ಬಳ್ಳಾರಿ: ಬಳ್ಳಾರಿ ಹಾನಗರ ಪಾಲಿಕೆಯಿಂದ ಕಸ ಎತ್ತುವ ಗಾಡಿಯಲ್ಲೇ ಪ್ರತಿದಿನ ಪೌರಕಾರ್ಮಿಕ ಮಹಿಳೆಯರನ್ನು ಕರೆ ತರುವ ಅಧಿಕಾರಿಗಳ ನಡವಳಿಕೆ ವಿಮ್ಸ್ ಆಸ್ಪತ್ರೆಯ ಆವರಣದಲ್ಲಿ ವ್ಯಾಪಕ ಚರ್ಚೆಗೆ ಗುರಿಯಾಯಿತು.
ಇಲ್ಲಿನ ವಿಮ್ಸ್ ಆಸ್ಪತ್ರೆಯಲ್ಲಿಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ನೇತೃತ್ವದಲ್ಲಿ ಸ್ವಚ್ಛ ಭಾರತ ಅಭಿಯಾನವಿತ್ತು. ಈ ಹಿನ್ನೆಲೆಯಲ್ಲಿ ಶುಚಿತ್ವ ಕಾರ್ಯಕ್ಕೆ ಮಹಾನಗರ ಪಾಲಿಕೆಯಿಂದ ಕಸ ಎತ್ತುವ ಗಾಡಿಯಲ್ಲೇ ಪೌರಕಾರ್ಮಿಕ ಮಹಿಳೆಯರನ್ನು ಕರೆತಂದಿರುವುದು ಸಾರ್ವಜನಿಕರ ಚರ್ಚೆಗೆ ಗ್ರಾಸವಾಯಿತು.
ಇನ್ನು ಗ್ರಾಮೀಣ ಭಾಗದಲ್ಲಿ ಸರಕು ಸಾಗಣೆ ಆಟೋ ರಿಕ್ಷಾದಲ್ಲಿ ಕೂಲಿ ಕಾರ್ಮಿಕರನ್ನು ಸಾಗಣೆ ಮಾಡುತ್ತಿರುವ ದೃಶ್ಯ ಕಂಡು ಬಂದರೆ ಸಾಕು. ಪೊಲೀಸರು ಇಲ್ಲಸಲ್ಲದ ಕಾರಣವೊಡ್ಡಿ ದಂಡ ವಸೂಲಿ ಮಾಡುತ್ತಾರೆ. ಆದರೆ, ಬಳ್ಳಾರಿ ನಗರದಲ್ಲೇ ಈ ರೀತಿ ಕಂಡು ಬಂದ್ರೂ ಯಾವುದೇ ಕ್ರಮಕ್ಕೆ ಪೊಲೀಸರು ಮುಂದಾಗಿಲ್ಲ ಎನ್ನುವ ಮಾತುಗಳು ಕೇಳಿಬಂದಿವೆ.