ಹೊಸಪೇಟೆ: ತಾಲೂಕಿನ ಗ್ರಾಮವೊಂದರ ಶಾಲೆಯ ಮುಖ್ಯ ಶಿಕ್ಷಕನ ವಿರುದ್ಧ ಪೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಕುರಿತು ವರದಿ ಸಿದ್ಧಪಡಿಸಲಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸುನಾಂದ ತಿಳಿಸಿದ್ದಾರೆ.
ನಗರದ ಕಚೇರಿಯಲ್ಲಿಂದು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಪ್ರಕರಣದ ಕುರಿತು ಈಗಾಗಲೇ ವಿಚಾರಣೆ ನಡೆಸಲಾಗಿದೆ. ಇದಕ್ಕೆ ಸಂಬಂಧಿಸಿದ ಕಡತಗಳನ್ನು ಮೇಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ. ತಪ್ಪು ಸಾಬೀತಾದರೆ ಇಲಾಖೆ ಅವರ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.
ಡೊನೇಷನ್ ತಗೆದುಕೊಳ್ಳಲಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿ, ಡೋನೇಷನ್ ತಪ್ಪಿಸಲು ಪಾಲಕರು ದೂರನ್ನು ಸಲ್ಲಿಸಬೇಕು. ಯಾವುದೇ ರೀತಿ ಅಂಜಿಕೊಳ್ಳಬಾರದು. ಮಕ್ಕಳಿಗೆ ತೊಂದರೆ ಆಗುತ್ತದೆ ಎಂದು ಪಾಲಕರ ಮನೋಭಾವನೆ ಇದೆ. ಮಕ್ಕಳಿಗೆ ಸರಕಾರ ಸುರಕ್ಷತೆಯನ್ನು ನೀಡಲಿದೆ ಎಂದರು.
ಓದಿ : ಸಿಡಿ ಪ್ರಕರಣ ಒಂದೇ ಆದರೂ 2 ಆಯಾಮದ ತನಿಖೆ.. ಯುವತಿ ಹೇಳಿಕೆ ಸುಳ್ಳು ಎಂದಾದ್ರೆ ಎಫ್ಐಆರ್..