ETV Bharat / state

ನಗ್ನ ವಿಡಿಯೋ ತೋರಿಸಿ ಉದ್ಯಮಿಗೆ ಬೆದರಿಕೆ, ಹಣ ವಸೂಲಿ: ಮಹಿಳೆ, ಆಕೆ ಪುತ್ರನ ಬಂಧನ

2021 ಮಾರ್ಚ್ 2 ರಂದು ಗೀತಾ ಹಾಗೂ ಆಕೆ ಪುತ್ರ, ಸುಬ್ಬಾರೆಡ್ಡಿ ಮನೆಯಲ್ಲಿ ಇಲ್ಲದ ವೇಳೆ ಅವರ ಹೆಂಡತಿಯ ನಾಲ್ಕು ಬಂಗಾರದ ಬಳೆ ತೆಗೆದುಕೊಂಡು, ಪ್ರಾಣದ ಬೆದರಿಕೆ ಹಾಕಿದ್ದಾರೆ. ಕಿರುಕುಳ, ಮಾನಹಾನಿ, ಅಕ್ರಮ ಮನೆ ಪ್ರವೇಶ ಎಂದು ಸುಬ್ಬಾರೆಡ್ಡಿ ಅವರು ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Woman Son Arrested
ಉದ್ಯಮಿಗೆ ಬೆದರಿಕೆ-ಹಣ ವಸೂಲಿ
author img

By

Published : Mar 6, 2021, 8:07 PM IST

ಹೊಸಪೇಟೆ: ಕೊಪ್ಪಳ ಮೂಲದ ಉದ್ಯಮಿಯೊಬ್ಬರಿಗೆ ನಗ್ನ ವಿಡಿಯೋ ಹಾಗೂ ಫೋಟೋಗಳನ್ನು ತೋರಿಸಿ ಬೆದರಿಸಿ, ಹಣ ವಸೂಲಿ ಮಾಡಿದ ಆರೋಪದಲ್ಲಿ ನಗರದ ಮಹಿಳೆ ಹಾಗೂ ಆಕೆಯ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ.

ಉದ್ಯಮಿಗೆ ಬೆದರಿಕೆ-ಹಣ ವಸೂಲಿ

ಓದಿ: ರಮೇಶ್​ ಜಾರಕಿಹೊಳಿ ಪ್ರಕರಣ: ಸಂತ್ರಸ್ತೆ ಪತ್ತೆಗಾಗಿ ಪೊಲೀಸರಿಂದ ಪಿಜಿಗಳಲ್ಲಿ ನಿರಂತರ ಶೋಧ

ಗೀತಾ ಹಾಗೂ ಆಕೆಯ ಪುತ್ರ ಬಂಧಿತ ಆರೋಪಿಗಳು. ಕೊಪ್ಪಳದ ಕಾರ್ಖಾನೆ ಉದ್ಯಮಿ ಸುಬ್ಬಾರೆಡ್ಡಿ ಅವರು ಹೊಸಪೇಟೆಯ ಎಂ.ಜೆ. ನಗರದ 6ನೇ ಅಡ್ಡರಸ್ತೆಯಲ್ಲಿ ಸಾನ್ವೀ ಸ್ಟೀಲ್ಸ್ ಕಚೇರಿಯನ್ನು ತರೆದಿದ್ದಾರೆ. ಕಚೇರಿ ಎದುರಿನಲ್ಲಿ ಗೀತಾ ಅವರ ಮನೆ ಇದ್ದು, ಮಾರ್ಚ್ 2019ರಲ್ಲಿ ಸುಬ್ಬಾರೆಡ್ಡಿ ಹಾಗೂ ಗೀತಾ ಅವರಿಗೆ ಪರಿಚಯವಾಗಿದೆ.

ಒಂದು ದಿನ ಸುಬ್ಬಾರೆಡ್ಡಿ ಅವರನ್ನು ಆರೋಪಿತ ಮಹಿಳೆ ಮನೆಗೆ ಆಹ್ವಾನಿಸಿದ್ದಾಳೆ. ಆಗ ಚಹಾ ಕುಡಿದ ಮೇಲೆ ಸುಬ್ಬಾರೆಡ್ಡಿ ಅವರಿಗೆ ಪ್ರಜ್ಞೆ ತಪ್ಪಿದೆ. ಎರಡು ಗಂಟೆ ನಂತರ ಅವರಿಗೆ ಎಚ್ಚರವಾಗಿದೆ. ಬಳಿಕ ಅವರು ಮನೆಗೆ ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಎರಡು ದಿನದ ನಂತರ ಉದ್ಯಮಿಗೆ ಮಹಿಳೆಯಿಂದ ದೂರವಾಣಿ ಕರೆ ಬಂದಿದೆ. ನಿಮ್ಮ ನಗ್ನ ವಿಡಿಯೋಗಳು ನಮ್ಮ ಬಳಿ ಇದ್ದು, 30 ಲಕ್ಷ ರೂ. ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. ನಂತರ ಉದ್ಯಮಿ 15 ಲಕ್ಷ ರೂ. ಆನ್​​ಲೈನ್ ಮೂಲಕ ಮಹಿಳೆ ಖಾತೆಗೆ ವರ್ಗಾವಣೆ ಮಾಡಿದ್ದಾರೆ.

ಅಲ್ಲದೇ, 2021 ಮಾರ್ಚ್ 2 ರಂದು ಗೀತಾ ಹಾಗೂ ಆಕೆ ಪುತ್ರ, ಸುಬ್ಬಾರೆಡ್ಡಿ ಮನೆಯಲ್ಲಿ ಇಲ್ಲದ ವೇಳೆ ಅವರ ಹೆಂಡತಿಯ ನಾಲ್ಕು ಬಂಗಾರದ ಬಳೆ ತೆಗೆದುಕೊಂಡು, ಪ್ರಾಣದ ಬೆದರಿಕೆ ಹಾಕಿದ್ದಾರೆ. ಕಿರುಕುಳ, ಮಾನಹಾನಿ, ಅಕ್ರಮ ಮನೆ ಪ್ರವೇಶ ಎಂದು ಸುಬ್ಬಾರೆಡ್ಡಿ ಅವರು ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಆರೋಪಿ ಮಹಿಳೆ ಗೀತಾಳನ್ನು ಬಂಧಿಸಲು ಮನೆಗೆ ತೆರಳಿದ್ದಾಗ, 2.750 ಗ್ರಾಂ ಗಾಂಜಾ ಪತ್ತೆಯಾಗಿದೆ. ಈ‌ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.