ETV Bharat / state

G-20 Summit in Hampi: ಜಿ20 ಸಮ್ಮಿಟ್‌ಗೆ ಹಂಪಿ ಭಾಗದಲ್ಲಿ ಸಿದ್ಧತೆ ಚುರುಕು - ಸ್ವಚ್ಛತಾ ಕಾರ್ಯದ ಜೊತೆಗೆ ರಸ್ತೆ ಅತಿಕ್ರಮಣ ತೆರವು - ಈಟಿವಿ ಭಾರತ ಕರ್ನಾಟಕ

ಹಂಪಿಯಲ್ಲಿ ಜಿ20 ಶೃಂಗಸಭೆ ಹಿನ್ನೆಲೆ ಹೊಸಪೇಟೆ ತಾಲೂಕಿನ ಕಮಲಾಪುರ ಮತ್ತು ಹಂಪಿ ಭಾಗದಲ್ಲಿ ಸ್ವಚ್ಛತಾ ಕಾರ್ಯ ಸೇರಿದಂತೆ ರಸ್ತೆ ಅತಿಕ್ರಮಣ ತೆರವು ಮಾಡಲಾಗುತ್ತಿದೆ.

Etv Bharatpreparations-for-the-g20-summit-in-hampi-at-kamalpur-of-hospet
G-20 Summit in Hampi: ಜಿ20 ಸಮ್ಮಿಟ್‌ಗೆ ಹಂಪಿ ಭಾಗದಲ್ಲಿ ಸಿದ್ಧತೆ ಚುರುಕು - ಸ್ವಚ್ಛತಾ ಕಾರ್ಯದ ಜೊತೆಗೆ ರಸ್ತೆ ಅತಿಕ್ರಮಣ ತೆರವು
author img

By

Published : Jun 24, 2023, 5:22 PM IST

ಕಮಲಾಪುರ ಪುರಸಭೆಯ ಜೆಇ ಹನುಮಂತ

ವಿಜಯನಗರ: ಐತಿಹಾಸಿಕ ತಾಣ ಹಂಪಿಯಲ್ಲಿ ಜುಲೈ ತಿಂಗಳಲ್ಲಿ ಆಯೋಜಿಸಿರುವ ಜಿ-20 ಶೃಂಗಸಭೆಗೆ ದೇಶ- ವಿದೇಶಗಳಿಂದ ಗಣ್ಯಾತಿಗಣ್ಯರು ಆಗಮಿಸುವುದರಿಂದ ಹೊಸಪೇಟೆ ತಾಲೂಕಿನ ಕಮಲಾಪುರ ಮತ್ತು ಹಂಪಿ ಭಾಗದಲ್ಲಿ ಸ್ವಚ್ಛತಾ ಕಾರ್ಯ ಸೇರಿದಂತೆ ಇತರೆ ಕಾರ್ಯಗಳು ಚುರುಕುಗೊಂಡಿವೆ. ಜಿ20 ಸಮ್ಮಿಟ್ ಭಾಗವಾಗಿ ತಾಲೂಕಿನ ಕಮಲಾಪುರ ಪಟ್ಟಣದ ಅಂಬೇಡ್ಕರ್ ವೃತ್ತದ ಸುತ್ತಮುತ್ತ ಹಾಗೂ ಕಂಪ್ಲಿ- ಹೊಸಪೇಟೆ ಮಾರ್ಗದ ಸಾರ್ವಜನಿಕ ರಸ್ತೆ ಮತ್ತು ಚರಂಡಿಗಳ ಮೇಲೆ ನಿರ್ಮಿಸಿದ್ದ ಕಟ್ಟಡಗಳ ಮೆಟ್ಟಿಲು, ಕಟ್ಟೆ ಹಾಗೂ ಗೋಡೆಗಳನ್ನು ಜೆಸಿಬಿಗಳ ನೆರವಿನಿಂದ ಪುರಸಭೆ ಅಧಿಕಾರಿಗಳು ತೆರವುಗೊಸಿದರು.

ಅದರೊಂದಿಗೆ ಮುಖ್ಯ ರಸ್ಥೆಯಲ್ಲಿ ಬೇಕಾಬಿಟ್ಟಿಯಾಗಿ ಸುರಿದಿದ್ದ ಕಟ್ಟಡಗಳ ತ್ಯಾಜ್ಯ ಮಣ್ಣನ್ನು ಊರ ಹೊರಗೆ ಸಾಗಿಸಿದರು. ಕಡ್ಡಿರಾಂಪುರದಿಂದ ಹಂಪಿ ಮತ್ತು ಹಂಪಿಯಿಂದ ಕಮಲಾಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಕ್ಕಪಕ್ಕದಲ್ಲಿ ಬೆಳೆದಿರುವ ಬೃಹತ್ ಮರಗಳಿಂದಾಗಿ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿತ್ತು. ಸಮಸ್ಯಾತ್ಮಕ ಗಿಡಗಳನ್ನು ಗುರುತಿಸಿದ್ದ ವಲಯ ಅರಣ್ಯ ಅಧಿಕಾರಿಗಳು, ಮುನ್ನೆಚ್ಚರಿಕೆ ಕ್ರಮವಾಗಿ ಕಡಿದು ಹಾಕಿದ್ದಾರೆ. ಈ ಮೂಲಕ ವಾಹನಗಳ ಸಂಚಾರಕ್ಕೆ ಆಗಬಹುದಾದ ತೊಂದರೆಯನ್ನು ತಪ್ಪಿಸಿದ್ದಾರೆ.

ಕಟ್ಟಡ ತೆರವು: ತಾಲೂಕಿನ ಕಮಲಾಪುರ ಪಟ್ಟಣದಲ್ಲಿ ರಸ್ತೆ ಬದಿಗಳಲ್ಲಿ ಚರಂಡಿ ಅತಿಕ್ರಮಣ ಮಾಡಿ ನಿರ್ಮಿಸಿರುವ ಕಟ್ಟಡಗಳನ್ನು ತೆರವುಗೊಳಿಸಲಾಯಿತು. ಹಂಪಿಯಲ್ಲಿ ಜಿ20 ರಾಷ್ಟ್ರಗಳ ಶೃಂಗಸಭೆ ಹಿನ್ನೆಲೆಯಲ್ಲಿ ಸ್ವಚ್ಛತಾ ಕಾರ್ಯದ ಹೊಣೆ ಹೊತ್ತಿರುವ ಕಮಲಾಪುರ ಪುರಸಭೆ ತನ್ನ ಕೆಲಸವನ್ನು ಕಳೆದ ತಿಂಗಳಿನಿಂದಲೇ ಆರಂಭಿಸಿದ್ದು, ಇದೀಗ ಮತ್ತಷ್ಟು ಚುರುಕುಗೊಳಿಸಿದೆ. ಇದರ ಭಾಗವಾಗಿ ಚರಂಡಿಗಳ ಮೇಲೆ ನಿರ್ಮಿಸಿದ್ದ ಅಂಗಡಿಗಳು ಸೇರಿ ಹಲವಾರು ಕಟ್ಟಡಗಳನ್ನು ಜೆಸಿಬಿಯಿಂದ ತೆರವುಗೊಳಿಸಲಾಯಿತು.

ಪೊಲೀಸ್ ಸಿಬ್ಬಂದಿ ಜತೆಗಿದ್ದರು. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಕಮಲಾಪುರ ಪಟ್ಟಣದ ಮುಖ್ಯರಸ್ತೆಯಿಂದ ಹಂಪಿವರೆಗೆ ಪುರಸಭೆಯಿಂದ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಚರಂಡಿಯಲ್ಲಿ ತುಂಬಿರುವ ಹೂಳು ತೆಗೆಯಲು ಸಾಧ್ಯವಾಗದ್ದರಿಂದ ಚರಂಡಿಯನ್ನು ಅತಿಕ್ರಮಿಸಿ ನಿರ್ಮಿಸಿರುವ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ನಾಗೇಶ್ ಹೇಳಿದರು.

ಕಮಲಾಪುರ ಪುರಸಭೆಯ ಜೆಇ ಹನುಮಂತ ಮಾತನಾಡಿ, ಹಂಪಿಯಲ್ಲಿ ಜುಲೈ 9ರಿಂದ 17ರ ವರೆಗೆ ಜಿ20 ಶೃಂಗಸಭೆ ನಡೆಯಲಿರುವುದರಿಂದ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಪಟ್ಟಣದಲ್ಲಿ ಚರಂಡಿಯನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಿರುವ ಮನೆಗಳ ತೆರವುಗೊಳಿಸುವ ಕಾರ್ಯವನ್ನು ಜು.21ರಿಂದ ಕೈಗೊಂಡಿದ್ದೇವೆ. ಈಗಾಗಲೇ ಒಂದೂವರೆ ಕಿ.ಮೀ ತೆರವು ಕಾರ್ಯ ನಡೆದಿದೆ. ನಾಳೆ ಇನ್ನುಳಿದ ಒಂದು ಕಿ.ಮೀ ತೆರವು ಕಾರ್ಯವನ್ನು ಮುಗಿಸಲಾಗುತ್ತದೆ ಎಂದರು.

130 ಸಿಬ್ಬಂದಿಗಳಿಂದ ಸ್ವಚ್ಛತಾ ಕಾರ್ಯ: ಕಮಲಾಪುರ ಪಟ್ಟಣದಲ್ಲಿ ಸ್ವಚ್ಛತೆಗಾಗಿ 130 ಪೌರಕಾರ್ಮಿಕರನ್ನು ಬಳಸಿಕೊಳ್ಳಲಾಗುತ್ತಿದೆ. ಹೊಸಪೇಟೆ ನಗರಸಭೆ, ಹಗರಿಬೊಮ್ಮನಹಳ್ಳಿ ಪುರಸಭೆ, ಕೂಡ್ಲಿಗಿ ಪಟ್ಟಣ ಪಂಚಾಯಿತಿ, ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯಿತಿ ಸೇರಿ 90 ಜನ ಸಿಬ್ಬಂದಿ ಮತ್ತು ಕಮಲಾಪುರ ಪುರಸಭೆಯ 40 ಜನರು ಸೇರಿ ಒಟ್ಟು 130 ಸಿಬ್ಬಂದಿ ಸ್ವಚ್ಛತಾ ಕಾರ್ಯ ಮಾಡುತ್ತಿದ್ದಾರೆ.

ಹಂಪಿಯಲ್ಲಿ ಜಿ-20 ಶೃಂಗಸಭೆ ಹಿನ್ನೆಲೆಯಲ್ಲಿ ನಾನಾ ರಾಷ್ಟ್ರಗಳ ಪ್ರತಿನಿಧಿಗಳು ಆಗಮಿಸಲಿದ್ದು, ಕಮಲಾಪುರದಿಂದ ಹಂಪಿಗೆ ತೆರಳುವ ರಸ್ತೆ ಬದಿಯ ಮರಗಳ ರೆಂಬೆ, ಕೊಂಬೆಗಳನ್ನು ಕತ್ತರಿಸಲಾಯಿತು. ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಬರುವ ಪ್ರತಿನಿಧಿಗಳು ಜಿಂದಾಲ್ ನಿಂದ ಕಮಲಾಪುರ ಪಟ್ಟಣದ ಮಾರ್ಗವಾಗಿ ಹಂಪಿಗೆ ತೆರಳಲಿದ್ದು, ಈ ನಿಟ್ಟಿನಲ್ಲಿ ಸ್ವಚ್ಛತೆಯ ಜತೆಗೆ ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳ ಸಂಚಾರಕ್ಕೆ ತೊಂದರೆ ಆಗದಿರಲಿ ಎಂಬ ಕಾರಣಕ್ಕೆ ಸಂಚಾರಕ್ಕೆ ಅಡ್ಡಿಯಾಗಿರುವ ಮರಗಳನ್ನು ಕತ್ತರಿಸಲಾಗಿದೆ.

ಇದನ್ನೂ ಓದಿ: 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ದೇವಸ್ಥಾನದಲ್ಲಿ ನೇರ ದರ್ಶನದ ವ್ಯವಸ್ಥೆ: ಮುಜರಾಯಿ ಸಚಿವರ ಉಪಸ್ಥಿತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.