ಬಳ್ಳಾರಿ : ನನ್ನ ಪುತ್ರ ನಿಷ್ಕಲ್ಮಶ ಮನಸ್ಸಿನಿಂದ ರಾಜಕಾರಣಕ್ಕೆ ಎಂಟ್ರಿ ಕೊಡೋದಾದ್ರೆ ಕೊಡಲಿ ಎಂದು ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಹೇಳಿದರು.
ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಪುತ್ರ ರಾಜಕಾರಣಕ್ಕೆ ಬರವುದು ನನಗಂತೂ ಇಷ್ಟವಿಲ್ಲ. ಅವನೇನಾದ್ರೂ ರಾಜಕಾರಣಕ್ಕೆ ಬರೋದಾದ್ರೆ ನಿಷ್ಕಲ್ಮಶ ಮನಸ್ಸಿನಿಂದ ಬರಲಿ. ಅದಕ್ಕೆ ನನ್ನದೇನೂ ಅಭ್ಯಂತರವಿಲ್ಲ. ಅವನಿಗೆ ರಾಜಕಾರಣಕ್ಕೆ ಬರುವ ಇಚ್ಛೆ ಇದೆ ಎಂದರು.
ಸಚಿವ ಬೈರತಿ ಬಸವರಾಜ್ ಅವರು ಬಳ್ಳಾರಿ ನಗರಕ್ಕೆ ಸ್ಮಾರ್ಟ್ ಸಿಟಿ ಕೊಡುವ ವಿಚಾರವಾಗಿ ಕೇಂದ್ರ ಸರ್ಕಾರಕ್ಕೆ ಪತ್ರ ಬಡೆದಿದ್ದಾರೆ. ಇದಕ್ಕೆ ಮುಂದಿನ ಬಜೆಟ್ನಲ್ಲಿ ಅನುದಾನ ಸಿಗುವ ವಿಶ್ವಾಸವಿದೆ. ಒಳ್ಳೆಯ ದಿನಗಳು ನಮ್ಮ ನಗರಕ್ಕೆ ಬರುವ ನಿರೀಕ್ಷೆಗಳಿವೆ ಎಂದರು.
ನನಗೆ ಸಚಿವ ಸ್ಥಾನ ನೀಡಿದ್ರೆ ಸ್ವೀಕರಿಸುವೆ : ನಾನಂತೂ ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಸಚಿವ ಸ್ಥಾನಕ್ಕಾಗಿ ನಾನು ಯಾವುದೇ ಲಾಬಿ ಮಾಡಲ್ಲ. ನನಗೆ ಖಾಸಾಪುರ ಆಂಜನೇಯನ ಅನುಗ್ರಹವಾದ್ರೆ ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ. ಬಿಜೆಪಿ ಹೈಕಮಾಂಡ್ ಗುರುತಿಸಿ ಸಚಿವ ಸ್ಥಾನ ನೀಡಿದರೆ ಸ್ವೀಕರಿಸುವೆ ಎಂದರು.