ETV Bharat / state

ಮೈಲಾರ ಲಿಂಗೇಶ್ವರ ಕಾರ್ಣಿಕೋತ್ಸವ: 'ಭಾಗ್ಯದ ನಿಧಿ ತುಂಬಿ ತುಳಕಿತಲೇ ಪರಾಕ್​​​​​​’ ಎಂದ ದೈವವಾಣಿ.. ಏನಿದು ಭವಿಷ್ಯ! - ಗೊರವಯ್ಯ ನುಡಿಯುವ ವಾಣಿ

ಮೈಲಾರ ಲಿಂಗೇಶ್ವರ ಕಾರ್ಣಿಕೋತ್ಸವದಲ್ಲಿ ಗೊರವಯ್ಯ ನುಡಿಯುವ ವಾಣಿ ಇಡೀ ವರ್ಷ ಸತ್ಯವಾಗುತ್ತದೆ ಎಂಬ ಮಾತಿದೆ

mylara lingeshwara karnikothsava in vijayanagar
ಮೈಲಾರ ಲಿಂಗೇಶ್ವರ ಕಾರ್ಣಿಕೋತ್ಸವ
author img

By

Published : Feb 6, 2023, 3:40 PM IST

Updated : Feb 6, 2023, 5:21 PM IST

'ಭಾಗ್ಯದ ನಿಧಿ ತುಂಬಿ ತುಳಕಿತಲೇ ಪರಾಕ್​​​​​​’ ಎಂದ ದೈವವಾಣಿ

ವಿಜಯನಗರ: 'ಭಾಗ್ಯದ ನಿಧಿ ತುಂಬಿ ತುಳಕಿತಲೇ ಪರಾಕ್​​​​​​’ ಎಂದು ಜಿಲ್ಲೆಯ ಹರಪನಹಳ್ಳಿ ಪಟ್ಟಣದ ಹೊರವಲಯದಲ್ಲಿ ಇರುವ ಐತಿಹಾಸಿಕ ದೊಡ್ಡ ಮೈಲಾರ ಲಿಂಗೇಶ್ವರ ಕಾರ್ಣಿಕೋತ್ಸವದಲ್ಲಿ ಗೊರವಯ್ಯ ಕೋಟೆಪ್ಪ ದೈವವಾಣಿ ನುಡಿದಿದ್ದಾರೆ. ಮೈಲಾರ ಪುಣ್ಯಕ್ಷೇತ್ರದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಪ್ರಸಕ್ತ ವರ್ಷದ ಕಾರ್ಣಿಕ ಶುಭ ಸಂದೇಶ ನೀಡಿದೆ. ಈ ಸಲ ಭಾಗ್ಯದ ನಿಧಿ ತುಂಬಿ ತುಳಕಿತಲೇ ಪರಾಕ್ ಎಂಬ ದೇವವಾಣಿ ಆಗಿದೆ‌. ಈ ವರ್ಷದಲ್ಲಿ ಉತ್ತಮ ಮಳೆ ಬೆಳೆಯಾಗಲಿದೆ ಎಂದು ಸೇರಿದ್ದ ಭಕ್ತರು ಅರ್ಥೈಸಿಕೊಂಡರು.

ಹರಪನಹಳ್ಳಿ ದೊಡ್ಡ ಮೈಲಾರ ಲಿಂಗೇಶ್ವರ ಪುಣ್ಯಕ್ಷೇತ್ರ ಎಂದರೆ ಪವಿತ್ರ ಕ್ಷೇತ್ರ. ಇಲ್ಲಿ ವರ್ಷಕ್ಕೊಮ್ಮೆ ಸುತ್ತಮುತ್ತ ಊರಿನ ಸಾವಿರಾರು ಜನ ಸೇರುತ್ತಾರೆ. ಕಾರ್ಣಿಕೋತ್ಸವದಲ್ಲಿ ಗೊರವಯ್ಯ ಕೋಟೆಪ್ಪ ನುಡಿದ ದೈವವಾಣಿ ರಾಜ್ಯದ ದೇಶದ ಒಟ್ಟಾರೆ ಭವಿಷ್ಯವನ್ನು ನುಡಿಯಲಾಗುತ್ತದೆ. ಇಲ್ಲಿನ ಜನಕ್ಕೆ ಇದೇ ವೇದ ವಾಕ್ಯವಾಗಿರುತ್ತದೆ. ಇಡೀ ವರ್ಷ ಆ ವಾಣಿ ಸತ್ಯವಾಗುತ್ತದೆಯಂತೆ.

ಹೀಗಾಗಿ ದೇವವಾಣಿಗಾಗಿ ಪುಣ್ಯಕ್ಷೇತ್ರ ಅಂಗಳದಲ್ಲಿ ವಿಶಾಲ ಪ್ರದೇಶದಲ್ಲಿ ಗೊರವಯ್ಯ ಬರುತ್ತಿದ್ದಂತೆ ಏಳು ಕೋಟಿ ಏಳು ಕೋಟಿ ಎಂದು ಘೋಷಣೆಗಳು ಮೊಳಗುತ್ತದೆ. ಇದಾದ ಮೇಲೆ ಇಡೀ ಜನಸ್ತೋಮ ಶಾಂತವಾಗುತ್ತದೆ‌. ಸೂಜಿ ಬಿದ್ದರೂ ಸಹ ಸದ್ದಾಗುವ ರೀತಿಯಲ್ಲಿ ಇಲ್ಲಿ ಶಾಂತಿ‌ ನೆಲೆಸುತ್ತದೆ. ಗೊರವಪ್ಪ ಕೊಟೆಪ್ಪ ಬಿಲ್ಲನ್ನೂ ಏರಿ, ಸದ್ದಲೇ ಅಂತ ಹೇಳಿದ ಕೂಡಲೇ, ಎಲ್ಲರೂ ಮೌನವಹಿಸುತ್ತಾರೆ. ಆ ಬಳಿಕ ಗೊರವಪ್ಪ ಭವಿಷ್ಯ ನುಡಿದು ಗೊರವಯ್ಯ ಬಿಲ್ಲಿನಿಂದ ಕೆಳಗೆ ಬೀಳುತ್ತಾರೆ.

ಪುಣ್ಯಕ್ಷೇತ್ರದ ಅಂಗಳದಲ್ಲಿ ಏಳುಕೋಟಿ ಏಳುಕೋಟಿ ಎನ್ನುತ್ತಲೇ ಭಕ್ತ ಸಮೂಹ ಕಾರ್ಣಿಕವನ್ನು ಸ್ವಾಗತಿಸಿದರು. ಈ ಭಾಗದ ಜನಕ್ಕೆ ಇಲ್ಲಿನ ಗೊರವಯ್ಯ ನುಡಿಯುವ ವಾಣಿ ಅವರ ಇಡೀ ವರ್ಷದ ಬದುಕು‌ ನಿರ್ಧರಿಸುತ್ತದೆ‌‌. ಮೇಲಾಗಿ ಇಲ್ಲಿ ಆದ ದೇವವಾಣಿ ಸತ್ಯವಾಗುತ್ತಲೇ ಬಂದಿದೆ. ಆದರೆ ಒಮ್ಮೊಮ್ಮೆ ಭಕ್ತರು ಅರ್ಥೈಸುವ ರೀತಿ ಬದಲಾಗಬಹುದು. ಆದರೆ ದೇವ ವಾಣಿ ಮಾತ್ರ ಸತ್ಯವಾಗುತ್ತದೆ ಎಂಬುದು ಈ ಭಾಗದ ಜನರ ನಂಬಿಕೆ.

ಇದನ್ನೂ ಓದಿ: ಕಬ್ಬಿಣದ ಸರಪಳಿ ತುಂಡು ಮಾಡಿ, ಕೈಕಾಲಿಗೆ ಸಲಾಕೆ ಚುಚ್ಚಿಕೊಳ್ಳುವ ಗೊರವಯ್ಯ: ಇದು ಮೈಲಾರಲಿಂಗನ ಪವಾಡವಂತೆ!

Last Updated : Feb 6, 2023, 5:21 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.