ETV Bharat / state

371(ಜೆ)ಗೆ ನೂತನ ವಿಜಯನಗರ ಜಿಲ್ಲೆ ಸೇರ್ಪಡೆ: ಸಂತಸ ವ್ಯಕ್ತಪಡಿಸಿದ ಸಚಿವ ಆನಂದ್ ಸಿಂಗ್ - New Vijayanagar district added to 371 (J)

ವಿಜಯನಗರ ಜಿಲ್ಲೆಯನ್ನು ಆರ್ಟಿಕಲ್ 371(ಜೆ)ಗೆ ಸೇರಿಸಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ. ಈ ವಿಷಯ ತಿಳಿದ ಆನಂದ್ ಸಿಂಗ್​ ಬಹುದಿನಗಳ ಕನಸು ನನಸಾಗಿದೆ. ಈ ನೂತನ ಆದೇಶದಿಂದ ಹೈದರಾಬಾದ್ ಕರ್ನಾಟಕಕ್ಕೆ ನೀಡುವ ವಿಶೇಷ ಸ್ಥಾನವನ್ನು ಇನ್ಮುಂದೆ ವಿಜಯನಗರ ಜಿಲ್ಲೆ ಕೂಡ ಪಡೆಯಲಿದೆ ಎಂದು ಹೇಳಿ ಸಂತಸ ವ್ಯಕ್ತಪಡಿಸಿದ್ರು.

Minister Anand Singh express happiness
ಸಚಿವ ಆನಂದ್ ಸಿಂಗ್ ಹರ್ಷ
author img

By

Published : Feb 25, 2021, 8:10 PM IST

ಹೊಸಪೇಟೆ (ವಿಜಯನಗರ): ನೂತನ ವಿಜಯನಗರ ಜಿಲ್ಲೆಯನ್ನು ಆರ್ಟಿಕಲ್ 371(ಜೆ)ಗೆ ಸೇರಿಸಿ ರಾಜ್ಯಪಾಲರು ಆದೇಶ ಹೊರಡಿಸಿದ್ದು, ಇದು ಈ ಭಾಗದ ಜನತೆಯ ಬಹುದಿನಗಳ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ಆನಂದ್ ಸಿಂಗ್ ಹರ್ಷ ವ್ಯಕ್ತಪಡಿಸಿದ್ದಾರೆ.

ವಿಜಯನಗರ ಜಿಲ್ಲೆಯನ್ನು ಆರ್ಟಿಕಲ್ 371 (ಜೆ)ಗೆ ಸೇರಿಸಿ ರಾಜ್ಯಪಾಲರು ಆದೇಶ ಹೊರಡಿಸಿರುವ ಕುರಿತು ಮಾತನಾಡಿದ ಅವರು, ಇದರಿಂದ ನಮ್ಮ ಬಹುದಿನಗಳ ಕನಸು ನನಸಾಗಿದೆ. ಈ ನೂತನ ಆದೇಶದಿಂದ ಹೈದರಾಬಾದ್ ಕರ್ನಾಟಕಕ್ಕೆ ನೀಡುವ ವಿಶೇಷ ಸ್ಥಾನವನ್ನು ಇನ್ಮುಂದೆ ವಿಜಯನಗರ ಜಿಲ್ಲೆ ಕೂಡ ಪಡೆಯಲಿದೆ ಎಂದು ಹೇಳಿದರು.

ಸತತ ಹೋರಾಟಕ್ಕೆ ಸಂದ ಪ್ರತಿಫಲ:

ಇತ್ತೀಚೆಗಷ್ಟೇ ನೂತನವಾಗಿ ವಿಜಯ ನಗರ ಜಿಲ್ಲೆಯಾಗಿದೆ. ಇದರಿಂದ ನಮ್ಮ ದಶಕಗಳ ಕನಸು ನನಸಾಗಿದೆ ಎಂಬ ಸಂತೋಷವಿದೆ. ಇದರೊಂದಿಗೆ ನೂತನ ಜಿಲ್ಲೆಗೆ ಹೈದರಾಬಾದ್ ಕರ್ನಾಟಕಕ್ಕೆ ನೀಡುವ ವಿಶೇಷ ಸ್ಥಾನ ಸಿಕ್ಕಿದೆ. ವಿಶೇಷವಾಗಿ ಈ ಜಿಲ್ಲೆಯನ್ನು ಅಭಿವೃದ್ಧಿ ಮಾಡಬೇಕು ಎಂಬುದು ನಮ್ಮ ಗುರಿಯಾಗಿದೆ. ಈ ಆದೇಶ ನನಗೆ ಅತೀವ ಸಂತೋಷ ನೀಡಿದೆ ಎಂದು ಹೇಳಿದರು.

ಓದಿ:ವಿಜಯನಗರ ಜಿಲ್ಲೆ ರಚಿಸಿ ಅಧಿಸೂಚನೆ ಹೊರಡಿಸಿದ ಸರ್ಕಾರ : ಆನಂದ ಸಿಂಗ್​ ಮುನಿಸಿಗೆ ಮುಲಾಮು

ನೂತನ ಜಿಲ್ಲೆಯ ಅಭಿವೃದ್ಧಿಗೆ ಮತ್ತಷ್ಟು ಬಲ:

ಈ ನೂತನ ಆದೇಶದಿಂದ ಹೊಸ ಜಿಲ್ಲೆಯನ್ನು ಅಭಿವೃದ್ಧಿ ಮಾಡಲು ಹೊರಟಿರುವ ನಮಗೆ ಮತ್ತಷ್ಟು ಶಕ್ತಿ ಬಂದಂತಾಗಿದೆ. ಐತಿಹಾಸಿಕತೆಯ ಸಂಕೇತವಾಗಿರುವ ವಿಜಯನಗರವನ್ನು ಅಭಿವೃದ್ಧಿ ಮಾಡಿ, ಮಾದರಿ ಜಿಲ್ಲೆಯನ್ನಾಗಿಸಿ, ಜನರಿಗೆ ಕೊಟ್ಟ ಮಾತನ್ನು ಈಡೇರಿಸಲು ನಮ್ಮ ಪ್ರಯತ್ನ ಎಂದೆಂದಿಗೂ ಪ್ರಾಮಾಣಿಕವಾಗಿರುತ್ತದೆ. ಹೀಗಾಗಿ ವಿಶೇಷ ಸ್ಥಾನದಿಂದ ಜಿಲ್ಲೆಯ ಅಭಿವೃದ್ಧಿಗೆ ಮತ್ತಷ್ಟು ಪುಷ್ಠಿ ಬಂದಂತಾಗಿದೆ ಎಂದು ಹೇಳಿದರು.

ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳಿಗೆ ಧನ್ಯವಾದ:

ಈ ಭಾಗದ ಜನತೆಯ ದಶಕಗಳ ಬೇಡಿಕೆ ಈಡೇರಿಸಿದ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರಿಗೆ, ಕಂದಾಯ ಸಚಿವ ಆರ್.ಅಶೋಕ್ ಹಾಗೂ ನೂತನ ವಿಜಯನಗರ ಜಿಲ್ಲೆಯನ್ನು ಆರ್ಟಿಕಲ್ 371 ಜೆಗೆ ಸೇರಿಸಿ ಆದೇಶ ಹೊರಡಿಸಿದ ಗೌರವಾನ್ವಿತ ರಾಜ್ಯಪಾಲರಿಗೂ ಹೃದಯಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ನುಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.