ETV Bharat / state

ಹಂಪಿ ಉತ್ಸವದಲ್ಲಿ ಶ್ರೀಕೃಷ್ಣದೇವರಾಯ ವಂಶಸ್ಥರಿಗೆ ಪೊಲೀಸರಿಂದ ಅವಮಾನ... ಅಂಥದ್ದೇನಾಯ್ತು? - ಪೊಲೀಸರಿಂದ ಶ್ರೀಕೃಷ್ಣದೇವರಾಯ ವಂಶಜರಿಗೆ ಅವಮಾನ

ಹಂಪಿ ಉತ್ಸವದ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕೃಷ್ಣದೇವರಾಯರನ್ನು ಪ್ರವೇಶ ದ್ವಾರದಲ್ಲೆ ಪೊಲೀಸರು ತಡೆದು ಅವಮಾನಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಶ್ರೀಕೃಷ್ಣದೇವರಾಯ ವಂಶಜರಿಗೆ ಪೊಲೀಸರಿಂದ ಅವಮಾನ
Police officers insulted Krishnadevaraya descendants
author img

By

Published : Jan 10, 2020, 11:50 PM IST

ಬಳ್ಳಾರಿ: ಜಿಲ್ಲೆಯಲ್ಲಿ ನಡೆಯುತ್ತಿರುವ ಐತಿಹಾಸಿಕ ಪ್ರಸಿದ್ಧ ಹಂಪಿ‌ ಉತ್ಸವದಲ್ಲಿ ಶ್ರೀಕೃಷ್ಣದೇವರಾಯ ವಂಶಸ್ಥರಿಗೆ ಜಿಲ್ಲಾ‌ ಪೊಲೀಸರಿಂದ ಅವಮಾನ ವ್ಯಕ್ತವಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಹಂಪಿ ಉತ್ಸವದ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕೃಷ್ಣದೇವರಾಯರನ್ನು ಪ್ರವೇಶ ದ್ವಾರದಲ್ಲೆ ಪೊಲೀಸರು ತಡೆದು ಅವಮಾನಿಸಿದ್ದು, ಮುಖ್ಯ ದ್ವಾರದ ಒಳಗೆ ಬಿಡದ ಹಿನ್ನಲೆಯಲ್ಲಿ ತಮಗೆ ಪರಿಚಯಸ್ಥ ಅಧಿಕಾರಿಗಳನ್ನು ಕರೆದು ಹೇಳಿಸಿ ಒಳಗೆ ಹೋಗಿದ್ದಾರೆ.

ಶ್ರೀಕೃಷ್ಣದೇವರಾಯ ವಂಶಜರಿಗೆ ಪೊಲೀಸರಿಂದ ಅವಮಾನ ಆರೋಪ

ಮೊದಲು ಉತ್ಸವದ ಆಹ್ವಾನ ಪತ್ರ ಕೊಡದೆ ಕಡೆಗಣಿಸಲಾಗಿತ್ತು. ಈ ಸುದ್ದಿ ಮಾಧ್ಯಮದಲ್ಲಿ ಸುದ್ದಿಯಾದ ಮೇಲೆ ಎಚ್ಚೆತ್ತ ಜಿಲ್ಲಾಡಳಿತ ಮನೆಗೆ ಹೋಗಿ ಆಹ್ವಾನ ಪತ್ರ ನೀಡಿತ್ತು. ಅಷ್ಟಾದರೂ ಮತ್ತೆ ವೇದಿಕೆಯ ಪ್ರವೇಶ ದ್ವಾರದಲ್ಲಿ ತಡೆದು ಮತ್ತೆ ಅವಮಾನ ಮಾಡಿದೆ. ಈ ಘಟನೆಯಿಂದ ಬೇಸರಗೊಂಡಿರುವ ಕೃಷ್ಣದೇವರಾಯರು‌ ಪರೋಕ್ಷವಾಗಿ ಬೇಸರ ಹೊರ ಹಾಕಿದ್ದಾರೆ.

ನಮಗೊಂದೇ ಅಲ್ಲ. ವಿದ್ಯಾರಣ್ಯ ಶ್ರೀಗಳಿಗೂ ಆಹ್ವಾನ ನೀಡಿಲ್ಲ. ಹಂಪಿಯಲ್ಲೇ ಇರುವ ವಿದ್ಯಾರಣ್ಯ ಪೀಠದ ಶ್ರೀಗಳನ್ನ ಉತ್ಸವಕ್ಕೆ ಕಡೆಗಣಿಸಲಾಗಿದೆ. ಪೀಠಾಧಿಪತಿಗೂ ಗೌರವ ನೀಡಿಲ್ಲವೆಂದು ಶ್ರೀ ಕೃಷ್ಣದೇವರಾಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Intro:ಶ್ರೀಕೃಷ್ಣದೇವರಾಯ ವಂಶಜರಿಗೆ ಪೊಲೀಸರಿಂದ ಅವಮಾನ
ಬಳ್ಳಾರಿ: ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ಹಂಪಿ‌ ಉತ್ಸವ ನಿಮಿತ್ತ ಶ್ರೀಕೃಷ್ಣದೇವರಾಯ ವಂಶಸ್ಥರಿಗೆ ಜಿಲ್ಲಾ‌ ಪೊಲೀಸರಿಂದ ಭಾರೀ ಅವಮಾನ ವ್ಯಕ್ತವಾಗಿದೆ.
ಹಂಪಿ ವಿರುಪಾಕ್ಷೇಶ್ವರ ದೇವಾಲಯ(ಗಾಯತ್ರಿ ಪೀಠ) ಮುಖ್ಯ ವೇದಿಕೆ ಪ್ರವೇಶದ್ವಾರದ ಮುಖೇನ ಬರುವ ಮುನ್ನ ಶ್ರೀಕೃಷ್ಣ ದೇವರಾಯ ವಂಶಸ್ಥರನ್ನು ತಡೆದ ಪೊಲೀಸರು ವಿಶೇಷ ಅತಿಥಿಗಳಿಗೆ ಮಾತ್ರ ಪ್ರವೇಶಾತಿ ಕಲ್ಪಿಸಲು ಜಿಲ್ಲಾಡಳಿತ
ಸೂಚಿಸಿದೆ‌. ನಾನು ರಾಜವಂಶಸ್ಥ.‌ ನಾನೂ ಕೂಡ‌ ವಿಶೇಷ
ಅತಿಥಿ ಎಂದ್ರು.‌ ನೀವ್ಯಾರು ಅಂತ ನಮಗೆ ಗೊತ್ತಿಲ್ಲ. ಆಗಾಗಿ, ಬಿಡಲಿಕ್ಕೆ ಆಗಲ್ಲ ಎಂದು ಅವಮಾನಿಸಿದ್ದಾರೆ. ನಿಮ್ಮ ಏಸಿ
ಯವ್ರನ್ನ ಕರಿಯಪ್ಪ ಅಂದ್ರೂ.‌ ನಾನ್ಯಾಕೆ ಕರೀಲಿ ಮೊಂಡು ವಾದವನ್ನೂ ಮಾಡಿದ್ದಾರೆ.
ಹಂಪಿ ಉತ್ಸವದ ಉಧ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕೃಷ್ಣದೇವರಾಯರನ್ನ ಪ್ರವೇಶ ದ್ವಾರದಲ್ಲೇ ಪೊಲೀಸರು ತಡೆದು ಅವಮಾನಿಸಿದ್ದಾರೆ.
Body:ಮುಖ್ಯದ್ವಾರದ ಒಳಗೆ ಬಿಡದ ಹಿನ್ನಲೆ ತಮಗೆ ಪರಿಚಯಸ್ಥ ಅಧಿಕಾರಿಗಳನ್ನ ಕರೆದು ಹೇಳಿಸಿ ಒಳಗೆ ಹೋದ ರಾಜ ಶ್ರೀ ಕೃಷ್ಣದೇವರಾಯರು. ಮೊದಲು ಉತ್ಸವದ ಆಹ್ವಾನ ಪತ್ರ ಕೊಡದೇ ಕಡೆಗಣಿಸಲಾಗಿತ್ತು.
ಮಾದ್ಯಮದಲ್ಲಿ ಸುದ್ದಿಯಾದ ಮೇಲೆ ಎಚ್ಚೆದ್ದಿದ್ದ ಜಿಲ್ಲಾಡಳಿತ.
ರಾತ್ರಿ ಮೂರು ಗಂಟೆಗೆ ಕರೆ ಮಾಡಿ, ಬಳಿಕ ಮನೆಗೆ ಹೋಗಿ ಆಹ್ವಾನ ಪತ್ರ ನೀಡಲಾಗಿತ್ತು.
ಅಷ್ಟಾದರೂ ಮತ್ತೆ ವೇದಿಕೆಯ ಪ್ರವೇಶ ದ್ವಾರದಲ್ಲಿ ತಡೆದು ಮತ್ತೆ ಅವಮಾನ. ಘಟನೆಯಿಂದ ಬೇಸರಗೊಂಡು ಕೃಷ್ಣದೇವರಾಯರು‌.
ಪರೋಕ್ಷವಾಗಿ ಬೇಸರ ಹೊರ ಹಾಕಿದ ಕೃಷ್ಣ ದೇವರಾಯರು.
ನಮಗೊಂದೇ ಅಲ್ಲ ವಿದ್ಯಾರಣ್ಯ ಶ್ರೀಗಳಿಗೂ ಆಹ್ವಾನ ನೀಡಿಲ್ಲ.
ಹಂಪಿಯಲ್ಲೇ ಇರುವ ವಿದ್ಯಾರಣ್ಯ ಪೀಠದ ಶ್ರೀಗಳನ್ನ ಉತ್ಸವಕ್ಕೆ ಕಡೆಗಣಿಸಲಾಗಿದೆ. ಪೀಠಾಧಿಪತಿಗೂ ಗೌರವ ನೀಡಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ರು ಶ್ರೀ ಕೃಷ್ಣದೇವರಾಯ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_6_SREEKRISHANA_DEVAROY_VSL_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.