ಬಳ್ಳಾರಿ: ಗಣಿನಗರಿ ಬಳ್ಳಾರಿಯಲ್ಲಿಂದು ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ದೇಶಭಕ್ತ ನಾಗರಿಕರ ವೇದಿಕೆ ವತಿಯಿಂದ ಬೃಹತ್ ಮೆರವಣಿಗೆ ನಡೆಯಿತು.
ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರರೆಡ್ಡಿ, ಮಾಜಿ ಸಂಸದ ಸಣ್ಣಫಕ್ಕೀರಪ್ಪ, ಡಾ.ಅರುಣಾ ಕಾಮಿನೇನಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಚನ್ನಬಸವನಗೌಡ ಪಾಟೀಲ್, ಕಲ್ಯಾಣ ಸ್ವಾಮೀಜಿ ನೇತೃತ್ವದಲ್ಲಿ ಸಾವಿರಾರು ಕಾರ್ಯಕರ್ತರು ಬಳ್ಳಾರಿಯ ನಗರೂರು ನಾರಾಯಣರಾವ್ ಪಾರ್ಕಿನಿಂದ ಈ ಬೃಹತ್ ಮೆರವಣಿಗೆ ನಡೆಸಿದರು. ಜೈನ ಧರ್ಮೀಯರಿಂದ ನಡೆದ ಸಾಂಪ್ರದಾಯಿಕ ಕುದುರೆ ಮೆರವಣಿಗೆಯು ವಿಶೇಷವಾಗಿ ಗಮನ ಸೆಳೆಯಿತು. ಈ ವೇಳೆ ಜಿಲ್ಲಾ ಬಿಜೆಪಿಯ ಪ್ರಮುಖರು ಮಾತನಾಡಿ, ಪೌರತ್ವ ತಿದ್ದುಪಡಿ ಕಾಯ್ದೆಗೆ ಬೆಂಬಲ ವ್ಯಕ್ತಪಡಿಸಿದರು.
ಟ್ರಾಫಿಕ್ ಸಮಸ್ಯೆ:
ದೇಶಭಕ್ತ ನಾಗರೀಕ ವೇದಿಕೆಯವರ ಬೃಹತ್ ಮೆರವಣಿಗೆ ಹಿನ್ನೆಲೆ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಯಿತು. ನಗರದ ಕೆಲ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಈ ಹಿಂದೆ ಕಾಂಗ್ರೆಸ್, ಸಿಪಿಎಂ ಮತ್ತು ಸಿಪಿಐ ಪಕ್ಷಗಳ ನೇತೃತ್ವದಲ್ಲಿ ನಡೆದ ಸಿಎಎ ಮತ್ತು ಎನ್.ಆರ್.ಸಿ ವಿರೋಧಿ ಪ್ರತಿಭಟನೆ ವೇಳೆಯೂ ಟ್ರಾಫಿಕ್ ಜಾಮ್ ಉಂಟಾಗಿತ್ತು. ನಗರದ ರಾಯಲ್ ವೃತ್ತದ ಸುತ್ತಮುತ್ತಲಿನ ಅಂಗಡಿ, ಹೋಟೆಲ್, ಪೆಟ್ರೋಲ್ ಬಂಕ್ ಬಂದ್ ಮಾಡಲಾಗಿತ್ತು.