ಹೊಸಪೇಟೆ: ಸರ್ಕಾರದ ಪರಿಹಾರ ಪ್ಯಾಕೇಜ್ ಸಾಲುತ್ತಿಲ್ಲವೆಂದು ಆಯೋಜಿಸಲಾಗಿದ್ದ ಜನಾಗ್ರಹ ಆಂದೋಲನದ ಭಾಗವಾಗಿ ಕಮಲಾಪುರ ಪಟ್ಟಣದಲ್ಲಿ ಮನೆಯಂಗಳದಲ್ಲಿ ಖಾಲಿ ಪಾತ್ರೆ ಹಿಡಿದು ಪ್ರತಿಭಟಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಾಮಾಜಿಕ ಹೋರಾಟಗಾರ ಕರಿಯಪ್ಪ ಗುಡಿಮನಿ, ಸರ್ಕಾರದ ಪರಿಹಾರ ಪ್ಯಾಕೇಜ್ ಅರೆಕಾಸಿನ ಮಜ್ಜಿಗೆಯಂತಾಗಿದೆ. ಈಗ ಘೋಷಿಸಿರುವ ಪರಿಹಾರದ ಮೊತ್ತ ಜನರ ಕೈಗೆ ಸೇರುವ ಸಾಧ್ಯತೆಯಿಲ್ಲ. ಹೀಗಾಗಿ, ಸರ್ಕಾರದ ಪ್ಯಾಕೇಜ್ ಮೊತ್ತವನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ:ವಿನಾಕಾರಣ ಪೊಲೀಸರಿಂದ ಕಿರಿಕಿರಿ ಆರೋಪ: ಹೊಸಪೇಟೆಯಲ್ಲಿ ಸಾರ್ವಜನಿಕರು-ಸಿಬ್ಬಂದಿ ನಡುವೆ ವಾಗ್ವಾದ
ಸರ್ಕಾರ ನಮ್ಮ ಬೇಡಿಕೆ ಈಡೇರಿಸದಿದ್ದರೆ ಬೆಂಗಳೂರಿಗೆ ಹೋಗಿ ಸಿಎಂ ಮನೆ ಮುಂದೆ ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.