ಬಳ್ಳಾರಿ: ಜಿಲ್ಲೆಗೆ ಮೊಳಕಾಲ್ಮೂರು ಸೇರ್ಪಡೆ ಬೇಡ, ಬಳ್ಳಾರಿ ಬಳ್ಳಾರಿಯಾಗಿ ಉಳಿದರೆ ಸಾಕು ಎಂದು ನಗರ ಶಾಸಕ ಜಿ.ಸೋಮಶೇಖರ್ ರೆಡ್ಡಿ ಹೇಳಿದರು.
ನಗರದ ಬೆಂಗಳೂರು ರಸ್ತೆಯಲ್ಲಿರುವ ಡ್ರಸ್ ಸರ್ಕಲ್ ಶಾಪಿಂಗ್ ಮಾಲ್ ಅನ್ನು ಶಾಸಕ ಜಿ.ಸೋಮಶೇಖರ್ ರೆಡ್ಡಿ ಹಾಗೂ ಬಿಗ್ಬಾಸ್ ಖ್ಯಾತಿಯ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಉದ್ಘಾಟನೆ ಮಾಡಿದರು. ಈ ವೇಳೆ, ಈಟಿವಿ ಭಾರತದೊಂದಿಗೆ ಮಾತನಾಡಿದ ಶಾಸಕರು, ಡ್ರಸ್ ಸರ್ಕಲ್ ಒಪನಿಂಗ್ಗಾಗಿ ಬಂದಿದ್ದೆ. ಜಿಲ್ಲೆಯಲ್ಲಿ ಇಂತಹ ಮಾಲ್ ಇಲ್ಲ. ಮದುವೆಗಳಿಗೆ ಬಟ್ಟೆ ತರೋದಕ್ಕೆ ಕಂಚಿಗೆ ಹೋಗ್ತಾ ಇದ್ವಿ, ಆದ್ರೇ ಇಂದು ಡ್ರಸ್ ಸರ್ಕಲ್ ಒಪನ್ ಆಗಿದ್ದು, ಒಳ್ಳೆಯ ವ್ಯಾಪಾರ ಆಗುತ್ತದೆ ಎಂದರು.
ಬಳ್ಳಾರಿಗೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕು ಸೇರ್ಪಡೆ ಬೇಡ, ಬಳ್ಳಾರಿ ಬಳ್ಳಾರಿಯಾಗಿ ಉಳಿದರೆ ಸಾಕು. ಬೆಂಗಳೂರಿನಲ್ಲಿ ಬಿಲ್ಡಿಂಗ್ ಕಟ್ಟಡದ ಭೂಮಿ ಪೂಜೆ ಇತ್ತು. ಹಾಗಾಗಿ ನಾನು ಗ್ರಾಮ ಸ್ವರಾಜ್ಯ ಸಮಾವೇಶಕ್ಕೆ ಮತ್ತು ಡಿಸಿಎಂ ಪತ್ರಿಕಾಗೋಷ್ಠಿಗೆ ಹಾಜರಾಗಿಲ್ಲ ಎಂದು ಸ್ಪಷ್ಟನೆ ನೀಡಿದರು.
ಬಳಿಕ ಡ್ರಸ್ ಸರ್ಕಲ್ ಶಾಪಿಂಗ್ ಮಾಲ್ ಸಂಸ್ಥೆಯ ಎಂ.ಡಿ ಗೋಪಾಲರೆಡ್ಡಿ ಮಾತನಾಡಿ, ಮೊದಲ ಮಳಿಗೆ 1994ರಲ್ಲಿ ಕರ್ನೂಲ್ ನಗರದಲ್ಲಿ ಆರಂಭವಾಗಿದೆ. ಕಳೆದ 26 ವರ್ಷಗಳಿಂದ ನಮ್ಮ ಶಾಪಿಂಗ್ ಮಾಲ್ನಲ್ಲಿ ಎಲ್ಲ ಬಗೆಯ ಮದುವೆ ಸೀರೆಗಳು ದೊರೆಯಲಿವೆ. ಆರಂಭದ ನಿಮಿತ್ತ ಗ್ರಾಹಕರಿಗೆ ರಿಯಾಯಿತಿ ದರದಲ್ಲಿ 1+1 ಆಫರ್ ನೀಡಲಾಗುತ್ತದೆ. 3, 4, 5 ಮತ್ತು 10 ಸಾವಿರ ಖರೀದಿ ಮಾಡಿದರೇ ವಿಶೇಷ ಕೊಡುಗೆ ನೀಡಲಾಗುತ್ತದೆ ಎಂದು ತಿಳಿಸಿದರು.