ETV Bharat / state

ಗಣಿನಾಡಿನ ಪೊಲೀಸ್​​ ಠಾಣೆಗಳನ್ನು ಮಾದರಿಯಾಗಿಸಲು ಮುಂದಾದ ಇಲಾಖೆ

ಗಣಿ ಜಿಲ್ಲೆ ಬಳ್ಳಾರಿಯ ಪರಮದೇವನಹಳ್ಳಿ ಪೊಲೀಸ್ ಠಾಣೆ ಗಡಿಯಂಚಿನ ಹಳ್ಳಿಗಳಲ್ಲಿನ ಗಲಾಟೆ ಇನ್ನಿತರೆ ಅನೈತಿಕ, ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕುವಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದೆ. ಹೀಗಾಗಿ ಇದನ್ನು ಮಾದರಿ ಠಾಣೆಯನ್ನಾಗಿ ಮಾಡಬೇಕೆಂದು ಪಣತೊಟ್ಟಿರುವ ಪೊಲೀಸ್​ ಇಲಾಖೆ, ಈಗಾಗಲೇ ತನ್ನ ಕೆಲಸ ಪ್ರಾರಂಭಿಸಿದೆ.

ಗಣಿನಾಡಿನ ಠಾಣೆಗಳನ್ನು ಮಾದರಿ ಠಾಣೆಯನ್ನಾಗಿಸಲು ಪೊಲೀಸ್ ಇಲಾಖೆ ಶಪಥ!
author img

By

Published : Aug 29, 2019, 7:38 PM IST

ಬಳ್ಳಾರಿ: ಆ ಪೊಲೀಸ್ ಠಾಣೆಯು ಗಣಿ ನಗರಿ ಬಳ್ಳಾರಿಯಿಂದ 20 ಕಿಲೋ ಮೀಟರ್ ದೂರದಲ್ಲಿದೆ. ಆ ಠಾಣಾ ವ್ಯಾಪ್ತಿಗೆ ಅಂದಾಜು 18ಕ್ಕೂ ಹೆಚ್ಚು ಗ್ರಾಮಗಳು ಒಳಗೊಂಡಿವೆ. ಸುಸಜ್ಜಿತ ಕಂಪೌಂಡ್, ಉತ್ತಮ ಪರಿಸರ ಹೊಂದಿರುವ ಈ ಠಾಣೆಯನ್ನು ಈಗ ಮಾದರಿ ಪೊಲೀಸ್ ಠಾಣೆಯನ್ನಾಗಿಸಲು ಪೊಲೀಸ್ ಇಲಾಖೆಯು ಮುಂದಾಗಿದೆ.

ಗಣಿನಾಡಿನ ಠಾಣೆಗಳನ್ನು ಮಾದರಿ ಠಾಣೆಯನ್ನಾಗಿಸಲು ಮುಂದಾದ ಇಲಾಖೆ

ಹೌದು, ಗಣಿ ಜಿಲ್ಲೆ ಬಳ್ಳಾರಿಯ ಪರಮದೇವನಹಳ್ಳಿ ಪೊಲೀಸ್ ಠಾಣೆ (ಪಿ.ಡಿ.ಹಳ್ಳಿ).‌ ಅತ್ಯಂತ ವಿಶಾಲವಾದ ಆವರಣ, ಸುಸಜ್ಜಿತ ಕಂಪೌಂಡ್ ಗೋಡೆ, ಹಸಿರೀಕರಣ ಸೇರಿದಂತೆ ಇನ್ನಿತರೆ ಸೌಲಭ್ಯ ಹೊಂದಿದೆ. ಗಡಿಯಂಚಿನ ಹಳ್ಳಿಗಳಲ್ಲಿನ ಗಲಾಟೆ ಇನ್ನಿತರೆ ಅನೈತಿಕ, ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕುವಲ್ಲಿ ಈ ಠಾಣೆಯು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದೆ. ಹೀಗಾಗಿ ಇದನ್ನು ಮಾದರಿ ಠಾಣೆಯನ್ನಾಗಿ ಮಾಡಬೇಕೆಂದು ಪಣ ತೊಟ್ಟಿರುವ ಪೊಲೀಸ್​ ಇಲಾಖೆ, ಈಗಾಗಲೇ ತನ್ನ ಕೆಲಸ ಪ್ರಾರಂಭಿಸಿದೆ. ಆಯಾ ಗ್ರಾಮಗಳ ಹೆಸರಿನಡಿ ದಾಖಲಾತಿ ಸಂಗ್ರಹಿಸಿಡುವ ಪ್ರತ್ಯೇಕ ಕಬೋರ್ಡನ್ನು ತಯಾರಿಸಿ, ದಾಖಲಾತಿ ಫೈಲ್​​ಗಳ ಮೇಲೆ ಆಯಾ ಗ್ರಾಮಗಳ ಹೆಸರನ್ನು ಬರೆಯಿಸಲಾಗಿದೆ.

ಠಾಣೆಯನ್ನು ಮಾದರಿಯನ್ನಾಗಿಸಲು ಕೈಗೊಳ್ಳಲಿರುವ ಕ್ರಮಗಳು:

ಠಾಣೆಯ ಕಡತಗಳ ನಿರ್ವಹಣೆಯನ್ನು ಸಂಪೂರ್ಣವಾದ ಮಾಹಿತಿಯೊಂದಿಗೆ ನಿರ್ವಹಿಸತಕ್ಕದ್ದು. ಠಾಣೆಯ ಮುಂಭಾಗದಲ್ಲಿ ಮಾನ್ಯರು ಅನುಮೋದಿಸಿದಂತಹ ಉಲ್ಲೇಖಿತ ಸಂಖ್ಯೆಯೊಂದಿಗೆ ಮಾದರಿ ಪೊಲೀಸ್‌ ಠಾಣೆ ಎಂದು ನಾಮಫಲಕವನ್ನು ತೂಗು ಹಾಕಬೇಕು. ಠಾಣೆಯ ಕಟ್ಟಡ ಮತ್ತು ಆವರಣವನ್ನು ಜೊಕ್ಕಟವಾಗಿಟ್ಟುಕೊಂಡು ಹೂವಿನ ಗಿಡ ಸೇರಿದಂತೆ ಇನ್ನಿತರೆ ಗಿಡಗಳನ್ನು ಬೆಳೆಸೋದರ ಕುರಿತು ಸೂಕ್ತ ಕ್ರಮ ಕೈಗೊಳ್ಳುವುದು ಪೊಲೀಸ್ ಇಲಾಖೆಯ ಪ್ರಮುಖ ಆಶಯವೂ ಆಗಿದೆ. ಇನ್ನು ಈ ಮೇಲಿನ ಅಂಶಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು ಎಂದು ಪೊಲೀಸ್ ಇಲಾಖೆ ಸೂಚನಾ ಪತ್ರದಲ್ಲಿ ತಿಳಿಸಲಾಗಿದೆ.

ಬ್ರಿಟಿಷ್ ಕಾಲದ ಇತಿಹಾಸ:

ಪರಮದೇವನಹಳ್ಳಿ ಪೊಲೀಸ್ ಠಾಣೆಗೆ ಬ್ರಿಟಿಷ್ ಕಾಲದ ಇತಿಹಾಸವಿದೆ. ಹೌದು, ಠಾಣೆಯ ಕಂಪೌಂಡ್​​ನ ಒಂದು ಮೂಲೆಯಲ್ಲಿ ಎತ್ತರದ ಕೊಠಡಿಯೊಂದಿದೆ. ಈ ಮೊದ್ಲು ಆ ಕೊಠಡಿಯಲ್ಲಿ ಒಬ್ಬ ಸಿಬ್ಬಂದಿ ಇರುತ್ತಿದ್ದರಂತೆ. ಅವರು ಹೊರಗಿಂದ ಬರುವ ಸಾರ್ವಜನಿಕರನ್ನು ಕೊಠಡಿಯೊಳಗೆ ಕುಳಿತೇ ಅವರ ಊರು, ಯಾವ ಉದ್ದೇಶಕ್ಕೆ ಬಂದೀರಿ ಎಂಬುದನ್ನು ವಿಚಾರಿಸಿ, ಆ ಮೇಲೆ ಅವರನ್ನು ಸಣ್ಣದಾದ ಗೇಟ್​​ನಿಂದ ಒಳಗೆ ಬಿಡುತ್ತಿದ್ದರಂತೆ. ಈವತ್ತಿಗೂ ಆ ಕೊಠಡಿ ಹಾಗೂ ಸಣ್ಣದಾದ ಗೇಟ್ ಇದೆ. ಹೀಗಾಗಿ, ಈ ಠಾಣೆಯು ಬ್ರಿಟಿಷ್ ಕಾಲದ್ದು ಎಂಬ ಕುರುಹು ಇಲ್ಲಿದೆ.

ಆಯಾ ಪೊಲೀಸ್ ಠಾಣೆಗಳು ಸಾರ್ವಜನಿಕ ಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಬೇಕೆಂದು ಉದ್ದುದ್ದ ಭಾಷಣ ಬಿಗಿಯುವವರೇ ಹೆಚ್ಚಿರುವ ಈ ಕಾಲಘಟ್ಟದಲ್ಲಿ ಮಾದರಿ ಪೊಲೀಸ್ ಠಾಣೆಯನ್ನಾಗಿಸಲು ಮುಂದಾಗಿರೋ ಕಾರ್ಯ ಶ್ಲಾಘನೀಯವಾದದ್ದು ಎಂದು ಪಿ.ಡಿ. ಹಳ್ಳಿ ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ.

ಇನ್ನು, ಜಿಲ್ಲೆಯ ತೋರಣಗಲ್ಲು ಹಾಗೂ ಬಳ್ಳಾರಿ ನಗರ, ಗ್ರಾಮಾಂತರ ಪ್ರದೇಶ ವ್ಯಾಪ್ತಿಗೆ ಒಳಪಡುವ ಕೌಲ್ ಬಜಾರ್ ಪೊಲೀಸ್ ಠಾಣೆಗಳು ಪ್ರಸಕ್ತ ಸಾಲಿನ ಮಾದರಿ ಪೊಲೀಸ್ ಠಾಣೆಗಳನ್ನಾಗಿಸಲು ಆಯ್ಕೆ ಮಾಡಲಾಗಿದೆ ಎಂದು ಎಸ್ಪಿ ಸಿ.ಕೆ.ಬಾಬಾ ತಿಳಿಸಿದ್ದಾರೆ.

Intro:ಗಣಿನಾಡಿನಲಿ ಮಾದರಿ ಠಾಣೆಯನ್ನಾಗಿಸಲು ಪೊಲೀಸ್ ಇಲಾಖೆ ಶಪಥ…!
ಬಳ್ಳಾರಿ: ಆ ಪೊಲೀಸ್ ಠಾಣೆಯು ಗಣಿ ನಗರಿ ಬಳ್ಳಾರಿಯಿಂದ ಅಣತಿ (20 ಕಿಲೋಮೀಟರ್) ದೂರದಲ್ಲಿದೆ. ಆ ಠಾಣಾ ವ್ಯಾಪ್ತಿಗೆ ಅಂದಾಜು 18ಕ್ಕೂ ಹೆಚ್ಚು ಗ್ರಾಮಗಳು ಒಳಗೊಂಡಿವೆ. ಸುಸಜ್ಜಿತ ಕಂಪೌಂಡ್ ಉತ್ತಮ ಪರಿಸರ ಹೊಂದಿರುವ ಈ ಠಾಣೆಯು ಈಗ ಮಾದರಿ ಪೊಲೀಸ್ ಠಾಣೆಯನ್ನಾಗಿಸಲು ಪೊಲೀಸ್ ಇಲಾಖೆಯು ಮುಂದಾಗಿದೆ.
ಅದುವೇ ಗಣಿ ಜಿಲ್ಲೆಯ ಬಳ್ಳಾರಿ ತಾಲೂಕಿನ ಪರಮದೇವನಹಳ್ಳಿ ಪೊಲೀಸ್ ಠಾಣೆ (ಪಿ.ಡಿ.ಹಳ್ಳಿ).‌ ಅತ್ಯಂತ ವಿಶಾಲವಾದ ಆವರಣ, ಸುಸಜ್ಜಿತ ಕಂಪೌಂಡ್ ಗೋಡೆ, ಹಸಿರೀಕರಣ ಸೇರಿದಂತೆ ಇನ್ನಿತರೆ ಸೌಲಭ್ಯವನ್ನು ಈ ಠಾಣೆಯು ಹೊಂದಿದೆ.
ಈಗಾಗಲೇ ಆಯಾ ಗ್ರಾಮಗಳ ಹೆಸರಿನಡಿ ದಾಖಲಾತಿ ಸಂಗ್ರಹಿಸಿ ಡುವ ಪ್ರತ್ಯೇಕ ಕಬೋಡವನ್ನು ತಯಾರಿಸಿಡಲಾಗಿದೆ. ದಾಖಲಾತಿ ಫೈಲ್ ಗಳ ಮೇಲೆ ಆಯಾ ಗ್ರಾಮಗಳ ಹೆಸರನ್ನು ಬರೆಯಿಸಲಾಗಿ ದೆ.
ಆಯಾ ಮಾದರಿ ಠಾಣೆಗಳಲ್ಲಿ ದಾಖಲಾತಿಯನ್ನು ಕಾಲಕಾಲಕ್ಕೆ ತಕ್ಕಂತೆ ಸಂಬಂಧಪಟ್ಟ ಸಂಪೂರ್ಣ ಮಾಹಿತಿಯನ್ನು ಭರ್ತಿ ಮಾಡಿ ಇಡತಕ್ಕದ್ದು. ಅಲ್ಲದೇ, ಠಾಣೆಯ ಕಡತಗಳ ನಿರ್ವಹಣೆಯನ್ನೂ ಕೂಡ ಸಂಪೂರ್ಣವಾದ ಮಾಹಿತಿಯೊಂದಿಗೆ ನಿರ್ವಹಿಸತಕ್ಕದ್ದು. ಠಾಣೆಯ ಮುಂಭಾಗದಲ್ಲಿ ಮಾನ್ಯರು ಅನುಮೋದಿಸಿದಂತಹ ಉಲ್ಲೇಖಿತ ಸಂಖ್ಯೆಯೊಂದಿಗೆ ಮಾದರಿ ಪೊಲೀಸ್‌ ಠಾಣೆ ಎಂದು ನಾಮಫಲಕವನ್ನು ತೂಗು ಹಾಕಬೇಕು. ಠಾಣೆಯ ಕಟ್ಟಡ ಮತ್ತು ಆವರಣವನ್ನು ಜೊಕ್ಕಟವಾಗಿಟ್ಟುಕೊಂಡು ಹೂವಿನ ಗಿಡ ಸೇರಿ ದಂತೆ ಇನ್ನಿತರೆ ಗಿಡಗಳನ್ನೇ ಬೆಳೆಸೋದರ ಕುರಿತು ಸೂಕ್ತಕ್ರಮ ಕೈಗೊಳ್ಳುವ ಕುರಿತಾದ ಅಂಶಗಳನ್ನು ಈ ಮಾದರಿ ಪೊಲೀಸ್ ಠಾಣೆಯಲ್ಲಿರಬೇಕೆಂಬುದು ಪೊಲೀಸ್ ಇಲಾಖೆಯ ಪ್ರಮುಖ ಆಶಯವೂ ಆಗಿದೆ. ಹಾಗೂ ಈ ಮೇಲಿನ ಅಂಶಗಳನ್ನು ಕಡ್ಡಾಯ ವಾಗಿ ಪಾಲಿಸತಕ್ಕದ್ದು ಎಂದು ಸೂಚನಾಪತ್ರದಲ್ಲಿ ತಿಳಿಸಲಾಗಿದೆ.
ಬ್ರಿಟಿಷ್ ಕಾಲದ ಇತಿಹಾಸ: ಪರಮದೇವನಹಳ್ಳಿ ಪೊಲೀಸ್ ಠಾಣೆಗೆ ಬ್ರಿಟಿಷ್ ಕಾಲದ ಇತಿಹಾಸವಿದೆ. ಗಡಿಯಂಚಿನ ಹಳ್ಳಿ
ಗಳಲ್ಲಿನ ಗಲಾಟೆ, ದೊಂಬಿ ಸೇರಿದಂತೆ ಇನ್ನಿತರೆ ಅನೈತಿಕ ಹಾಗೂ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕುವಲ್ಲಿ ಈ ಠಾಣೆಯು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದೆ. ಈ ಠಾಣೆಯ ಕಂಪೌಂಡ್ ನ ಒಂದು ಮೂಲೆಯಲ್ಲಿ ಬಹುಎತ್ತರದ ಕೊಠಡಿಯೊಂದಿದೆ. ಈ ಮೊದ್ಲು ಆ ಕೊಠಡಿಯಲ್ಲಿ ಒಬ್ಬ ಸಿಬ್ಬಂದಿ ಇರುತ್ತಿದ್ದರಂತೆ. ಅವರು ಹೊರಗಿಂದ ಬರುವ ಸಾರ್ವಜನಿಕರನ್ನು ಕೊಠಡಿಯೊಳಗೆ ಕುಳಿತೇ ಅವರ ಊರು, ಯಾವ ಉದ್ದೇಶಕ್ಕೆ ಬಂದೀರಿ ಎಂಬುದನ್ನು ವಿಚಾರಿಸಿ, ಆ ಮೇಲೆ ಅವರನ್ನು ಸಣ್ಣದಾದ ಗೇಟ್ ನಿಂದ ಒಳಗೆ ಬಿಡುತ್ತಿದ್ದರಂತೆ. ಈವತ್ತಿಗೂ ಆ ಕೊಠಡಿ ಹಾಗೂ ಸಣ್ಣದಾದ ಗೇಟ್ ಇದೆ. ಹೀಗಾಗಿ, ಈ ಠಾಣೆಯು ಬ್ರಿಟಿಷ್ ಕಾಲದ್ದು ಎಂಬ ಕುರುಹು ಇಲ್ಲಿದೆ.
Body:ಆಯಾ ಪೊಲೀಸ್ ಠಾಣೆಗಳು ಸಾರ್ವಜನಿಕ ಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಬೇಕೆಂಬ ಉದ್ದುದ್ದ ಭಾಷಣ ಬಿಗಿಯುವವರೇ ಹೆಚ್ಚಿರುವ ಈ ಕಾಲಘಟ್ಟದಲ್ಲಿ ಮಾದರಿ ಪೊಲೀಸ್ ಠಾಣೆಯನ್ನಾಗಿಸಲು ಮುಂದಾಗಿರೋ ಕಾರ್ಯ ಶ್ಲಾಘನೀಯವಾದದು ಎಂದು ಪಿ.ಡಿ. ಹಳ್ಳಿ ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ.
ನಾಲ್ಕಾರು ಪೊಲೀಸ್ ಠಾಣೆಗಳು ಮಾದರಿ: ಜಿಲ್ಲೆಯ ತೋರಣಗಲ್ಲು ಹಾಗೂ ಬಳ್ಳಾರಿ ನಗರ, ಗ್ರಾಮಾಂತರ ಪ್ರದೇಶ ವ್ಯಾಪ್ತಿಗೆ ಒಳಪಡುವ ಕೌಲ್ ಬಜಾರ್ ಪೊಲೀಸ್ ಠಾಣೆಗಳು ಪ್ರಸಕ್ತ ಸಾಲಿನ ಮಾದರಿ ಪೊಲೀಸ್ ಠಾಣೆಗಳನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಎಸ್ಪಿ ಸಿ.ಕೆ.ಬಾಬಾ ತಿಳಿಸಿದ್ದಾರೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:ಪವರ್ ಡೈರೆಕ್ಟರ್ ನಲ್ಲಿ ಈ ವಿಡಿಯೊ ಕಳಿಸಿರುವೆ. ಗಮನಿಸಿರಿ.

KN_BLY_2_P.D.HALLI_STATION_MODEL_STATION_VISUALS_7203310
ETV Bharat Logo

Copyright © 2024 Ushodaya Enterprises Pvt. Ltd., All Rights Reserved.