ಹೊಸಪೇಟೆ (ವಿಜಯನಗರ): ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ವಿಶೇಷಚೇತನ ಬಾಲ ಅಭಿಮಾನಿಯೊಬ್ಬ ಅನಾರೋಗ್ಯದಿಂದ ಮೃತಪಟ್ಟಿದ್ದಾನೆ. 16 ವರ್ಷದ ಆದರ್ಶ ಎಂಬ ವಿಶೇಷ ಚೇತನ ಅಭಿಮಾನಿ ಜನನದಿಂದಲೇ ನಾನಾ ಕಾಯಿಲೆಯಿಂದ ಬಳಲುತ್ತಿದ್ದ.
ಬಾಲ್ಯದಿಂದಲೇ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿಮಾನಿಯಾಗಿದ್ದ ಈತ ಅಪ್ಪು ಅವರನ್ನ ನೋಡಬೇಕು ಎಂಬ ಆಸೆ ಇಟ್ಟುಕೊಂಡಿದ್ದ. ಈ ವಿಷಯ ತಿಳಿಯುತ್ತಿದ್ದಂತೆ ಪುನೀತ್ ರಾಜ್ಕುಮಾರ್ ವಿಶೇಷ ವಾಹನದ ಮೂಲಕ ಬಾಲಕನನ್ನು ಬೆಂಗಳೂರಿನ ನಿವಾಸಕ್ಕೆ ಕರೆಸಿಕೊಂಡಿದ್ದರು. ಅಲ್ಲದೇ ಆತನ ಚಿಕಿತ್ಸೆಗೂ ನೆರವು ನೀಡುವುದಾಗಿ ತಿಳಿಸಿದ್ದರು. ಆದರೆ, ವಿಶೇಷ ಚೇತನ ಅಭಿಮಾನಿ ಈಗ ಕೊನೆಯುಸಿರೆಳೆದಿದ್ದಾನೆ.
ಓದಿ: ಕೊರೊನಾ ಕಷ್ಟದಲ್ಲಿ ಸಹಾಯ ಮಾಡಿದ ನಿಜ ಜೀವನದ ರಿಯಲ್ ಸ್ಟಾರ್ಸ್ ಇವ್ರು