ಬಳ್ಳಾರಿ : ಕೊರೊನಾ ಎರಡನೇ ಅಲೆ ಹೆಚ್ಚಾದ ಹಿನ್ನೆಲೆ ರಾಜ್ಯವ್ಯಾಪಿ ಕೊರೊನಾ ಕರ್ಫ್ಯೂ ಜಾರಿಯಲ್ಲಿರೋದ್ರರಿಂದ, ದಿನ ಒಂದೊಂದು ಬಾಟಲ್ ಖರೀಸದಿ ಬದಲು, ಒಟ್ಟಿಗೆ ಮದ್ಯದ ಬಾಕ್ಸ್ಗಳನ್ನೇ ಖರೀದಿಸಲು ಜಿಲ್ಲೆಯ ಮದ್ಯಪ್ರಿಯರು ಮುಂದಾಗಿದ್ದಾರೆ.
ಕೊರೊನಾ ಕರ್ಫ್ಯೂ ಕಾರಣ ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಮಾತ್ರ ಈ ಮದ್ಯ ಖರೀದಿಗೆ ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದೆ. ಆದರೆ, ದಿನವೂ ಮದ್ಯದ ಅಂಗಡಿಗಳಿಗೆ ಬಂದು ಖರೀದಿ ಮಾಡಲಿಕ್ಕಾಗದೇ ಒಂದೇ ಬಾರಿಗೆ ಮದ್ಯದ ಬಾಕ್ಸ್ಗಳನ್ನೇ ಖರೀದಿಸಲು ಮದ್ಯವ್ಯಸನಿಗಳು ಮುಂದಾಗಿದ್ದಾರೆ.
ಬಳ್ಳಾರಿ ತಾಲೂಕಿನ ನಾನಾ ಗ್ರಾಮಗಳಿಂದ ಈ ಮದ್ಯಪ್ರಿಯರು ಮದ್ಯ ಖರೀದಿಗಾಗಿ ಬಳ್ಳಾರಿ ನಗರದ ಮದ್ಯದ ಅಂಗಡಿಗಳಿಗೆ ಬರೋದು ವಾಡಿಕೆಯಾಗಿದೆ. ಆದರೆ, ಈ ಸಮಯದಲ್ಲಿ ಪ್ರತಿದಿನ ಬರೋದು ಕಷ್ಟವಾಗಿರುವ ಕಾರಣ ಒಟ್ಟೊಟ್ಟಿಗೆ ಕೇಸ್ಗಟ್ಟಲೇ ಎಣ್ಣೆ ಖರೀದಿಸುತ್ತಿದ್ದಾರೆ.
ಒಂದೇ ಬಾರಿಗೆ ಬಾಕ್ಸ್ ಅನ್ನೇ ಖರೀದಿಸಿದರೆ ಅಂದಾಜು 15- 20 ದಿನಗಳವರೆಗೆ ಬಳ್ಳಾರಿ ನಗರಕ್ಕೆ ಬರೋದು ತಪ್ಪುತ್ತೆ ಎಂಬೋದನ್ನ ಮನದಟ್ಟು ಮಾಡಿಕೊಂಡ ಮದ್ಯವ್ಯಸನಿಗಳು ಈ ಕಾರ್ಯಕ್ಕೆ ಮುಂದಾಗಿದ್ದಾರೆ.