ETV Bharat / state

ಬಳ್ಳಾರಿ ಅಪಘಾತ ಪ್ರಕರಣದಲ್ಲಿ ಯಾವ ಸಚಿವರ ಮಗನೂ ಇಲ್ಲ, ಇದೆಲ್ಲ ಊಹಾಪೋಹ: ಎಸ್​​ಪಿ ಸಿ.ಕೆ.ಬಾಬಾ

ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ವ್ಯಾಪ್ತಿಯಲ್ಲಿ ನಡೆದ ಅಪಘಾತದಲ್ಲಿ, ಕಾರಿನಲ್ಲಿ ಪ್ರಭಾವಿ ಸಚಿವರೊಬ್ಬರ ಪುತ್ರ ಇರಲಿಲ್ಲ ಎಂದು ಎಸ್​​ಪಿ ಸಿ.ಕೆ. ಬಾಬಾ ತಿಳಿಸಿದ್ದಾರೆ.

SP C.K. Baba
ಎಸ್​​ಪಿ ಸಿ.ಕೆ.ಬಾಬಾ
author img

By

Published : Feb 13, 2020, 6:16 PM IST

ಬಳ್ಳಾರಿ: ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ವ್ಯಾಪ್ತಿಯಲ್ಲಿ ನಡೆದ ಅಪಘಾತದಲ್ಲಿ, ಕಾರಿನಲ್ಲಿ ಪ್ರಭಾವಿ ಸಚಿವರೊಬ್ಬರ ಪುತ್ರ ಇರಲಿಲ್ಲ ಎಂದು ಎಸ್​​ಪಿ ಸಿ.ಕೆ. ಬಾಬಾ ತಿಳಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ. ಬಾಬಾ

ಬಳ್ಳಾರಿಯಲ್ಲಿಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ. ಬಾಬಾ ಮಾಧ್ಯಮಗಳೊಂದಿಗೆ ಮಾತನಾಡಿ, ಈ ಅಪಘಾತ ಪ್ರಕರಣದಲ್ಲಿ ಯಾವ ಸಚಿವರ ಮಗನೂ ಇಲ್ಲ. ಇದೆಲ್ಲ ಊಹಾಪೋಹದ ಸುದ್ದಿ ಎಂದಿದ್ದಾರೆ. ಹೊಸಪೇಟೆಯಿಂದ ಬೆಂಗಳೂರಿನತ್ತ ಪ್ರಯಾಣ ಬೆಳೆಸುತ್ತಿರುವ ಮರ್ಸಿಡೀಸ್ ಬೆಂಚ್ ಕಾರ್ ಅಪಘಾತವಾಗಿದೆ.

ಅಲ್ಲಿ ರವಿ ನಾಯ್ಕ ಸ್ಪಾಟ್ ಡೆತ್ ಆದ್ರು, ಆಸ್ಪತ್ರೆಗೆ ಹೋಗುವಾಗ ಇನ್ನೊಬ್ಬ ಸಚಿನ್ ಡೆತ್ ಆಗಿದ್ದಾರೆ. ಹೊಸಪೇಟೆಯ ಆಸ್ಪತ್ರೆಗೆ ಪ್ರಥಮ ಚಿಕಿತ್ಸೆ ಕೊಡಿಸಲಾಯ್ತು. ಬಳಿಕ ಬೆಂಗಳೂರಿಗೆ ಕಳಿಸಲಾಗಿದೆ. ಇದರಲ್ಲಿ ಸಚಿವರ ಮಗ ಇಲ್ಲ. ಇದೆಲ್ಲ ಊಹಾಪೋಹ. ಡ್ರೈವರ್ ರಾಹುಲ್ ವಿರುದ್ಧ ದೂರು ದಾಖಲಾಗಿದೆ.

ತಪ್ಪು ಮಾಡಿದವರನ್ನ ರಕ್ಷಣೆ ಮಾಡಲ್ಲ. ಅವರ ಮಗ ಇವರ ಮಗ ಅಂತಾ ಊಹೆ ಮಾಡೋಕ್ ಆಗಲ್ಲ. ನಮ್ಮ ಮೇಲೆ ಯಾವುದೇ ಒತ್ತಡ ಇಲ್ಲ. ಘಟನೆಗೆ ಕಾರಣ ಏನು ಅಂತಾ ತನಿಖೆ ನಡೆಸಲಾಗ್ತಿದೆ. ಬೆಂಗಳೂರಿಗೆ ನಮ್ಮ ತಂಡ ತೆರಳಿ ಗಾಯಾಳುಗಳ ಹೇಳಿಕೆ ಪಡೆಯಲಿದೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.