ಹೊಸಪೇಟೆ/ಹುಬ್ಬಳ್ಳಿ: ಕಾಶ್ಮೀರಕ್ಕೆ ಪ್ರವಾಸ ಹೋಗಿದ್ದ ವೇಳೆ ಹಿಮಪಾತವಾದ ಕಾರಣ ಖಾಸಗಿ ಹೊಟೇಲ್ನಲ್ಲಿ ಸಿಲುಕಿದ್ದ ಹುಬ್ಬಳ್ಳಿಯ ಎಂಟು ಜನ ಹಾಗೂ ಹೊಸಪೇಟೆಯ ಇಬ್ಬರು ಪ್ರವಾಸಿಗರನ್ನು ರಕ್ಷಿಸಲಾಗಿದೆ. ಒಟ್ಟು 10 ಜನ ಪ್ರವಾಸಿಗರು ಈಗ ಶ್ರೀನಗರದ ಸುರಕ್ಷಿತ ಸ್ಥಳದಲ್ಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಜಮ್ಮು ಮತ್ತು ಕಾಶ್ಮೀರದ ಸೋನಾಮಾರ್ಗದ ಖಾಸಗಿ ಹೋಟೆಲ್‌ನಲ್ಲಿ 10 ಜನ ಉಳಿದುಕೊಂಡಿದ್ದರು. ಹುಬ್ಬಳ್ಳಿಯ ಕೇಶ್ವಾಪುರದ ಅಂಬಿಕಾ ನಗರದ ವೆಂಕಟೇಶ ಜಲಭಂಜನ್ ಕುಟುಂಬದ 8 ಜನ ಮತ್ತು ಹೊಸಪೇಟೆಯ ಪ್ರಕಾಶ್ ಹಾಗೂ ಸುಧಾ ಮೆಹರವಾಡೆ ದಂಪತಿ 9 ದಿನಗಳ ಹಿಂದೆ ಪ್ರವಾಸಕ್ಕೆ ತೆರಳಿದ್ದರು.
ಸೋನಾಮಾರ್ಗದ ಹೊಟೇಲ್ಗೆ ಬಂದ ನಂತರದ ಐದು ದಿನಗಳಲ್ಲಿ ಸುತ್ತಲಿನ ಪ್ರವಾಸಿ ಸ್ಥಳಗಳಿಗೆ ಭೇಟಿ ಕೊಟ್ಟು ವಾಪಸ್ ಬಂದಿದ್ದರು. ನಂತರ ಬೇರೆಲ್ಲೂ ಹೋಗದ ಸ್ಥಿತಿ ನಿರ್ಮಾಣವಾಗಿತ್ತು. ನಿರಂತರ ಹಿಮಪಾತದಿಂದ ರಸ್ತೆಗಳು ಬಂದ್ ಆಗಿದ್ದ ಪರಿಣಾಮ ವಿಡಿಯೋ ಮೂಲಕ ತಮ್ಮ ಅಳಲು ತೋಡಿಕೊಂಡಿದ್ದರು. ನಂತರ ಸಂಬಂಧಿಸಿದ ಅಧಿಕಾರಿಗಳು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿದ್ದಾರೆ.
ಓದಿ:ಹಿಮಪಾತದಿಂದಾಗಿ ಕಾಶ್ಮೀರದಲ್ಲಿ ಸಿಲುಕಿದ ಕನ್ನಡಿಗರು: ರಕ್ಷಣೆಗೆ ಮೊರೆ