ETV Bharat / state

ಸಿದ್ದರಾಮಯ್ಯ ವಿರುದ್ಧ ರವಿಕುಮಾರ್ ವಾಗ್ದಾಳಿ : ಕ್ಷಮೆ ಕೇಳಲು ಆಗ್ರಹ

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು, ಸಚಿವ ಶ್ರೀರಾಮುಲು ಅವರಲ್ಲಿ ಕ್ಷಮೆ ಕೇಳಬೇಕೆಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಆಗ್ರಹಿಸಿದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್
author img

By

Published : Nov 24, 2019, 10:56 PM IST

ಬಳ್ಳಾರಿ: ಹೊಸಪೇಟೆಯ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ರವಿಕುಮಾರ್​ ಅವರು, ಶ್ರೀರಾಮುಲು ಅವರಿಗೆ ಸಿದ್ದರಾಮಯ್ಯನವರು ಪೆದ್ದ ಎಂದು ಹೇಳಿದ್ದು, ಇದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ರಾಜಕೀಯವಾಗಿ ಟೀಕೆ ಮಾಡಲಿ, ಅದನ್ನು ಬಿಟ್ಟು ವೈಯಕ್ತಿಕವಾಗಿ ಈ ರೀತಿ ಮಾತನಾಡುವುದು ಶೋಭೆ ತರಲ್ಲ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್

ಅವರಿಗೆ ಪಕ್ಷದಲ್ಲಿ ಯಾರೂ ಬೆಂಬಲ ನೀಡುತ್ತಿಲ್ಲ. ಮಲ್ಲಿಕಾರ್ಜುನ ಖರ್ಗೆ, ಕೆ.ಹೆಚ್. ಮುನಿಯಪ್ಪ, ಜನಾರ್ದನ ಪೂಜಾರಿ ಇವರೆಲ್ಲ ಅವರಿಂದ ದೂರ ಉಳಿದುಕೊಂಡಿದ್ದಾರೆ. ಅವರು ಯಾರನ್ನು ರಾಜಕೀಯವಾಗಿ ಮುಂದುವರೆಯಲು ಬಿಡಲಿಲ್ಲ ಎಂದು ಆರೋಪಿಸಿದರು.

ಕಾಂಗ್ರೆಸ್ ಪಕ್ಷದಲ್ಲಿ ನೂರು ಮೀಟರಿನಷ್ಟು ಗುಂಡಿಗಳಿವೆ, ಮೊದಲು ಅದನ್ನು ಮುಚ್ಚಿಕೊಳ್ಳಲಿ ನಂತರ ಬೇರೆ ಪಕ್ಷದ ಬಗ್ಗೆ ಮಾತನಾಡಲಿ ಎಂದು ಹರಿಹಾಯ್ದರು. ಕಳೆದ ವಿಧಾನಸಭೆಯ ಚುನಾವಣೆಯಲ್ಲಿ ಚಾಮುಂಡಿ ಕ್ಷೇತ್ರದಲ್ಲಿ ಒಬ್ಬ ಮುಖ್ಯಮಂತ್ರಿಯಾಗಿ ಗೆಲ್ಲುವುದಕ್ಕಾಗಲಿಲ್ಲ. ಬಾದಾಮಿಯಲ್ಲಿ ಅಲ್ಪಮತಗಳ ಅಂತರದಲ್ಲಿ ಗೆದ್ದಿದ್ದಾರೆ ಎಂದು ಟೀಕಿಸಿದರು.

Intro: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕ್ಷೇಮೆ ಕೇಳಬೇಕು : ರವಿಕುಮಾರ
ಹೊಸಪೇಟೆ : ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಗ್ಯ ಸಚಿವರಿಗೆ ಕ್ಷೇಯನ್ನು ಕೇಳಬೇಕು. ಅವರು ಪೆದ್ದ ಎನ್ನುವುದು ಎಷ್ಟು ಸರಿ. ಇವರು ರಾಜಕೀಯವಾಗಿ ಟಿಕೇಯನ್ನು ಮಾಡಲಿ ಅದನ್ನು ಬಿಟ್ಟು ವೈಯಕ್ತಿಕ ಮತ್ತು ಸಮುದಾಯಕ್ಕೆ ಅವಮಾನದ ಟಿಕೇಯನ್ನು ಮಾಡಲಿ.ಅದಕ್ಕಾಗಿ ಜನರು ಇವರನ್ನು ಜನರು ಸರಕಾರದಿಂದ ಕೆಳಗೆ ಇಳಿಸಿದ್ದಾರೆ ಎಂದು ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಕಿಡಿಕಾರಿದರು.

Body: ನಗರದ ಬಿಜೆಪಿ ಕಛೇರಿಯಲ್ಲಿ ಇಂದು ಸಂಜೆ ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ರವಿಕುಮಾರ ಮಾತನಾಡಿದರು. ಮಾಜಿ ಸಂಸದ ಉಗ್ರಪ್ಪ ಮಾತು ಎತ್ತಿದರೆ ಇಂಡಿಯನ್ ಪಿನಲನಲ್ ಕೊಡ್ ಬಗ್ಗೆ ಮಾತನಾಡುತ್ತಾರೆ. ಭಾರತೀಯ ಜನತಾ ಪಾರ್ಟಿಯು ಜನಸಾಮಾನ್ಯರು ನಡೆದಾಡುವ ರೋಡ ಬಗ್ಗೆ ಮಾತನಾಡುತ್ತಾರೆ. ವಿರೋಧ ಪಕ್ಷದ ಸಿದ್ದರಾಮಯ್ಯ ನವರು ಅನರ್ಹ ಶಾಸಕರು ಎಂದು ಕರೆಯುತ್ತಾರೆ. ಅನರ್ಹರು ಯಾರು? ಎಂದು ಮೊದಲು ತಿಳಿದುಕೊಳ್ಳಬೇಕು ಎಂದು ಮಾತನಾಡಿದರು.

ಮಾಜಿ ಮುಖ್ಯಮಂತ್ರಿಯ ಸಿದ್ದರಾಮಯ್ಯ ಅವರನ್ನು ಪಕ್ಷದಲ್ಲಿ ಯಾರು? ಅವರಿಗೆ ಬೆಂಬಲವನ್ನು ನೀಡುತ್ತಿಲ್ಲ. ಮಾಜಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ,ಕೆ.ಹೆಚ್ ಮುನಿಯಪ್ಪ, ಜನಾರ್ಧನ ಪೂಜಾರಿ ಇವರೆಲ್ಲ ಸಿದ್ದರಾಮಯ್ಯ ನವರಿಂದ ದೂರ ಉಳಿದುಕೊಂಡಿದ್ದಾರೆ. ಇವರು ಯಾರನ್ನು ರಾಜಕೀಯವಾಗಿ ಮುಂದುವರೆಯಲು ಬಿಡಲಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ನೂರು ಮೀಟರನಷ್ಟು ಗುಂಡಿಗಳಿವೆ ಮೊದಲು ಅದನ್ನು ಮುಚ್ಚಿಕೊಳ್ಳಲಿ ನಂತರ ಬೇರೆ ಪಕ್ಷದ ಬಗ್ಗೆ ಮಾತನಾಡಲಿ ಎಂದು ಹರಿಹಾಯ್ದರು.

ಸಿದ್ದರಾಮಯ್ಯ ನವರು ಶ್ರೀ ರಾಮುಲು ಬಗ್ಗೆ ಪೆದ್ದ ಎಂದು ಮಾತನಾಡುವುದು ಎಷ್ಟು ಸರಿ ಅವರು ಮೊದಲು ಕ್ಷೇಮೆಯನ್ನು ಕೇಳಬೇಕು. ಸಚಿವ ಬಿ‌ ಶ್ರೀರಾಮುಲು ಅವರು ದಲಿತ ನಾಯಕರಾಗಿದ್ದಾರೆ. ಕಳೆದ ವಿಧಾನ ಸಭೆಯ ಚುನಾವಣೆಯಲ್ಲಿ ಚಾಮುಂಡಿ ಕ್ಷೇತ್ರದಲ್ಲಿ ಒಬ್ಬ ಮುಖ್ಯ ಮಂತ್ರಿ ಯಾಗಿ ಗೆಲ್ಲುವುದಕ್ಕಾಗಲಿಲ್ಲ. ಬಾದಾಮಿ ಕ್ಷೇತ್ರದಲ್ಲಿ ಬಿ.ಶ್ರೀರಾಮುಲ ಅವರ ವಿರುದ್ಧ ಸ್ವಲ್ಪ ಮತಗಳ ಮುಖಾಂತ ಗೆದ್ದಿದ್ದಾರೆ. ಜನರಿಗೆ ಗೊತ್ತಿದೆ ಅರ್ಹತೆಯನ್ನು ಹೊಂದಿದವರು ಯಾರು. ಅನರ್ಹತೆಯನ್ನು ಹೊಂದಿದವರು ಯಾರು. ರಾಜ್ಯ ಉಪಚುನಾವಣೆಯಲ್ಲಿ ಎಲ್ಲಾ ಕ್ಷೇತ್ರದಲ್ಲಿ ಕಮಲ ಹರಳುತ್ತದೆ ಕಿಲ ಕಿಲ ನಗುತ್ತದೆ ಎಂದು ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡಿಸಿದರು.

Conclusion:KN_HPT_2_ BJP_RAVIKUMARA_SPEECH_SCRIPT_KA10028
ETV Bharat Logo

Copyright © 2024 Ushodaya Enterprises Pvt. Ltd., All Rights Reserved.