ETV Bharat / state

ಅಂದು ಶ್ರೀರಾಮನನ್ನು ಬಂಧಿಸಿಟ್ಟಿದ್ದರು, ಈಗ ಬಜರಂಗದಳ ಕಾರ್ಯಕರ್ತರ ಬಂಧನಕ್ಕೆ ಕಾಂಗ್ರೆಸ್​ ಸಂಕಲ್ಪ ಮಾಡಿದೆ : ಮೋದಿ ವಾಗ್ದಾಳಿ

ಪ್ರಧಾನಿ ನರೇಂದ್ರ ಮೋದಿ ಅವರು ಹೊಸಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ನಡೆಸಿದರು.

pm-narendra-modi-rally-at-hosapete
ಕಾಂಗ್ರೆಸ್​ಗೆ ಶ್ರೀರಾಮ ಹಾಗೂ ಹನುಮಂತನನ್ನು ಕಂಡರೇ ಆಗಲ್ಲ : ಮೋದಿ ವಾಗ್ದಾಳಿ
author img

By

Published : May 2, 2023, 5:01 PM IST

Updated : May 2, 2023, 7:55 PM IST

ಕಾಂಗ್ರೆಸ್​ ವಿರುದ್ಧ ಮೋದಿ ವಾಗ್ದಾಳಿ

ವಿಜಯನಗರ : ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ಇಂದು ವಿಜಯನಗರದ ಹೊಸಪೇಟೆಯಲ್ಲಿ ಪ್ರಧಾನಿ ಮೋದಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು. ಬಳಿಕ ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ನವ ಕರ್ನಾಟಕ ಸಂಕಲ್ಪ ಸಮಾವೇಶದಲ್ಲಿ ಭಾಗವಹಿಸಿದರು.

ಬಳಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ವೈಭವಯುತ ವಿಜಯನಗರ ಸಾಮ್ರಾಜ್ಯದ ಜನತೆಗೆ ನನ್ನ ನಮಸ್ಕಾರಗಳು. ಹಂಪಿ ವಿರೂಪಾಕ್ಷ, ಉಗ್ರ ನರಸಿಂಹಸ್ವಾಮಿ, ಹುಲಿಗೆಮ್ಮ ದೇವಿಗೆ ಪ್ರಣಾಮಗಳು ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದರು. ಬಳಿಕ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕಾಂಗ್ರೆಸ್ ಇಂದು ತನ್ನ ಪ್ರಣಾಳಿಕೆಯಲ್ಲಿ ಬಜರಂಗ ದಳ ನಿಷೇಧ ಮಾಡೋ ಭರವಸೆ ನೀಡಿದೆ. ಇದು ದೌರ್ಭಾಗ್ಯ. ಮೊದಲು ಪ್ರಭು ಶ್ರೀರಾಮನನ್ನು ಬಂಧಿಸಿ ಇಟ್ಟಿದ್ದರು. ಈಗ ಜೈ ಭಜರಂಗಿ ಬಲಿ ಎನ್ನುವವರ ಬಂಧನಕ್ಕೆ ಕಾಂಗ್ರೆಸ್​ ಸಂಕಲ್ಪ ಮಾಡಿದೆ. ಕಾಂಗ್ರೆಸ್​ಗೆ ಶ್ರೀರಾಮ ಹಾಗೂ ಹನುಮಂತನನ್ನು ಕಂಡರೆ ಆಗಲ್ಲ. ಈಗ ಜೈ ಭಜರಂಗಿ ಎನ್ನುವ ಜನರಿಂದ ಅವರಿಗೆ ಸಮಸ್ಯೆ ಆಗಿದೆ. ಇಡೀ ದೇಶದಲ್ಲಿ ಕರ್ನಾಟಕವನ್ನು ನಂಬರ್ ಒನ್ ರಾಜ್ಯ ಮಾಡುವುದು ನಮ್ಮ ಸಂಕಲ್ಪ. ಈ ಸಂಕಲ್ಪಕ್ಕೆ ಪ್ರಭು ಹನುಮಾನ್ ಆಶೀರ್ವಾದ ಕೇಳಲು ಬಂದಿದ್ದೇವೆ ಎಂದು ಹೇಳಿದರು.

ಬಿಜೆಪಿಯು ಅಭಿವೃದ್ಧಿ ಪೂರಕವಾದ ಪ್ರಣಾಳಿಕೆಯನ್ನು ನೀಡಿದೆ. ಬಿಜೆಪಿ ಯಾವುದೇ ಕಾರಣಕ್ಕೂ ಕರ್ನಾಟಕದ ಘನತೆಗೆ ಧಕ್ಕೆ ಬಾರದ ರೀತಿಯಲ್ಲಿ ನಡೆದುಕೊಳ್ಳುತ್ತದೆ. ಹಂಪಿಗೆ ಭಾರತ ಅಷ್ಟೇ ಅಲ್ಲ, ಇಡೀ ವಿಶ್ವದಲ್ಲೇ ಗೌರವ ಇದೆ. ಕಾಂಗ್ರೆಸ್ ಪಕ್ಷ ಹಂಪಿಯ ಇತಿಹಾಸ, ಪರಂಪರೆಗೆ ಮಹತ್ವ ಕೊಡಲಿಲ್ಲ. ಆದರೆ ಬಿಜೆಪಿ ಸರ್ಕಾರ ಬಂದ ಮೇಲೆ ಹಂಪಿ ರಥದ ಚಿತ್ರವನ್ನು 50 ರೂಪಾಯಿ ನೋಟ್ ಮೇಲೆ ಮುದ್ರಿಸಿದ್ದೇವೆ. ಕೇಂದ್ರ ಸ್ವದೇಶಿ ದರ್ಶನ ಯೋಜನೆಯಲ್ಲಿ ಹಂಪಿ ಸೇರ್ಪಡೆ ಮಾಡಿದ್ದೇವೆ. ಪ್ರಮುಖ ಪ್ರವಾಸಿ ತಾಣಗಳಲ್ಲಿ ಹಂಪಿ, ಬಾದಾಮಿ, ಪಟ್ಟದಕಲ್ಲು, ವಿಜಯಪುರವನ್ನು ಸೇರಿಸಲಾಗಿದೆ ಎಂದು ಮೋದಿ ತಿಳಿಸಿದರು.

ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಡಬಲ್ ಇಂಜಿನ್ ಸರ್ಕಾರ ಸಾಕಷ್ಟು ಕೆಲಸ ಮಾಡಿದೆ. ಪ್ರಧಾನಿ ಫಸಲ್​​ ವಿಮೆ ಯೋಜನೆ ಮೂಲಕ ರೈತರಿಗೆ ಈ ಸಾಕಷ್ಟು ಅನುಕೂಲ ಆಗಿದೆ. 11 ಕೋಟಿ ರೈತರು ಯೋಜನೆಯ ಫಲಾನುಭವಿಗಳಾಗಿದ್ದಾರೆ. 50 ಲಕ್ಷ ರೈತರಿಗೆ ಕಿಸಾನ್​ ಸಮ್ಮಾನ್​ ಯೋಜನೆಯಿಂದ ಲಾಭವಾಗುತ್ತಿದೆ. ಕೇಂದ್ರ ಸರ್ಕಾರದ 6 ಸಾವಿರ ಜೊತೆಗೆ 4 ಸಾವಿರ ರೂಪಾಯಿಯನ್ನು ರಾಜ್ಯ ಸರ್ಕಾರ ನೀಡುತ್ತಿದೆ ಎಂದು ಹೇಳಿದರು.

ವಿಜಯನಗರ ಸಾಮ್ರಾಜ್ಯದ ಇತಿಹಾಸ ಇಡೀ ದೇಶಕ್ಕೆ ಗೌರವ ತಂದುಕೊಟ್ಟಿದೆ. ಪುರಾಣದಲ್ಲಿಯೂ ವಿಜಯನಗರ ಜಿಲ್ಲೆಯ ಉಲ್ಲೇಖವಿದೆ. ಶ್ರೀಕೃಷ್ಣ ದೇವರಾಯ ಹಲವು ದೇಶಗಳ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದರು. ಇಂದು ಭಾರತ ವಿಜಯನಗರ ಸಾಮ್ರಾಜ್ಯದ ಹಾದಿಯಲ್ಲೇ ನಡೆಯುತ್ತಿದೆ. ಜಿಲ್ಲೆಯ ಮತ್ತೊಂದು‌ ವಿಶೇಷ ಎಂದರೆ ಇದು ರಾಜ್ಯದ ಯುವಕರ ಜಿಲ್ಲೆ ಆಗಿದೆ. ಈ ಬಾರಿ ಬಿಜೆಪಿಗೆ ಮತ ನೀಡಿ ಎಂದು ಮೋದಿ ಮನವಿ ಮಾಡಿದರು.

ಪ್ರತ್ಯೇಕ ಜಿಲ್ಲೆ ಘೋಷಣೆಯಾದ ಬಳಿಕ ಬಿಜೆಪಿ ಅವಧಿಯಲ್ಲಿ ಇಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಪ್ರಾರಂಭವಾಗಿವೆ. ಕಾಂಗ್ರೆಸ್​ನವರು ಹತ್ತಾರು ವರ್ಷ ಆಡಳಿತ ನಡೆಸಿದರು. ಆದರೆ ಯಾವುದೇ ಅಭಿವೃದ್ಧಿ ಕಾರ್ಯ ಮಾಡಲಿಲ್ಲ. ಆದರೆ ಇಂದು ನಗರಗಳಲ್ಲಿ ಸಿಗುವ ಸೌಲಭ್ಯ ಗ್ರಾಮಗಳಲ್ಲಿ ಸಿಗುವಂತೆ ಬಿಜೆಪಿ ಸರ್ಕಾರ ಮಾಡಿದೆ.‌ ಅಲ್ಲದೆ ನೀರಾವರಿ ಸಮಸ್ಯೆ ಪರಿಹರಿಸಲು ಬಿಜೆಪಿ ಸರ್ಕಾರ ಪ್ರಯತ್ನಪಟ್ಟಿದೆ. 70 ಕೆರೆಗಳನ್ನು ಬಿಜೆಪಿ ನಿರ್ಮಾಣ ಮಾಡಿದೆ. ಜಿಲ್ಲೆಯಲ್ಲಿ ಕೃಷಿ ವಿದ್ಯಾಲಯವನ್ನು ಸ್ಥಾಪನೆ ಮಾಡಿದೆ. ಅಲ್ಲದೆ ಡಿಜಿಟಲ್ ಇಂಡಿಯಾದಂತಹ ಯೋಜನೆಗಳು ನಗರ, ಹಳ್ಳಿಗಳ ನಡುವಿನ ಅಂತರ ಕಡಿಮೆ ಮಾಡಿವೆ ಎಂದು ಹೇಳಿದರು.

ಕಾಂಗ್ರೆಸ್ ರಾಜ್ಯದಲ್ಲಿ ಸಾಕಷ್ಟು ಗ್ಯಾರಂಟಿಗಳನ್ನು ತೆಗೆದುಕೊಂಡು ಬಂದಿದೆ. ಕಾಂಗ್ರೆಸ್​ ಗ್ಯಾರಂಟಿ ಹೆಸರಲ್ಲಿ ಜನರಿಗೆ ಸುಳ್ಳು ಭರವಸೆಗಳನ್ನು ನೀಡುತ್ತಿದೆ. ಬಡತನ ನಿರ್ಮೂಲನೆಯನ್ನು ಕಾಂಗ್ರೆಸ್ ಮಾಡಿಲ್ಲ. ಕಾಂಗ್ರೆಸ್ ತಾವು ಅಧಿಕಾರದಲ್ಲಿರುವ ಯಾವ ರಾಜ್ಯದಲ್ಲೂ ನೀಡಿದ ಭರವಸೆಯನ್ನು ಜಾರಿ ಮಾಡಿಲ್ಲ. ಕಾಂಗ್ರೆಸ್​ 85% ಕಮಿಷನ್ ಹೊಡೆಯಲು ಅನೇಕ ಭರವಸೆಗಳನ್ನು ನೀಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ರು.

ಕಾಂಗ್ರೆಸ್​​ ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿದ್ದಾರೆ : ಕಾಂಗ್ರೆಸ್ ದುರಂಹಂಕಾರಿ ಪಕ್ಷ. ದೇಶದ ಗ್ರಾಮ ಪಂಚಾಯತ್​ನಿಂದ ಹಿಡಿದು ಪಾರ್ಲಿಮೆಂಟ್ ವರೆಗೂ ಅವರದೇ ಆಡಳಿತ ಇತ್ತು. ಇವರ ದುರಂಹಂಕಾರದಿಂದ ಇಂದು ಮೂರು ರಾಜ್ಯಗಳಲ್ಲಿ ಮಾತ್ರ ಅಧಿಕಾರ ಉಳಿಸಿಕೊಂಡಿದೆ. ಈ ಮೂರು ರಾಜ್ಯದಲ್ಲಿ ಕಾಂಗ್ರೆಸ್ ನವರ ಭ್ರಷ್ಟಾಚಾರದ ಹಸಿವು ತುಂಬುತ್ತಿಲ್ಲ. ಹಾಗಾಗಿ ಕರ್ನಾಟಕದ ಜನರ ಹಣ ಲೂಟಿ ಮಾಡಲು ಮುಂದಾಗಿದ್ದಾರೆ. ಕರ್ನಾಟಕವನ್ನು ತನ್ನ ಎಟಿಎಂ ಮಾಡಿಕೊಳ್ಳಲು ಮುಂದಾಗಿದೆ. ಹೀಗಾಗಿ ಕರ್ನಾಟಕದ ಜನತೆ ಎಚ್ಚರದಿಂದ ಇದ್ದು ಅವರನ್ನು ಅಧಿಕಾರದಿಂದ ದೂರ ಇಡಬೇಕಿದೆ ಎಂದು ತಿಳಿಸಿದರು.

ಪ್ರಧಾನಿ ಮೋದಿಯವರು ಇದೇ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ್ದು, ಪ್ರಧಾನಿಯನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಈ ವೇಳೆ ಮೋದಿ ಅಭಿಮಾನಿಗಳು ಜೈಕಾರ ಕೂಗಿದರು. ಪ್ರಧಾನಿ ಸಮಾವೇಶಕ್ಕೆ ಹೂವಿನ ಹಡಗಲಿ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಹರಪನಹಳ್ಳಿ, ವಿಜಯನಗರ ಕ್ಷೇತ್ರಗಳಿಂದ ಜನರು ಆಗಮಿಸಿದ್ದರು. ಬೆಳಗ್ಗೆಯಿಂದ ಸಂಜೆ ಮೂರು ಗಂಟೆವರೆಗೆ ಕಾಲೇಜು ರಸ್ತೆ ಹಾಗೂ ನಗರದ ಉತ್ತರ ದಿಕ್ಕಿನ ಬೈಪಾಸ್ ರಸ್ತೆಯಲ್ಲಿ ಬಹುತೇಕ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿತ್ತು.

ಇದನ್ನೂ ಓದಿ : ವಿಜಯನಗರ ಸಾಮ್ರಾಜ್ಯಕ್ಕೆ ಬಂದಳಿದ ಪ್ರಧಾನಿ ಮೋದಿ: ನೇರಪ್ರಸಾರ

Last Updated : May 2, 2023, 7:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.