ಬಳ್ಳಾರಿ: ವೇತನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ವಿಜಯನಗರ ವೈದ್ಯಕೀಯ ಮಹಾವಿದ್ಯಾಲಯ(ವಿಮ್ಸ್) ಆವರಣದಲ್ಲಿ 2019-2020ನೇ ಸಾಲಿನ ಗುತ್ತಿಗೆ/ಮಿತಿ ಆಧಾರದ ಶುಶ್ರೂಷಕರು ಪ್ರತಿಭಟನೆ ನಡೆಸಿದರು.
ನಾಲ್ಕು ತಿಂಗಳ ವೇತನ, ಕೋವಿಡ್-19 ಜೀವ ವಿಮೆ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಕೂಡಲೇ ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕು ಎಂದು 112 ಸಿಬ್ಬಂದಿ ಸರ್ಕಾರಕ್ಕೆ ಆಗ್ರಹಿಸಿದರು. ಈ ಕುರಿತು ಪ್ರತಿಭಟನಾಕಾರರು ಈಟಿವಿ ಭಾರತದೊಂದಿಗೆ ನಡೆಸಿದ ಚಿಟ್ಚಾಟ್ ಇಲ್ಲಿದೆ.