ಬಳ್ಳಾರಿ : ರಾಜಸ್ಥಾನದ ಉದಯಪುರದಲ್ಲಿ ನಡೆದ ಕನ್ಹಯ್ಯ ಲಾಲ್ ಅವರ ಭೀಕರ ಹತ್ಯೆಯನ್ನು ಖಂಡಿಸಿ ವಿವಿಧೆಡೆ ಪ್ರತಿಭಟನೆ ನಡೆಯುತ್ತಿದೆ. ಇತ್ತ ಗಣಿನಾಡು ಬಳ್ಳಾರಿಯಲ್ಲೂ ದೇಶಭಕ್ತ ನಾಗರೀಕರ ವೇದಿಕೆಯಿಂದ ಹಿಂದೂಪರ ಸಂಘಟನೆಗಳು ಇಂದು ಸ್ವಯಂ ಪ್ರೇರಿತ ಬಂದ್ ಗೆ ಕರೆ ನೀಡಿದ್ದವು. ಬಂದ್ ನಿಂದಾಗಿ ಬಳ್ಳಾರಿ ನಗರ ಸಂಪೂರ್ಣ ಸ್ತಬ್ಧವಾಗಿತ್ತು.
ಹಿಂದೂಪರ ಸಂಘಟನೆಗಳಿಂದ ಬೈಕ್ ರ್ಯಾಲಿ : ಇಂದು ಬೆಳಗ್ಗೆ 8 ಗಂಟೆಗೆ ರಸ್ತೆಗಿಳಿದ ಕಾರ್ಯಕರ್ತರು ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ರ್ಯಾಲಿ ನಡೆಸಿದರು. ಬೈಕ್ ರ್ಯಾಲಿ ಆರಂಭವಾಗುತ್ತಿದ್ದಂತಿಯೇ ಅಂಗಡಿ- ಮುಗ್ಗಟ್ಟುಗಳು,ಹೊಟೇಲ್ ಗಳನ್ನು ಮಾಲೀಕರು ಬಂದ್ ಮಾಡಿದರು. ಇನ್ನೂ ಕೆಲವು ಕಡೆ ತೆರೆಯಲಾಗಿದ್ದ ಅಂಗಡಿ ಮುಂಗಟ್ಟುಗಳನ್ನು ಪ್ರತಿಭಟನಾಕಾರರು ಬಂದ್ ಮಾಡಿಸಿದರು. ಇನ್ನೂ ಬೆಂಗಳೂರು ರಸ್ತೆಯಲ್ಲಿ ಬಹುತೇಕ ಅಂಗಡಿಗಳು ಮುಚ್ಚಿದ್ದವು. ಚಿತ್ರಮಂದಿರ ಮಾಲೀಕರು ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ್ದರಿಂದ ಥಿಯೇಟರ್ ಗಳು ಮುಚ್ಚಿದ್ದವು.
ನಗರದೆಲ್ಲೆಡೆ ಪೊಲೀಸ್ ಬಿಗಿ ಬಂದೋಬಸ್ತ್ : ಕಳೆದ ಎರಡು ದಿನಗಳ ಹಿಂದೆ ಹೊಸಪೇಟೆಯಲ್ಲಿ ಇದೇ ವಿಚಾರಕ್ಕೆ ನಡೆದ ಪ್ರತಿಭಟನೆಯಲ್ಲಿ ಪರಿಸ್ಥಿತಿ ವಿಕೋಪಕ್ಕೆ ತೆರಳಿ ಪೊಲೀಸರಿಂದ ಲಘು ಲಾಠಿ ಚಾರ್ಜ್ ನಡೆಸಿದ್ದರು. ಈ ಘಟನೆ ಬಳ್ಳಾರಿ ನಗರದಲ್ಲಿ ಮರು ಕಳುಹಿಸಬಾರದು ಎನ್ನುವ ದೃಷ್ಟಿಯಿಂದ ನಗರದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ನಗರದ ಪ್ರಮುಖ ವೃತ್ತಗಳಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು.
ಓದಿ : ಹರ್ಷ ಹತ್ಯೆ ಮಾಡಿದ ಆರೋಪಿಗೆ ಜೈಲಿನಲ್ಲಿ ರಾಜಾತಿಥ್ಯ.. ವಿಡಿಯೋ ವೈರಲ್