Update - protest in ballary

protest in ballary
ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆ ವಿರೋಧಿಸಿ ಬಳ್ಳಾರಿಯಲ್ಲಿ ಪ್ರತಿಭಟನೆ
author img

By

Published : Nov 26, 2020, 9:37 AM IST

Updated : Nov 26, 2020, 12:24 PM IST

12:21 November 26

ಬಳ್ಳಾರಿ ಬಂದ್​ಗೆ ನೀರಸ ಪ್ರತಿಕ್ರಿಯೆ

ಕೆಲ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಪ್ರಮುಖ ಪಾತ್ರ ವಹಿಸಿದ್ದು ಬಿಟ್ಟರೆ ಹೆಚ್ಚಿನವರು ಭಾಗಿಯಾಗಿಲ್ಲ. ಸಂಜೆ 6 ಗಂಟೆಯವರೆಗೆ ಬಳ್ಳಾರಿ ಬಂದ್ ಇದ್ದು, ಸದ್ಯ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಬಳ್ಳಾರಿ ನಗರ ಕೇಂದ್ರಕ್ಕೆ ಮಾತ್ರ ಈ ಬಂದ್​​ನ ಎಫೆಕ್ಟ್​​ ಸೀಮಿತವಾಗಿದೆ. ಉಳಿದ ತಾಲೂಕಿನಲ್ಲಿ ಎಂದಿನಂತೆ ವಾಹನ ಸಂಚಾರ ನಡೆಯುತ್ತಿದೆ.  

ಕುದುರೆ ಹಾಗೂ ಕತ್ತೆಗಳ ಮೆರವಣಿಗೆ ಈ ಹೋರಾಟದಲ್ಲಿ ಎಲ್ಲರ ಗಮನ ಸೆಳೆಯಿತು. ಪ್ರತಿಭಟನೆಯ ಭಾಗವಾಗಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು, ಮುಖಂಡರು ಬೈಕ್ ಮೆರವಣಿಗೆ ಕೈಗೊಂಡರು.

ಅಹಿತಕರ ಘಟನೆಗಳಿಗೆ ಆಸ್ಪದ ನೀಡಿಲ್ಲ.‌ ಪೊಲೀಸರ ಸರ್ಪಗಾವಲಿನಲ್ಲೇ ಈ ಬಳ್ಳಾರಿ ಬಂದ್ ನಡೆಯುತ್ತಿದೆ.

11:36 November 26

ಕನಕದುರ್ಗಮ್ಮ ದೇವಿಗೆ ಉರುಳು ಸೇವೆ

ಕರ್ನಾಟಕ ಜನಸೈನ್ಯ ಸಂಘಟನೆ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷ ಕೆ. ಎರಿಸ್ವಾಮಿ ಅವರ ನೇತೃತ್ವದಲ್ಲಿ 3 ಮಂದಿ ಕಾರ್ಯಕರ್ತರು ಇಲ್ಲಿನ ಕನಕದುರ್ಗಮ್ಮ ದೇಗುಲದ ಮುಂದೆ ಉರುಳು ಸೇವೆ ಹಾಗೂ 101 ತೆಂಗಿನಕಾಯಿ ಒಡೆಯೋ ಮೂಲಕ ವಿಶೇಷ ಹರಕೆ ತೀರಿಸಿದರು.

ಜಿಲ್ಲೆಯ ವಿಭಜನೆಗೆ ಸಿಎಂ ಬಿಎಸ್​ವೈ ಮತ್ತು ಸಚಿವ ಆನಂದಸಿಂಗ್​​ ಕಾರಣೀಕರ್ತರಾಗಿದ್ದಾರೆ ಎಂದು ಕೆ. ಎರಿಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.  

09:39 November 26

ಗ್ರಾಮಾಂತರ ಪ್ರದೇಶದಲ್ಲೂ ಪ್ರತಿಭಟನೆಗೆ ಬೆಂಬಲ

ಗ್ರಾಮಾಂತರ ಪ್ರದೇಶದ ಕೌಲಬಜಾರ್, ಸುಧಾಕ್ರಾಸ್, ರೇಡಿಯೋ ಪಾರ್ಕ್, ಕುವೆಂಪು ನಗರ ರಸ್ತೆ, ತಿಲಕ‌ನಗರದಲ್ಲಿ ಕೂಡ ಬಂದ್​​ಗೆ ಬೆಂಬಲ ವ್ಯಕ್ತವಾಗಿದ್ದು, ಅನೇಕ ಅಂಗಡಿ ಮುಂಗಟ್ಟುಗಳನ್ನು ಬಂದ್​​ ಮಾಡಲಾಗಿದೆ. ಆದ್ರೆ ಅಗತ್ಯ ವಸ್ತುಗಳನ್ನು ಕೊಳ್ಳಲು ಹೂ-ಹಣ್ಣು , ತರಕಾರಿ, ಹಾಲು, ಮೆಡಿಕಲ್, ಕಿರಾಣಿ ಅಂಗಡಿಗಳು ತೆರೆದಿದ್ದವು.  

ಬಳ್ಳಾರಿ ಗ್ರಾಮಾಂತರ ಪ್ರದೇಶದ ಶಾಸಕ ನಾಗೇಂದ್ರ, ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆ ಖಂಡಿಸಿ ವಿರೋಧ ವ್ಯಕ್ತ ಪಡಿಸಿರುವ ಹಿನ್ನೆಲೆ, ಅನೇಕರಿಂದ ಬಂದ್​​ಗೆ ಬೆಂಬಲ ವ್ಯಕ್ತವಾಗುತ್ತಿದೆ.

08:40 November 26

ಬಳ್ಳಾರಿ ಬಂದ್​​​

ಬಳ್ಳಾರಿ: ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆ ವಿರೋಧಿಸಿ ನಗರದಲ್ಲಿ ಇಂದು ಬೆಳ್ಳಂಬೆಳಗೆ ಜನರು ಹೋರಾಟಕ್ಕಿಳಿದಿದ್ದಾರೆ. ಬಳ್ಳಾರಿ ಬಂದ್ ಆಚರಣೆ ಸಲುವಾಗಿ ನಾನಾ ಸಂಘಟನೆಗಳ ಮುಖಂಡರು ಟೈಯರ್​ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆ ವಿರೋಧಿಸಿ ಇಂದು ಅಖಂಡ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿ ಹಮ್ಮಿಕೊಂಡಿರುವ ಬಳ್ಳಾರಿ ಬಂದ್ ಹಿನ್ನೆಲೆಯಲ್ಲಿ, ಗಡಿಗಿ ಚನ್ನಪ್ಪ ವೃತ್ತದಲ್ಲೇ ಅಂದಾಜು 52 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

Last Updated : Nov 26, 2020, 12:24 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.