ETV Bharat / state

ಕಿರು ಮೃಗಾಲಯ ಸ್ಥಳಾಂತರಕ್ಕೆ ಸ್ಥಳೀಯರ ವಿರೋಧ - Kannada news

ರೇಡಿಯೋ ಪಾರ್ಕ್‌ ಕಿರು ಮೃಗಾಲಯದಲ್ಲಿನ ಪ್ರಾಣಿ ಪಕ್ಷಿಗಳನ್ನು ಹೊಸಪೇಟೆ ತಾಲೂಕಿನ ಕಮಲಾಪುರದ ಹತ್ತಿರವಿರುವ ಅಟಲ್ ಬಿಹಾರಿ ವಾಜಪೇಯಿ ಝೂಲಾಜಿಕಲ್ ಬೃಹತ್ ಮೃಗಾಲಯಕ್ಕೆ ಸ್ಥಳಾಂತರ ಮಾಡಲು ನಿರ್ಧರಿಸಲಾಗಿದ್ದು, ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.

ಕಿರು ಮೃಗಾಲಯ
author img

By

Published : May 27, 2019, 8:18 PM IST

Updated : May 28, 2019, 5:45 PM IST

ಬಳ್ಳಾರಿ : ನಗರದ ರೇಡಿಯೋ ಪಾರ್ಕ್​ನಲ್ಲಿರುವ ಕಿರು ಮೃಗಾಲಯದಲ್ಲಿನ ಪ್ರಾಣಿಗಳನ್ನು ಅಟಲ್ ಬಿಹಾರಿ ವಾಜಪೇಯಿ ಝೂಲಾಜಿಕಲ್ ಮೃಗಾಲಯಕ್ಕೆ ಸ್ಥಳಾಂತರ ಮಾಡುವ ವಿಚಾರ ಸಾರ್ವಜನಿಕರನ್ನು ಮತ್ತು ಪ್ರಾಣಿ ಪಕ್ಷಿ ಪ್ರೇಮಿಗಳನ್ನು ಆತಂಕಕ್ಕೆ ಕಾರಣವಾಗಿದೆ..

ರೇಡಿಯೋ ಪಾರ್ಕ್‌ ಕಿರು ಮೃಗಾಲಯದಲ್ಲಿನ ಪ್ರಾಣಿ ಪಕ್ಷಿಗಳನ್ನು ಹೊಸಪೇಟೆ ತಾಲೂಕಿನ ಕಮಲಾಪುರದ ಹತ್ತಿರವಿರುವ ಅಟಲ್ ಬಿಹಾರಿ ವಾಜಪೇಯಿ ಝೂಲಾಜಿಕಲ್ ಬೃಹತ್ ಮೃಗಾಲಯಕ್ಕೆ ಸ್ಥಳಾಂತರ ಮಾಡಿದರೇ ಉಗ್ರ ಹೋರಾಟ ಮಾಡುತ್ತೇವೆ ಎಂದು ಸ್ನೇಕ್ ಸಮೀರ್ ಶೆಟ್ಟ್ ಸಾಬ್ರಿ ಮತ್ತು ಮಾನವ ಹಕ್ಕುಗಳ ಹೋರಾಟ ಸಮಿತಿಯ ಮೋಹನ್ ಬಾಬು ಎಚ್ಚರಿಕೆಯನ್ನು ನೀಡಿದ್ದಾರೆ.

ಕಿರು ಮೃಗಾಲಯ

1981ರಲ್ಲಿ ಮಾಜಿ ಶಾಸಕ ಭಾಸ್ಕರ್ ನಾಯ್ಡು ಅವರ ಹೋರಾಟದ ಪ್ರತಿಫಲದಿಂದ ಈ ಕಿರು ಮೃಗಾಲಯ ಆರಂಭವಾಗಿದೆ. ಮಾಜಿ ಮುಖ್ಯಮಂತ್ರಿ ಗುಂಡುರಾವ್ ಮತ್ತು ಮಾಜಿ ಅರಣ್ಯ ಸಚಿವ ಮಾದೇಗೌಡ್ರು ಈ ಮೃಗಾಲಯವನ್ನು ಉದ್ಘಾಟನೆ ಮಾಡಿದ್ದರು.

ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಕೆ

ಮೋಹನ್ ಮತ್ತು ಸಮಿರ್ ಶೆಟ್ ಇಬ್ಬರು ಸೇರಿ, ವನ್ಯ ಜೀವಿಯ ಪ್ರಿನ್ಸಿಪಾಲ್ ಚೀಫ್​ ಕಂಜುವೆಟ್ ಸಂಜಯ್ ಮೋಹನ್, ಚೀಪ್ ಕಂಜುವೇಟ್​ ಆಫೀಸರ್ ನಿಂಗರಾಜ್, ಜಿಲ್ಲಾಧಿಕಾರಿ ಡಾ.ರಾಮ್ ಪ್ರಸಾತ್ ಮನೋಹರ್ ಅವರಿಗೆ ಈ ಕಿರು ಮೃಗಾಲಯವನ್ನು ಸ್ಥಳಾಂತರ ಮಾಡಬೇಡಿ ಎಂದು ಮನವಿ ಪತ್ರ ಸಲ್ಲಿಸಿದ್ದೇವೆ ಎಂದು ಮಾಹಿತಿ ನೀಡಿದರು.

ಈಟಿವಿ ಭಾರತ್ ನೊಂದಿಗೆ ಮಾತನಾಡಿದ ವನ್ಯ ಜೀವಿ ಸಂರಕ್ಷಣಾ ವೇದಿಕೆ ರಾಜ್ಯ ಅಧ್ಯಕ್ಷ ಸ್ನೇಕ್ ಸಮೀರ್ ಶೆಟ್ ಸಾಬ್ರಿ, ಸುಮಾರು 15 ಸಾವಿರ ಹಾವುಗಳನ್ನು ಹಿಡಿದು ರಕ್ಷಣೆ ಮಾಡಿ ಅವುಗಳನ್ನು ಈ ಕಿರು ಮೃಗಾಲಯದಲ್ಲಿ ಬಿಟ್ಟು, ಅದರ ಚಲನವಲನ ತಿಳಿದು ನಂತರ ಅರಣ್ಯಕ್ಕೆ ಬಿಟ್ಟಿದ್ದೇನೆ. ಆದರೆ ಈ ಕಿರು ಮೃಗಾಲಯ ಸ್ಥಳಾಂತರಗೊಂಡರೆ ಎಲ್ಲಿ ಹಾವುಗಳನ್ನು ರಕ್ಷಣೆ ಮಾಡಿ ಬಿಡಬೇಕೆಂದು ಪ್ರಶ್ನೆ ಮಾಡಿದರು. ಈ ಕುರಿತು ಕ್ರಮಕೈಗೊಳ್ಳದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಮೃಗಾಲಯದಲ್ಲಿರುವ ಪ್ರಾಣಿ ಪಕ್ಷಿಗಳು

8 ಚಿರತೆಗಳು, 5 ಮೊಸಳೆ, 1 ಕರಡಿ, 45 ಕೃಷ್ಣಮೃಗ, 48 ಜಿಂಕೆ, 20 ಹಾವುಗಳು, 2 ಎಮು, 8 ನವಿಲುಗಳು, 1 ನರಿ, 1 ಕೋತಿ, 50 ನಕ್ಷತ್ರ ಕಲ್ಲು ಮತ್ತು ನೀರಾಮೆ, 4 ಕತ್ತೆ ಕಿರುಬಗಳಿವೆ, ಇವುಗಳಿಗೆ ಪ್ರತಿನಿತ್ಯ 30 ಕೆ.ಜಿ ಮಾಂಸ ಮತ್ತು, ಸಸ್ಯಹಾರಿ ಪ್ರಾಣಿಗಳಿಗೆ ಗೋದಿ, ನವಣೆ, ತರಕಾರಿ, ರಾಗಿ ನೀಡಲಾಗುತ್ತಿದೆ, ಒಟ್ಟು 8 ಜನರ ತಂಡ ಮೃಗಾಲಯವನ್ನು ನೋಡಿಕೊಳ್ಳುತ್ತಾರೆ.

ಮೃಗಾಲಯದಲ್ಲಿ ಸಂಗ್ರಹವಾದ ಶುಲ್ಕ ( 2019 )

ಜನವರಿ - 2,17,610 ರೂಪಾಯಿ.

ಫೆಬ್ರವರಿ - 1,42,600 ರೂಪಾಯಿ.

ಮಾರ್ಚ್ - 1,42,660 ರೂಪಾಯಿ.

ಏಪ್ರಿಲ್ - 1,78,690 ರೂಪಾಯಿ.

ಪ್ರವೇಶ ಶುಲ್ಕ ಹೆಚ್ಚಳ

2014 ರಲ್ಲಿ ಈ ಕಿರು ಮೃಗಾಲಯವನ್ನು ನವೀಕರಿಸಲಾಯಿತು. ಆಗ ಪ್ರವೇಶ ಶುಲ್ಕ ವಯಸ್ಕರಿಗೆ 15 ರೂಪಾಯಿ, ಮಕ್ಕಳಿಗೆ 10 ರೂಪಾಯಿ ನಿಗದಿ ಮಾಡಿ ಹೆಚ್ಚಿಸಲಾಗಿತ್ತು. ಈಗ ವಯಸ್ಕರಿಗೆ 20 ರೂಪಾಯಿ ನಿಗದಿ ಮಾಡಿದೆ.

ಕಿರು ಮೃಗಾಲಯ ನೋಡಲು ಬಂದ ಸಾರ್ವಜನಿಕರು ಕಿರು ಮೃಗಾಲಯ ಇಲ್ಲಿಯೇ ಇದ್ದರೆ ಮಕ್ಕಳಿಗೆ, ಕುಟುಂಬದ ಸದಸ್ಯರಿಗೆ ಬಂದು ಪ್ರಾಣಿ ಪಕ್ಷಿಗಳನ್ನು ನೋಡಿ ಸ್ವಲ್ಪ ಮನರಂಜನೆಯೊಂದಿಗೆ ಸಮಯ ಕಳೆಯಬಹುದು ಎಂದು ಅಭಿಪ್ರಾಯಪಟ್ಟರು.

Intro:ನಗರದ ರೇಡಿಯೋ ಪಾರ್ಕ್‌ ಕಿರು ಮೃಗಾಲಯದಲ್ಲಿನ ಪ್ರಾಣಿ ಪಕ್ಷಿಗಳನ್ನು ಹೊಸಪೇಟೆ ತಾಲೂಕಿನ ಕಮಲಾಪುರದ ಹತ್ತಿರವಿರುವ ಅಟಲ್ ಬಿಹಾರಿ ವಾಜಪೇಯಿ ಝೂಲಾಜಿಕಲ್ ಬೃಹತ್ ಮೃಗಾಲಯಕ್ಕೆ ಸ್ಥಳಾಂತರ ಮಾಡಿದರೇ ಉಗ್ರ ಹೋರಾಟ ಮಾಡುತ್ತೇವೆ ಎಂದು ಸ್ನೇಕ್ ಸಮೀರ್ ಶೆಟ್ಟ್ ಸಾಬ್ರಿ ಮತ್ತು ಮಾನವ ಹಕ್ಕುಗಳ ಹೋರಾಟ ಸಮಿತಿಯ ಮೋಹನ್ ಬಾಬು ಎಚ್ಚರಿಕೆಯನ್ನು ನೀಡಿದರು.

ರಾಷ್ಟ್ರೀಯ ಉದ್ಯಮವನದಲ್ಲಿ ಬೇಕಾದರೇ ಬೇರೆ ಕಡೆಯಿಂದ ಪ್ರಾಣಿ ಪಕ್ಷಿಗಳನ್ನು ತರಸಿ ಅದನ್ನು ಅಭಿವೃದ್ಧಿ ಮಾಡಿ ಅದಕ್ಕೆನು ತೊಂದರೆಇಲ್ಲ ಎಂದರು.

Body:ಈಟಿವಿ ಭಾರತ್ ನೊಂದಿಗೆ ಮಾತನಾಡಿದ ಮಾನವ ಹಕ್ಕುಗಳ ಹೋರಾಟ ಸಮಿತಿಯ ಕಾರ್ಯಕರ್ತ ಮೋಹನ್ ಮಾತನಾಡಿ
ನಗರದ ರೇಡಿಯೋ ಪಾರ್ಕ್‌ ಕಿರು ಮೃಗಾಲಯವು ಹೊಸಪೇಟೆ ತಾಲೂಕಿನ ಕಮಲಾಪುರದ ಹತ್ತಿರವಿರುವ ಅಟಲ್ ಬಿಹಾರಿ ವಾಜಪೇಯಿ ಝೂಲಾಜಿಕಲ್ ಬೃಹತ್ ಮೃಗಾಲಯಕ್ಕೆ ಸ್ಥಳಾಂತರ ಗೊಳ್ಳುತ್ತಿದೆ ಎನ್ನುವ ಮಾಹಿತಿಯು ಸಾರ್ವಜನಿಕರಲ್ಲಿ , ಪ್ರಾಣಿ ಪಕ್ಷಿಗಳ ಬಗ್ಗೆ ಪ್ರೀತಿ ಇರುವುವವರಲ್ಲಿ ಆತಂಕ ಮೂಡಿ ಬೇಸರವಾಗಿದೆ.

ಕಿರು ಮೃಗಾಲಯ ಆರಂಭ ಹೇಗೆ ?

1981 ರಲ್ಲಿ ಮಾಜಿ ಶಾಸಕ ಭಾಸ್ಕರ್ ನಾಯ್ಡು ಅವರು ಹೋರಾಟದಿಂದ ಈ ಕಿರು ಮೃಗಾಲಯ ಆರಂಭವಾಗಿದೆ.
ಅದು ಅವರ ಕೊಡುಗೆಯಾಗಿದೆ ಎಂದರು. 1981 ರಲ್ಲಿ ಮಾಜಿ ಮುಖ್ಯಮಂತ್ರಿ ಗುಂಡುರಾವ್ ಮತ್ತು ಮಾಜಿ ಅರಣ್ಯ ಸಚಿವ ಮಾದೇಗೌಡ ಅವರ ನೇತೃತ್ವದಲ್ಲಿ ಈ ಕಿರು ಮೃಗಾಲಯ ಅವರ ಮೂಲಕ ಉದ್ಘಾಟನೆಯಾಗಿದೆ ಎಂದರು. ಇಲ್ಲಿಗೆ 38 ವರ್ಷಗಳ ನಿರಂತರ ಆಕರ್ಷಣೆಯ ಕೇಂದ್ರವಾಗಿತ್ತು.

ಬಳ್ಳಾರಿ ನಗರದಲ್ಲಿ ಮನೋರಂಜನೆಯಿಂದ ನೋಡಲು ಈ ಕಿರು ಮೃಗಾಲಯ ಮಾತ್ರ ಇರೋದು, ಅದನ್ನು ಯಾವುದೇ ಕಾರಣಕ್ಕೂ ಸ್ಥಳಾಂತರ ಮಾಡಬಾರದು ಎಂದರು.

ಕಿರು ಮೃಗಾಲಯಕ್ಕಾಗಿ ಹಿರಿಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಕೆ :

ಮೋಹನ್ ಮತ್ತು ಸಮಿರ್ ಶೆಟ್ ಇಬ್ಬರು ಸೇರಿ ವನ್ಯ ಜೀವಿಯ ಪ್ರಿನ್ಸಿಪಾಲ್ ಚಿಫ್ ಕಂಜುವೆಟ್ ಸಂಜಯ್ ಮೋಹನ್, ಚಿಪ್ ಕಂಜುವೇಟರ್ ಆಫೀಸರ್ ನಿಂಗರಾಜ್, ಜಿಲ್ಲಾಧಿಕಾರಿ ಡಾ.ರಾಮ್ ಪ್ರಸಾತ್ ಮನೋಹರ್ ಅವರಿಗೆ ಈ ಕಿರು ಮೃಗಾಲಯ ವನ್ನು ಸ್ಥಳಾಂತರ ಮಾಡಬೇಡಿ ಎಂದು ಮನವಿ ಪತ್ರ ಸಲ್ಲಿಸಿದ್ದೇವೆ ಎಂದರು.

ಈಟಿವಿ ಭಾರತ್ ನೊಂದಿಗೆ ಮಾತನಾಡಿದ ಹಾವು ಮತ್ತು ವನ್ಯ ಜೀವಿ ಸಂರಕ್ಷಣಾ ವೇದಿಕೆ ರಾಜ್ಯ ಅಧ್ಯಕ್ಷ ಸ್ನೇಕ್ ಸಮೀರ್ ಶೆಟ್ ಸಾಬ್ರಿ ಅವರು ಸುಮಾರು 15 ಸಾವಿರ ಹಾವುಗಳನ್ನು ಹಿಡಿದು ರಕ್ಷಣೆ ಮಾಡಿ ಅವುಗಳನ್ನು ಈ ಕಿರು ಮೃಗಾಲಯದಲ್ಲಿ ಬಿಟ್ಟು, ಅದರ ಚಲನವಲನ ತಿಳಿದು ನಂತರ ಅರಣ್ಯಕ್ಕೆ ಬಿಟ್ಟಿದ್ದೇನೆ ಆದ್ರೇ ಈ ಕಿರು ಮೃಗಾಲಯ ಸ್ಥಳಾಂತರ ಗೊಂಡರೆ ಎಲ್ಲಿ ಹಾವುಗಳನ್ನು ರಕ್ಷಣೆ ಮಾಡಿ ಬಿಡಬೇಕೆಂದು ಪ್ರಶ್ನೆ ಮಾಡಿದರು.

ಅರಣ್ಯಾಧಿಕಾರಿಗಳು ಬಳ್ಳಾರಿ ಜನರಿಗೆ ತೊಂದರೆ ನೀಡಬೇಡಿ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಈ ಕಿರು ಮೃಗಾಲಯಕ್ಕೆ ಸಂಬಂಧಿಸಿದಂತೆ ಉಗ್ರ ಹೋರಾಟ ಮಾಡುತ್ತೇವೆ ಎಂದರು ಹೇಳಿದರು.

ಈ ಕಿರು ಮೃಗಾಲಯದಲ್ಲಿ ಯಾವ ಯಾವ ಪ್ರಾಣಿ ಪಕ್ಷಿಗಳಿವೆ :

ಚಿರತೆಗಳಲ್ಲಿ ಗಂಡ - ಹೆಂಡತಿ ಸಿಂಗಂ ಮತ್ತು ಸಿಂಧೂ, ಮೊದಲನೇ ಸಂತತಿಯಲ್ಲಿ ಹೆಣ್ಣು ಅಚ್ಚು, ಎರಡನೇ ಸಂತನದಲ್ಲಿ ಗಂಡು ಅಭಯ್ - ಹೆಣ್ಣು ಪ್ರಕೃತಿ, ಬನ್ನೇರುಘಟ್ಟ ದಿಂದ ಗಂಡುಗಳಾದ ರಾಮ - ಚರಣ್, ಹೂವಿನಹಡಗಲಿಯ ಗಂಡು ಸಚಿನ್ ಸೇರಿ 8 ಚಿರತೆಗಳಿವೆ.
ಇವುಗಳಿಗೆ ಒಟ್ಟು 30 ಕೆ.ಜಿ ಮಾಂಸ ಹಾಕಲಾಗುತ್ತದೆ. ಬೆಳಿಗ್ಗೆ 11 ಗಂಟೆ 30 ನಿಮಿಷಕ್ಕೆ ಮತ್ತು 4 ಗಂಟೆ 30 ನಿಮಿಷಕ್ಕೆ ಎರಡು ಬಾರಿ ಬೇಸಿಗೆಯ ಸ್ನಾನ ಮಾಡಿಸಲಾಗುತ್ತದೆ ಎಂದು ಅನಿಮಲ್ ಕೀಪರ್ ಭೀಮೇಶ್ ತಿಳಿಸಿದರು.

ಐದು ಮೊಸಳೆ, ಒಂದು ಕರಡಿ, 45 ಕೃಷ್ಣಮೃಗ, 48 ಜಿಂಕೆ, 20 ಹಾವುಗಳು, ಎರಡು ಎಮು, ಎಂಟು ನವಿಲುಗಳು, ಒಂದು ನರಿ, ಒಂದು ಕೋತಿ, 50 ನಕ್ಷತ್ರ, ಕಲ್ಲು ಮತ್ತು ನೀರ ಆಮೆಗಳಿವೆ, ನಾಲ್ಕು ಕತ್ತೆ ಕಿರುಬ ಇವೆ. ಇವುಗಳಿಗೆ ಪಕ್ಷಿಗಳಿಗೆ ಗೋಧಿ, ನವಣೆ, ಕಾಯಿ ಪಲ್ಲೆಗಳು, ತರಕಾರಿಗಳು, ರಾಗಿ ನೀಡಲಾಗುತ್ತದೆ ಎಂದರು.

ಈ ಕಿರು ಮೃಗಾಲಯ ನೋಡಿಕೊಳ್ಳಲು ಪ್ರಾಣಿ ವೀಕ್ಷಕ ಬಿ. ಭೀಮೇಶ್, ಪಕ್ಷಿಗಳ ವೀಕ್ಷಕ ಮಂಜುನಾಥ, ಸ್ವಚ್ಚತಾ ಕಾರ್ಯಕ್ಕೆ ಇಬ್ಬರು, ಉರಗ ಕಾರ್ಯಕ್ಕೆ ಒಬ್ಬ, ಶುಲ್ಕ ವಸೂಲಿ ಕೌಂಟರ್ ಗೆ ಒಬ್ಬ, ರಾತ್ರಿ ಕಾವಲಿಗೆ ಇಬ್ಬರ ಕಾರ್ಯ ನಿರ್ವಹಿಸುತ್ತಿದ್ದಾರೆ.

ಮೃಗಾಲಯ ಸಂಗ್ರಹವಾದ ಶುಲ್ಕ ( ರೂ ಗಳಲ್ಲಿ )

ಜನವರಿ - 2,17,610 ರೂಪಾಯಿ.

ಫೆಬ್ರವರಿ - 1,42,600 ರೂಪಾಯಿ.

ಮಾರ್ಚ್ - 1,42,660 ರೂಪಾಯಿ.

ಏಪ್ರಿಲ್ - 1,78,690 ರೂಪಾಯಿ.

ಶನಿವಾರ ಮತ್ತು ಭಾನುವಾರ ಹೆಚ್ಚು ಪ್ರವಾಸಿಗರು :

ನಗರದಲ್ಲಿ ಮನರಂಜನಾ ಸ್ಥಳಗಳು ಹೆಚ್ಚಿಲ್ಲದಿರುವುದರಿಂದ, ಪ್ರತಿ ಶನಿವಾರ, ಭಾನುವಾರ ಮತ್ತು ರಜಾ ದಿನಗಳಲ್ಲಿ ಸಾವಿರಾರು ಪ್ರವಾಸಿಗರು ಮಕ್ಕಳೊಂದಿಗೆ ಈ ಕಿರು ಮೃಗಾಲಯ ನೋಡಲು ಬರುತ್ತಾರೆ.

ಪ್ರವೇಶ ಶುಲ್ಕ ಹೆಚ್ಚಳ :

2014 ರಲ್ಲಿ ಈ ಕಿರು ಮೃಗಾಲಯವನ್ನು ನವೀಕರಿಸಲಾಯಿತು. ಆಗ ಪ್ರವೇಶ ಶುಲ್ಕ ವಯಸ್ಕರಿಗೆ 15 ರೂಪಾಯಿ, ಮಕ್ಕಳಿಗೆ 10 ರೂಪಾಯಿ ನಿಗದಿ ಮಾಡಿ ಹೆಚ್ಚಿಸಲಾಗಿತ್ತು. ಈಗ ವಯಸ್ಕರಿಗೆ 20 ರೂಪಾಯಿ ನಿಗದಿ ಮಾಡಿದೆ.

Conclusion:ಈ ಸಮಯದಲ್ಲಿ ಕಿರು ಮೃಗಾಲಯ ನೋಡಲು ಬಂದ ಹತ್ತಾರು ಸಾರ್ವಜನಿಕರು ಕಿರು ಮೃಗಾಲಯ ಇಲ್ಲಿಯೇ ಇದ್ದರೇ ಮಕ್ಕಳಿಗೆ, ಕುಟುಂಬದ ಸದಸ್ಯರು ಬಂದು ಪ್ರಾಣಿ ಪಕ್ಷಿಗಳನ್ನು ನೋಡಿ ಮನರಂಜನೆಯೊಂದಿಗೆ ಸಮಯ ಕಳೆಯಬಹುದು ಎಂದು ಸಾರ್ವಜನಿಕರು ಅಭಿಪ್ರಾಯ ಪಟ್ಟರು.

ಒಟ್ಟಾರೆಯಾಗಿ ಯಾವುದೇ ಕಾರಣಕ್ಕೂ ಬಳ್ಳಾರಿ ಕಿರು ಮೃಗಾಲಯ ಸ್ಥಳಾಂತರ ಗೊಳ್ಳಬಾರದು, ಮಾಡಿದರೇ ಉಗ್ರ ಹೋರಾಟ ಮಾಡುತ್ತೇವೆ ಎಂದು ಸಾರ್ವಜನಿಕರು ಎಚ್ಚರಿಕೆಯನ್ನು ನೀಡಿದರು.
Last Updated : May 28, 2019, 5:45 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.