ETV Bharat / state

ಪೆಟ್ರೋಲ್​ ಹಾಕ್ಸೋ ಮುನ್ನ ಜೀರೊ ನೋಡ್ರಿ... ಬಳ್ಳಾರಿಯ ಈ ಬಂಕ್​ನಲ್ಲಿ ಎಂಥ ಮೋಸ ನಡೆದಿದೆ ನೋಡಿ - ಬಳ್ಳಾರಿಯಲ್ಲಿ ಬಂಕ್ ನ ಮಾಲೀಕರನ್ನ ತೀವ್ರ ತರಾಟೆಗೆ ತೆಗೆದುಕೊಂಡ ಗ್ರಾಹಕರು

ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲು ಗ್ರಾಮ ಹೊರವಲಯದ ಬಂಕ್​ವೊಂದರಲ್ಲಿ ಬಾಟಲಿಯೊಳಗೆ ಪೆಟ್ರೋಲ್​ ತುಂಬಿಸಿಕೊಂಡಾಗ ಮುಕ್ಕಾಲು ಭಾಗ ಮಾತ್ರ ತುಂಬಿದ್ದು, ಇನ್ನೂ ಕಾಲು ಭಾಗ ಖಾಲಿ ಇರುವ ವಿಡಿಯೋ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಈ ಹಿನ್ನೆಲೆಯಲ್ಲಿ ಬಳ್ಳಾರಿ ಬಂಕ್​ನಲ್ಲಿ ಮೋಸ ಮಾಡಲಾಗುತ್ತಿದೆ ಎಂಬ ಎಚ್ಚರಿಕೆಯನ್ನೂ ನೀಡಲಾಗಿದೆ.

petrol-fraud-in-bellary
ಗಣಿನಾಡಿನ ಪೆಟ್ರೋಲ್ ಬಂಕ್​​​ಗಳಲ್ಲಿ ಮಹಾಮೋಸ : ಲೀಟರ್ ಪೆಟ್ರೋಲ್​​​ಗೂ ಕನ್ನ.!
author img

By

Published : Dec 18, 2019, 4:51 PM IST

ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲು ಗ್ರಾಮ ಹೊರವಲಯದ ಬಂಕ್​ವೊಂದರಲ್ಲಿ ಬಾಟಲಿಯೊಳಗೆ ಪೆಟ್ರೋಲ್​ ತುಂಬಿಸಿಕೊಂಡಾಗ ಮುಕ್ಕಾಲು ಭಾಗ ಮಾತ್ರ ತುಂಬಿದ್ದು, ಇನ್ನೂ ಕಾಲು ಭಾಗ ಖಾಲಿ ಇರುವ ವಿಡಿಯೋ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಈ ಹಿನ್ನೆಲೆಯಲ್ಲಿ ಬಳ್ಳಾರಿ ಬಂಕ್​ನಲ್ಲಿ ಮೋಸ ಮಾಡಲಾಗುತ್ತಿದೆ ಎಂಬ ಎಚ್ಚರಿಕೆಯನ್ನೂ ನೀಡಲಾಗಿದೆ.

ಗಣಿನಾಡಿನ ಪೆಟ್ರೋಲ್ ಬಂಕ್​​​ಗಳಲ್ಲಿ ಮಹಾಮೋಸ : ಲೀಟರ್ ಪೆಟ್ರೋಲ್​​​ಗೂ ಕನ್ನ.!

ಪೆಟ್ರೋಲ್ ಹಾಕುವಾಗ ರೀಡಿಂಗ್​ ಶೂನ್ಯದಿಂದ ಶುರು ಆಗಬೇಕು. ಆದ್ರೆ, ಇಲ್ಲಿ ಶುರುವಾಗಿದ್ದು 11 ರೂ. ನಿಂದ ಎಂದು ಗ್ರಾಹಕರು ಆರೋಪಿಸಿದ್ದು, ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಇದಕ್ಕೆ ಸಬೂಬು ನೀಡುವ ಮಾಲೀಕರು ಮಷಿನ್ ಸರಿಯಾಗಿಲ್ಲ ಅದನ್ನು ರಿಪೇರಿಗೆ ಕಳಿಸುತ್ತೇವೆ ಎಂದು ಹೇಳಿ ಜಾರಿಕೊಂಡಿದ್ದಾರೆ.

Intro:ಗಣಿನಾಡಿನ ಪೆಟ್ರೋಲ್ ಬಂಕ್ ಗಳಲ್ಲಿ ಮಹಾಮೋಸ
ಲೀಟರ್ ಪೆಟ್ರೋಲ್ ಗೂ ಕನ್ನ ಹಾಕುವ ಕದೀಮರು…!
ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯ ಪೆಟ್ರೋಲ್ ಬಂಕ್ ಗಳಲ್ಲಿ ಮಹಾಮೋಸ ನಡೆಯುತ್ತಿದೆ. ಲೀಟರ್ ಪೆಟ್ರೋಲ್ ಗೂ ಕನ್ನ ಹಾಕೋದು ಕೂಡ ಬೆಳಕಿಗೆ ಬಂದಿದೆ.‌ ಪೆಟ್ರೋಲ್ ಪಂಪ್ ಗಳಲ್ಲಿ ತಾಂತ್ರಿಕ ದೋಷವಿದ್ದರೂ ವ್ಯಾಪಾರ ಮುಂದುವರಿಸಿದ ಬಹುತೇಕ ಪೆಟ್ರೋಲ್ ಬಂಕ್ ಗಳಲ್ಲಿ ಗ್ರಾಹಕರ ಜೇಬಿಗೆ ಕತ್ತರಿ ಹಾಕುವ ಬಂಕ್ ಮಾಲೀಕರೂ ಇದ್ದಾರೆ.
ಹೌದು, ಇಂಥದೊಂದು ದೃಶ್ಯವಂತೂ ಜಿಲ್ಲೆಯ ನಾನಾ ಪೆಟ್ರೋಲ್ ಬಂಕ್ ಗಳಲ್ಲಿ ಕಂಡುಬರುತ್ತಿದೆ.‌ ಅದನ್ನು ಪ್ರಶ್ನಿಸಿದ ಗ್ರಾಹಕರಿಗೆ ಮಾಲೀಕರು ಹಾಗೂ ಕಾರ್ಮಿಕರಿಂದ ಗುಟುರು ಹಾಕುವ ಸನ್ನಿವೇಶ ವಂತೂ ಹೊಸದೇನಲ್ಲ.‌
ನಮ್ಮ ಬಂಕ್ ನ‌ ಮಿಷನ್ ಗಳಿರೋದು ಹೀಗೆ.‌ ಪೆಟ್ರೋಲ್ ಹಾಕಿದ್ರೆ ಹಾಕಿಸಿಕೊಳ್ಳಿ. ಬಿಟ್ಟರೆ ಬಿಡಿ ಎಂಬ ಉದ್ಘಾರದ ಮಾತುಗಳನ್ನಾಡಿ ಗ್ರಾಹಕರ ಸಿಟ್ಟನ್ನು ತಹಬದಿಗೆ ತರುತ್ತಾರೆ.‌
ಮುಂದೇನು ಪೆಟ್ರೋಲ್ ಬಂಕ್ ಸಿಗುತ್ತೋ ಇಲ್ವಾ ಅಥವಾ ಅದು ಸಿಕ್ಕರೆ ಎಷ್ಟು ದೂರದಲ್ಲಿದೆ ಎಂಬ ಆತಂಕದಲ್ಲಿರೋ ಗ್ರಾಹಕರು ದೂರದ ಊರಿಗೆ ಹೋಗುವ ಸಲುವಾಗಿ ಅನಿವಾರ್ಯತೆಯಿಂದ ಇದ್ದ ಪೆಟ್ರೋಲ್ ಬಂಕ್ ನಲ್ಲೇ ಪೆಟ್ರೋಲ್ ಹಾಕಿಸಿಕೊಂಡು ಹೋಗುತ್ತಾರೆ.‌ ಆದರೆ, ಪೆಟ್ರೋಲ್ ಹಾಕಿಸಿಕೊಂಡು ಊರ ಸಮೀಪ ಬರುತ್ತಿದ್ದಂತೆಯೇ ಪೆಟ್ರೋಲ್ ಖಾಲಿಯಾಗಿರುತ್ತೆ. ಅಯ್ಯೊ ಅದೆಂಥಾ ಪೆಟ್ರೋಲ್ ಹಾಕಿದ್ದಾನೆ ಅವನು ಎಂದು ಬೈದುಕೊಳ್ಳುತ್ತಾ.‌ ಊರೊಳಗೆ ತಮ್ಮ ಬೈಕ್ ಅನ್ನು ತಳ್ಳಿಕೊಂಡೇ ಮುಂದ್ಹೋಗಿ, ಊರಿನಲ್ಲಿರೊ ಡಬ್ಬಿ ಅಂಗಡಿಗಳ ಮೇಲ್ಭಾಗದಲ್ಲಿ ಬಾಟಲ್ ನಲ್ಲಿ ನೇತಾಡುತ್ತಿದ್ದ ಪೆಟ್ರೋಲ್ ಅನ್ನು ಖರೀದಿಸಿ ಬೈಕ್ ನ ಬಾಯಿಗೆ ಸುರಿಯುತ್ತಾರೆ. ಅದು ಕೂಡ ಸೀಮೆಎಣ್ಣೆ ಮಿಶ್ರಿತ ಪೆಟ್ರೋಲ್ ಆಗಿರುತ್ತದೆ.‌ ಬೈಕ್ ಎಂಜಿನ್ ಗೆ ಭಾರೀ ಪ್ರಮಾಣದ ಪೆಟ್ಟಾಗುವ ಸಾಧ್ಯತೆ ಹೆಚ್ಚಾಗಿರುತ್ತೆ.‌ ಇದು ಪೆಟ್ರೋಲ್ ಬಂಕ್ ನವ್ರು ಮಾಡುವ ಅವಾಂತರದಿಂದಲೇ ಇಂತಹ ಘಟನೆಗಳು ಸಂಭವಿಸು ತ್ತಿವೆ.
ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲು ಗ್ರಾಮ ಹೊರವಲಯದ ಎನ್.ಹೆಚ್.63ರಲ್ಲಿರೊ ಸ್ವಸ್ತಿಕ್ ಆಟೋ
ಕೇರ್ ಪೆಟ್ರೋಲ್ ಬಂಕ್ ನಲ್ಲಿ ಲೀಟರ್ ಪೆಟ್ರೋಲ್ ಅನ್ನು ಬಾಟಲ್ ನೊಳಗೆ ಗ್ರಾಹಕನೊರ್ವನು ತುಂಬಿಸಿಕೊಂಡು
ಬಂದಾಗ ಮುಕ್ಕಾಲು ಭಾಗ ಮಾತ್ರ ಪೆಟ್ರೋಲ್ ಇದೆ. ಇನ್ನೂ ಕಾಲುಭಾಗದಲ್ಲಿ ಪೆಟ್ರೋಲ್ ಇಲ್ಲದಿರೋದನ್ನು ಕಂಡುಬಂದ ವಿಡಿಯೊ ವೊಂದು ಸಾಮಾಜಿಕ ಜಾಲತಾಣ ಗಳಲ್ಲಿ ವೈರಲ್ ಆಗಿದೆ.
Body:ಒಂದು ಲೀಟರ್ ಪೆಟ್ರೋಲ್ ಹಾಕೋ ಮುನ್ನ 11 ರೂ.ಗಳ ಮೌಲ್ಯದ 0.14 ಲೀ. ಎಂದು ಪೆಟ್ರೋಲ್ ಪಂಪ್ ನ ಮೀಟರ್
ತೋರಿಸುತ್ತದೆ. ಅದನ್ನು ಸೂಕ್ಷ್ಮವಾಗಿ ಪತ್ತೆ ಹಚ್ಚಿದ ಸ್ಥಳೀಯ ಗ್ರಾಹಕರು ಬಂಕ್ ನ ಮಾಲೀಕರು, ನೌಕರರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಪೆಟ್ರೋಲ್ ಪಂಪ್ ನಲ್ಲಿ ಹಣ- ಲೀಟರ್ ನಮೂದಿಸುತ್ತಿದ್ದಂತೆ ಪೆಟ್ರೋಲ್ ಹಾಕುವ ಮುನ್ನ 11 ರೂ.ಗಳ, 0.14 ಲೀ. ಪೆಟ್ರೋಲ್ ಹಾಕಿದೆ ಎಂದು ರೀಡಿಂಗ್ ತೋರಿಸಿದ್ದೆ ಗ್ರಾಹಕರನ್ನು ಕೆರಳಿಸುವಂತೆ ಮಾಡಿದೆ. ಯಂತ್ರೋಪಕರಣದಲ್ಲಿ ತಾಂತ್ರಿಕ ದೋಷ ಕಂಡುಬರು ತ್ತಿದ್ದಂತೆ, ಯಂತ್ರವನ್ನು ಬಂದ್ ಮಾಡಿ ದುರಸ್ತಿಗಾಗಿ ತಿಳಿಸುತ್ತೇವೆ ಎಂದು ಸಬೂಬು ಹೇಳಿ ಜಾರಿಕೊಂಡ ಮಾಲೀಕರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_1_PETROL_BUNK_MOSHA_VSL_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.