ETV Bharat / state

ಕಾರ್ಯಕರ್ತರ ಪ್ರತಿಭಟನೆ ನನಗೆ ವೈಯಕ್ತಿಕವಾಗಿ ಬೇಸರ ತಂದಿದೆ.. ಸಚಿವ ಶ್ರೀರಾಮುಲು - ಪ್ರತಿಭಟನೆ

ತಮಗೆ ಡಿಸಿಎಂ‌ ಸ್ಥಾನ ನೀಡದಿದ್ದಕ್ಕೆ ಯಾರೊಬ್ಬರು ಬೀದಿಗಿಳಿದು ಹೋರಾಟ ಮಾಡಬಾರದು ಎಂದು ಈ ಮೊದ್ಲೇ ಅಭಿಮಾನಿ ಬಳಗ ಹಾಗೂ ಕಾರ್ಯಕರ್ತರಲ್ಲಿ ಮನವಿ‌ ಮಾಡಿಕೊಂಡಿದ್ದೆ. ಆದರೂ ಪ್ರತಿಭಟನೆಗಳು ನಡೆದಿವೆ. ಅದರಿಂದ ನನಗೆ ವೈಯಕ್ತಿಕವಾಗಿ ಬೇಸರ ತಂದಿದೆ ಎಂದು ಸಚಿವ ಶ್ರೀರಾಮುಲು ತಿಳಿಸಿದ್ದಾರೆ.

ಶ್ರೀರಾಮುಲು
author img

By

Published : Aug 28, 2019, 2:24 PM IST

ಬಳ್ಳಾರಿ: ಪಕ್ಷದ ತೀರ್ಮಾನದ ವಿರುದ್ದ ನಮ್ಮ ಬೆಂಬಲಿಗರು ಮತ್ತು ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ಮಾಡಬಾರದೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಹೇಳಿದ್ದಾರೆ.

ಬೆಂಬಲಿಗರ ಪ್ರತಿಭಟನೆ ಕುರಿತಂತೆ ಸಚಿವ ಶ್ರೀರಾಮುಲು ಪ್ರತಿಕ್ರಿಯೆ..

ಬಳ್ಳಾರಿಯ ಹವಂಬಾವಿ‌ ಪ್ರದೇಶದಲ್ಲಿರುವ ತಮ್ಮ ನಿವಾಸದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಗೆ ಡಿಸಿಎಂ‌ ಸ್ಥಾನ ನೀಡದಿದ್ದಕ್ಕೆ ಯಾರೊಬ್ಬರು ಬೀದಿಗಿಳಿದು ಹೋರಾಟ ಮಾಡಬಾರದು ಎಂದು ಈ ಮೊದ್ಲೇ ಅಭಿಮಾನಿ ಬಳಗ ಹಾಗೂ ಕಾರ್ಯಕರ್ತರಲ್ಲಿ ಮನವಿ‌ ಮಾಡಿಕೊಂಡಿದ್ದೆ. ಆದರೂ ಪ್ರತಿಭಟನೆಗಳು ನಡೆದಿವೆ. ಅದರಿಂದ ನನಗೆ ವೈಯಕ್ತಿಕವಾಗಿ ಬೇಸರ ತಂದಿದೆ ಎಂದು ಸಚಿವ ಶ್ರೀರಾಮುಲು ತಿಳಿಸಿದ್ದಾರೆ.

ನಿನ್ನೆ ರಾಜ್ಯದ ಕೆಲವೆಡೆ ಪ್ರತಿಭಟನೆ ನಡೆಸಿರೋದರ ಬಗ್ಗೆ ಪ್ರತಿಕ್ರಿಯೆ ನೀಡಿದ ಶ್ರೀರಾಮುಲು, ಈ ಬಗ್ಗೆ ನಿನ್ನೆಯೇ ನಾನು ಟ್ಟೀಟ್ ಮೂಲಕ ರಾಜ್ಯದ ಜನತೆಗೆ ಮನವಿ‌ ಮಾಡಿರುವೆ. ಪಕ್ಷ ತಾಯಿ ಇದ್ದಂತೆ. ಪಕ್ಷದ ತೀರ್ಮಾನಕ್ಕೆ ನಾನು ಬದ್ಧ. ವೈಯಕ್ತಿಕ ಅಭಿಪ್ರಾಯ ಬದಿಗೊತ್ತಿ ಕೆಲಸ ಮಾಡಿ. ಯಾವುದೇ ಪ್ರತಿಭಟನೆ ಮಾಡಬೇಡಿ. ಪಕ್ಷಕ್ಕಾಗಿ ಎಲ್ಲರೂ ದುಡಿಯೋಣ. ಎಲ್ಲ ಜನರಿಗೆ ನ್ಯಾಯ ಕೊಡಿಸೋ ಕೆಲಸವನ್ನ ಪಕ್ಷ ಸೇರಿದಂತೆ ನಾನೂ ಮಾಡುತ್ತೇನೆ ಎಂದರು.

ವಾಲ್ಮೀಕಿ ಸಮುದಾಯಕ್ಕೆ ಶೇ.7.5 ಮೀಸಲಾತಿ‌ ಕೊಡುವ ಕೆಲಸ ಆಗಬೇಕಿದೆ. ಸಿಎಂ ಯಡಿಯೂರಪ್ಪನವ್ರು ಈ ಕುರಿತು ಅಶ್ವಾಸನೆ ನೀಡಿದ್ದಾರೆ. ಅದು‌ ಸಿಕ್ಕರೆ ವಾಲ್ಮೀಕಿ ಸಮುದಾಯಕ್ಕೆ ಎಲ್ಲ ಸಿಕ್ಕಂತೆ ಎಂದರು. ಈ ವಿಚಾರದಲ್ಲಿ ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಶಿವನಗೌಡ ನಾಯಕ, ರಾಜುಗೌಡ ಎಲ್ರೂ‌ ಒಂದಾಗಿದ್ದೇವೆ. ಪಕ್ಷಕ್ಕೆ ಮುಜುಗರ ತರೋ ಕೆಲಸ ಯಾರು ಮಾಡಬೇಡಿ ಎಂದರು. ಜಿಲ್ಲಾ ಉಸ್ತುವಾರಿ ವಿಚಾರದಲ್ಲಿ ನಾನು ಯಾವುದೇ ಬೇಡಿಕೆ ಇಟ್ಟಿಲ್ಲ. ಸದ್ಯ ನಾನು ನೆರೆ ಪೀಡಿತ ಪ್ರದೇಶಾಭಿವೃದ್ಧಿಗೆ ಬಳ್ಳಾರಿ, ರಾಯಚೂರು, ಯಾದಗಿರಿ ಉಸ್ತುವಾರಿಯಾಗಿದ್ದೇನೆ ಎಂದು ತಿಳಿಸಿದ್ದಾರೆ.

Intro:ಪಕ್ಷದ ತೀರ್ಮಾನದ ವಿರುದ್ದ ಪ್ರತಿಭಟನೆ ಬೇಡ ಎಂದೆ ಸಚಿವ ಶ್ರೀರಾಮುಲು ಸ್ಪಷ್ಟನೆ
ಬಳ್ಳಾರಿ: ಪಕ್ಷದ ತೀರ್ಮಾನದ ವಿರುದ್ದ ನಮ್ಮ ಬೆಂಬಲಿಗರು
ಮತ್ತು ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ಮಾಡಬಾರ ದೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಹೇಳಿದ್ದಾರೆ.
ಬಳ್ಳಾರಿಯ ಹವಂಬಾವಿ‌ ಪ್ರದೇಶದಲ್ಲಿರುವ ತಮ್ಮ ನಿವಾಸದಲ್ಲಿಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರ
ರೊಂದಿಗೆ ಅವರು ಮಾತನಾಡಿ, ತಮಗೆ ಡಿಸಿಎಂ‌ ಸ್ಥಾನ ನೀಡದಿದ್ದಕ್ಕೆ ಯಾರೊಬ್ಬರು ಬೀದಿಗಿಳಿದು ಹೋರಾಟ ಮಾಡಬಾರದು ಎಂದು ಈ ಮೊದ್ಲೇ ಅಭಿಮಾನಿ ಬಳಗ
ಹಾಗೂ ಕಾರ್ಯಕರ್ತರಲ್ಲಿ ಮನವಿ‌ ಮಾಡಿಕೊಂಡಿದ್ದೇ.
ಆದರೂ ಪ್ರತಿಭಟನೆಗಳು ನಡೆದಿವೆ. ಅದರಿಂದ ನನಗೆ
ವೈಯಕ್ತಿಕವಾಗಿ ಬೇಸರ ತಂದಿದೆ ಎಂದು ಸಚಿವ ಶ್ರೀರಾಮುಲು ತಿಳಿಸಿದ್ದಾರೆ.
ನಿನ್ನೆಯ ದಿನ ರಾಜ್ಯದ ಕೆಲವಡೆ ಪ್ರತಿಭಟನೆ ನಡೆಸಿರೋದರ
ಬಗ್ಗೆ ಪ್ರತಿಕ್ರಿಯೆ ನೀಡಿದ ಶ್ರೀರಾಮುಲು, ಈ ಬಗ್ಗೆ ನಿನ್ನೆಯೇ ನಾನು ಟ್ಟೀಟ್ ಮೂಲಕ ರಾಜ್ಯದ ಜನತೆಗೆ ಮನವಿ‌ ಮಾಡಿರುವೆ. ಪಕ್ಷ ತಾಯಿ ಇದ್ದಂತೆ. ಪಕ್ಷದ ತೀರ್ಮಾನ ತೆಗೆದುಕೊಂಡಿದ್ದಕ್ಕೆ ನಾನು ಬದ್ಧ. ವಯಕ್ತಿಕ ಅಭಿಪ್ರಾಯ ಬದಿಗೊತ್ತಿ ಕೆಲಸ ಮಾಡಿ. ಯಾವುದೇ ಪ್ರತಿಭಟನೆ ಮಾಡಬೇಡಿ. ಪಕ್ಷಕ್ಕಾಗಿ ಎಲ್ಲರೂ ದುಡಿಯೋಣ. ಎಲ್ಲ ಜನರಿಗೆ ನ್ಯಾಯ ಕೊಡಿಸೋ ಕೆಲಸ
ಬಿಜೆಪಿ ಪಕ್ಷ ಸೇರಿದಂತೆ ನಾನು ಮಾಡುತ್ತೇನೆ ಎಂದರು.
Body:ವಾಲ್ಮೀಕಿ ಸಮುದಾಯಕ್ಕೆ ಶೇ.7.5 ಮೀಸಲಾತಿ‌ ಕೊಡುವ ಕೆಲಸ ಅಗಬೇಕಿದೆ. ಸಿಎಂ ಯಡಿಯೂರಪ್ಪನವ್ರು ಈ ಕುರಿತು ಅಶ್ವಾಸನೆ ನೀಡಿದ್ದಾರೆ. ಅದು‌ ಸಿಕ್ಕರೆ ವಾಲ್ಮೀಕಿ ಸಮುದಾಯಕ್ಕೆ ಎಲ್ಲ ಸಿಕ್ಕಂತೆ ಎಂದರು.
ಈ ವಿಚಾರದಲ್ಲಿ ರಮೇಶಜಾರಕಿಹೊಳಿ, ಬಾಲಚಂದ್ರ ಜಾರಕಿ ಹೊಳಿ, ಶಿವನಗೌಡ ನಾಯಕ, ರಾಜೂಗೌಡ ಎಲ್ರೂ‌ ಒಂದಾಗಿ ದ್ದೇವೆ. ಪಕ್ಷಕ್ಕೆ ಮುಜುಗರ ತರೋ ಕೆಲಸ ಯಾರು ಮಾಡಬೇಡಿ ಎಂದರು.
ಜಿಲ್ಲಾ ಉಸ್ತುವಾರಿ ವಿಚಾರದಲ್ಲಿ ನಾನು ಯಾವುದೇ ಬೇಡಿಕೆ ಇಟ್ಟಿಲ್ಲ. ಸದ್ಯ ನಾನು ನೆರೆ ಪೀಡಿತ ಪ್ರದೇಶಾಭಿವೃದ್ಧಿಗೆ ಬಳ್ಳಾರಿ ರಾಯಚೂರು ಯಾದಗಿರಿ ಉಸ್ತುವಾರಿಯಾಗಿದ್ದೇನೆಂದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_2_MINISTER_SREE_RAMULU_BYTE_7203310
ETV Bharat Logo

Copyright © 2024 Ushodaya Enterprises Pvt. Ltd., All Rights Reserved.