ಬಳ್ಳಾರಿ: ಗಣಿನಾಡಿಗೆ ಜನವರಿಯಲ್ಲಿ ಕೊರೊನಾ ಲಸಿಕೆ ಬರುವ ಸಾಧ್ಯತೆ ಇದ್ದು, ವ್ಯಾಕ್ಸಿನ್ ಸಂಗ್ರಹಣೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ.
ಆದರೆ ಜಿಲ್ಲೆಗೆ ಎಷ್ಟು ಪ್ರಮಾಣದ ವ್ಯಾಕ್ಸಿನ್ ಬರುತ್ತದೆ ಎಂಬ ಬಗ್ಗೆ ಆರೋಗ್ಯ ಇಲಾಖೆ ಬಳಿ ಸ್ಪಷ್ಟನೆ ಇಲ್ಲ. ಆದರೂ ಸಹ ಲಸಿಕೆ ಸಂಗ್ರಹಣೆಗೆ ತಯಾರಿ ಮಾಡಿಕೊಳ್ಳಲಾಗಿದೆ ಎಂದು ಡಿಹೆಚ್ಒ ಡಾ. ಹೆಚ್.ಎಲ್. ಜನಾರ್ಧನ ಹೇಳಿದ್ದಾರೆ.
ಕೇಂದ್ರ ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ಸಾಕಷ್ಟು ಶ್ರಮಿಸಿ ಈಗ ಸೋಂಕಿಗೆ ಸೂಕ್ತ ವ್ಯಾಕ್ಸಿನ್ ಬರುವ ನಿರೀಕ್ಷೆಯಲ್ಲಿದೆ. ಇದರಿಂದ ಜನತೆ ಸಹ ನಿಟ್ಟುಸಿರುಬಿಡುವಂತಾಗಿದೆ.