ETV Bharat / state

ಗಣಿನಾಡಲ್ಲಿ ಪೆಟ್ರೋಲ್​-ಡೀಸೆಲ್​​ ಪಂಪ್​​ ಸಮರ್ಪಕ ನಿರ್ವಹಣೆ.. ದಾಖಲಾಗಿಲ್ಲ ಒಂದೇ ಒಂದು ದೂರು

author img

By

Published : Mar 15, 2021, 7:40 PM IST

ಗಣಿ ಜಿಲ್ಲೆಯ ಎಲ್ಲಾ ಪೆಟ್ರೋಲ್ ಹಾಗೂ ಡೀಸೆಲ್ ಪಂಪ್​​ಗಳು ಸರ್ಕಾರದ ನಿಯಮಾನುಸಾರವಾಗಿ ಕಾರ್ಯ ನಿರ್ವಹಿಸುತ್ತಿವೆ. ಅಕ್ರಮ ಕುರಿತು ಯಾವುದೇ ದೂರು ಅಥವಾ ಪ್ರಕರಣಗಳು ದಾಖಲಾಗಿಲ್ಲ ಅಂತ ಕಾನೂನು ಮಾಪನ ಶಾಸ್ತ್ರ ನಿಯಂತ್ರಕಿ ಅಮೃತಾ ಮಾಹಿತಿ ನೀಡಿದ್ದಾರೆ.

petrol-diesel-pump
ಪೆಟ್ರೋಲ್​-ಡೀಸೆಲ್​​ ಪಂಪ್

ಬಳ್ಳಾರಿ: ಗಣಿನಾಡು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಭಾರತ್ ಪೆಟ್ರೋಲಿಯಂ, ಇಂಡಿಯನ್ ಆಯಿಲ್, ರಿಲಯನ್ಸ್ ಸೇರಿದಂತೆ ನಾನಾ ಕಂಪನಿಗಳ ಪೆಟ್ರೋಲ್ ಪಂಪ್​​ಗಳಿವೆ. ಆದರೆ ಈ ಪೆಟ್ರೋಲ್ ಪಂಪ್​ಗಳಲ್ಲಿ ಈವರೆಗೆ ಕಳಪೆ ಗುಣಮಟ್ಟದ ಇಂಧನ ಅಥವಾ ಅಳತೆಯಲ್ಲಿ ಮೋಸದಂತಹ ಒಂದೂ ಪ್ರಕರಣ ಕಂಡುಬಂದಿಲ್ಲ.

ಇತ್ತೀಚೆಗೆ ದಿಢೀರನೆ ಕಾನೂನು ಮಾಪನಶಾಸ್ತ್ರ ಸಹಾಯಕ‌ ನಿಯಂತ್ರಕ ಅಧಿಕಾರಿವರ್ಗವು ವೀಕ್ಷಣೆ ನಡೆಸಿ ಪೆಟ್ರೋಲ್ ಪಂಪ್​​ ಮಾಲೀಕರಿಗೆ ಬಿಸಿ ಮುಟ್ಟಿಸಿತ್ತು. ಆದರೆ ಒಂದೂ ಪ್ರಕರಣ ದಾಖಲಾಗಿಲ್ಲ. ಇದಲ್ಲದೇ ಪೆಟ್ರೋಲ್ ಪಂಪ್​​ಗಳಲ್ಲಿನ ಪೆಟ್ರೋಲ್ ಸಂಗ್ರಹಾಗಾರದ ಕೆಳಮಹಡಿಯ ಟ್ಯಾಂಕಿನೊಳಗೆ ಮಳೆ ಅಥವಾ ಒಳಚರಂಡಿ ನೀರು ಮಿಶ್ರಣಗೊಂಡ, ಕಲಬೆರಕೆ ಇಂಧನ ಪೂರೈಕೆ ಮಾಡಿರುವ ಪ್ರಕರಣಗಳು ಈವರೆಗೂ ಉಭಯ ಜಿಲ್ಲೆಗಳಲ್ಲಿ ಕಂಡುಬಂದಿಲ್ಲ.

ಗಣಿನಾಡಲ್ಲಿ ಪೆಟ್ರೋಲ್​-ಡೀಸೆಲ್​​ ಪಂಪ್​​ ಸಮರ್ಪಕ ನಿರ್ವಹಣೆ

ಇತ್ತ ನಗರದಲ್ಲಿ ಕೆಲವೊಂದು ಪಂಪ್​ಗಳು ವ್ಯಾಪಾರ-ವಹಿವಾಟು ಇಲ್ಲದೇ ಮುಚ್ಚಿಕೊಂಡರೆ ಇನ್ನೂ ಹಲವೆಡೆ ಹೊಸ ಪಂಪ್​ಗಳು ಜನರ ಸೇವೆಗೆ ತೆರೆದುಕೊಂಡಿವೆ.

ಈ ಕುರಿತು ಈಟಿವಿ ಭಾರತ್​​ಗೆ ಪ್ರತಿಕ್ರಿಯಿಸಿರುವ ಕಾನೂನು ಮಾಪನ ಶಾಸ್ತ್ರ ನಿಯಂತ್ರಕಿ ಅಮೃತಾ ಪಿ. ಚವ್ಹಾಣ, ಈ ಉಭಯ ಜಿಲ್ಲೆಗಳಲ್ಲಿರುವ ಪೆಟ್ರೋಲ್ ಪಂಪ್​​ಗಳಲ್ಲಿ ಇಂಧನದ ಗುಣಮಟ್ಟ ಹಾಗೂ ಸಾಮರ್ಥ್ಯವನ್ನು ಕೋಲಿನಿಂದ ಅಳೆದು, ಕಾನೂನು ಮಾಪನ ಶಾಸ್ತ್ರದೊಳಗಡೆ ತಪಾಸಣೆಗೆ ಒಳಪಡಿಸೋದನ್ನ ಕಡ್ಡಾಯವಾಗಿ ಮಾಡುತ್ತೇವೆ.

ಈವರೆಗೂ ಕಲಬೆರಕೆ ಅಥವಾ ಕಳಪೆಮಟ್ಟದ ಇಂಧನ ಪೂರೈಕೆ ಮಾಡಿರುವುದು ಬೆಳಕಿಗೆ ಬಂದಿಲ್ಲ. ಜಿಲ್ಲಾಧಿಕಾರಿ ಸೇರಿದಂತೆ ಬೆಳಗಾವಿ ಜಿಲ್ಲೆಯಿಂದ ವಿಶೇಷ ಸ್ಕ್ವಾಡ್ ವೊಂದು ಆಗಮಿಸಿ ಈ ಇಂಧನ ಪೂರೈಕೆ ಪ್ರಮಾಣ ಹಾಗೂ ಗುಣಮಟ್ಟದ ಬಗ್ಗೆ ಆಗಾಗ ತಪಾಸಣೆ ಮಾಡಿ ಹೋಗ್ತಾರೆ. ಕಲಬೆರಕೆ ಅಥವಾ ಕಳಪೆಮಟ್ಟದ ಇಂಧನ ಪೂರೈಕೆ ಮಾಡಿದ್ದಲ್ಲಿ ಅಂಥ ಪೆಟ್ರೋಲ್ ಪಂಪ್​​​ಗಳ‌ ಮಾಲೀಕರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಶಿಸ್ತುಕ್ರಮ ಜರುಗಿಸಲು ಕಾನೂನು ಮಾಪನ ಶಾಸ್ತ್ರ ಸಹಾಯಕ ನಿಯಂತ್ರಕರ ಕಚೇರಿಯು ಸದಾ ಬದ್ಧವಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ಕ್ರಿಮಿನಾಶಕ ಸೇವಿಸಿ ಪೊಲೀಸ್​ ಕಾನ್ಸ್​ಟೇಬಲ್ ಆತ್ಮಹತ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.