ETV Bharat / state

ಅನೈತಿಕ ಚಟುವಟಿಕೆಯ ಕೇಂದ್ರವಾದ ಮ್ಯೂಸಿಯಂ ಕಟ್ಟಡ.. ₹2.5 ಕೋಟಿ ನೀರಲ್ಲಿ ಹೋಮ - Department of Tourism

2008ರಲ್ಲಿ ಮ್ಯೂಸಿಯಂ ಸ್ಥಾಪಿಸಲೆಂದು ನಿರ್ಮಿಸಿದ ಕಟ್ಟಡ ಪಾಳು ಬಿದ್ದಿದೆ. ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಎಲ್ಲೆಂದರಲ್ಲಿ ಮದ್ಯದ ಬಾಟಲಿಗಳು, ಕಸ-ಕಡ್ಡಿ ಅವಾಚ್ಯ ಪದ ಬಳಸಿ ಗೋಡೆ ಮೇಲೆ ಬರೆಯಲಾಗಿದ್ದು, ಮ್ಯೂಸಿಯಂ ಹಾಳು ಕೊಂಪೆಯಂತಾಗಿದೆ..

museum-building-which-was-neglected-by-the-department
ಇಲಾಖೆ ನಿರ್ಲಕ್ಷ್ಯಕ್ಕೆ ಒಳಗಾಗಿ ಪಾಳುಬಿದ್ದ ಮ್ಯುಸಿಯಂ ಕಟ್ಟಡ: ಈಗ ಅನೈತಿಕ ಚಟುವಟಿಕೆಯ ಕೇಂದ್ರ
author img

By

Published : Sep 14, 2020, 8:38 PM IST

ಬಳ್ಳಾರಿ : ಗಣಿನಾಡು ಬಳ್ಳಾರಿ ತಾಲೂಕಿನ ಸಂಗನಕಲ್ಲು ಗ್ರಾಮ ಹೊರವಲಯದ ನವಶಿಲಾಯುಗದ ಬೆಟ್ಟದ ಬಳಿ ಸ್ಥಾಪಿಸಲಾದ ಉದ್ದೇಶಿತ ಸಂಗನಕಲ್ಲು ಮ್ಯೂಸಿಯಂ ಈಗ ಅಕ್ರಮ, ಅನೈತಿಕ ಚಟುವಟಿಕೆ ತಾಣವಾಗಿ ಮಾರ್ಪಟ್ಟಿದೆ‌.‌

ಈ ಸುಂದರ ಕಟ್ಟಡದಲ್ಲೀಗ ಮದ್ಯದ ಬಾಟಲಿ, ಸಿಗರೇಟ್​​ ತುಂಡುಗಳು, ಅಶ್ಲೀಲಪದ ಬಳಕೆಯ ಗೋಡೆಬರಹಗಳು ರಾರಾಜಿಸುತ್ತಿವೆ.‌ ಇವು ನೋಡುಗರನ್ನೂ ಮುಜುಗರಕ್ಕೆ ಒಳಗಾಗುವಂತೆ ಮಾಡುತ್ತಿವೆ.

ಇದಲ್ಲದೇ, ಸಮರ್ಪಕ ನಿರ್ವಹಣೆ ಕೊರತೆಯೂ ಎದ್ದು ಕಾಣುತ್ತಿದೆ. ಮ್ಯೂಸಿಯಂ ಕೊಠಡಿಗೆ ಅಳವಡಿಸಲಾಗಿದ್ದ ಗಾಜಿನ ಕಿಟಕಿಗಳನ್ನೂ ಕೂಡ ಒಡೆದಿರುವ ಕಿಡಿಗೇಡಿಗಳು, ಇಡೀ ಮ್ಯೂಸಿಯಂ ವಿರೂಪಗೊಳಿಸಿದ್ದಾರೆ. ಹೊರಗಿನಿಂದ ಸುಂದರವಾಗಿ ಕಾಣುವ ಕಟ್ಟಡದೊಳಗೆ ಪ್ರವೇಶಿಸಿದ್ರೆ ನರಕದಂತಹ ದೃಶ್ಯ ಎದುರಾಗುತ್ತದೆ.

ಪಾಳುಬಿದ್ದಿರುವ ಮ್ಯೂಸಿಯಂ ಕಟ್ಟಡ

ನವಶಿಲಾಯುಗದ ಆದಿಮಾನವರು ಈ ಸಂಗನಕಲ್ಲು ಗುಡ್ಡದಲ್ಲಿ ನೆಲೆಸಿದ್ದರು. ಅವರು ನೆಲೆಸಿದ್ದರು ಎಂಬುದಕ್ಕೆ ಇಲ್ಲಿ ಪುರಾವೆ ಹಾಗೂ ಕುರುಹು ಕಾಣಸಿಗುತ್ತವೆ. ಅವುಗಳ ಸಂರಕ್ಷಣೆಗಾಗಿ ಈ ಮ್ಯೂಸಿಯಂ ಸ್ಥಾಪಿಸಲಾಗಿತ್ತು. ಹಂಪಿ ಭಾರತೀಯ ಪುರಾತತ್ವ ಹಾಗೂ ಪ್ರಾಚ್ಯವಸ್ತು ಸರ್ವೇಕ್ಷಣಾ ಇಲಾಖೆ ವ್ಯಾಪ್ತಿಗೆ ಈ ಸಂಗನಕಲ್ಲು ಗುಡ್ಡ ಒಳಪಡುತ್ತದೆ.

ಆದರೆ, ಇಲಾಖೆ ಮಾತ್ರ ಈ ಕಡೆ ಸುಳಿಯದೇ ಅನೈತಿಕ ಚಟುವಟಿಕೆಯ ತವರೂರಾಗಿ ಮಾರ್ಪಟ್ಟಿದೆ. ಬಳ್ಳಾರಿ ಮಹಾನಗರದಿಂದ ಕೇವಲ 6 ಕಿ.ಮೀ ದೂರದಲ್ಲಿರೋ ಈ ಸಂಗನಕಲ್ಲು ಬೆಟ್ಟದ ಬಳಿ ಇರುವ ಉದ್ದೇಶಿತ ಮ್ಯೂಸಿಯಂ ಅಂದಾಜು 2.5 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಿ ಈಗಾಗಲೇ ದಶಕಗಳೇ ಕಳೆದಿವೆ.

ಆದರೂ ಈ ಕಟ್ಟಡ ಮಾತ್ರ ಉದ್ದೇಶಿತ ಮ್ಯೂಸಿಯಂಗೆ ಸದ್ಬಳಕೆಯಾಗದೇ ಅಕ್ರಮ, ಅನೈತಿಕ ಚಟುವಟಿಕೆಗಳ ತಾಣವಾಗಿದೆ. ನವ ಶಿಲಾಯುಗ ಆದಿಮಾನವರು ಯುದ್ಧ ಹಾಗೂ ಪ್ರಾಣಿ ಬೇಟೆಗಾಗಿ‌ ಅಂತಾನೆ ಕೊಡಲಿ, ಬಾಚಿ, ಈಟಿಗಳಂತಹ ಅಸ್ತ್ರಗಳನ್ನು ತಯಾರು ಮಾಡಲು ಸಂಗನಕಲ್ಲು ಬೆಟ್ಟದಲ್ಲಿ ಒಂದು ಕಾರ್ಖಾನೆ ಮಾಡಿಕೊಂಡಿದ್ದರು.

ಅದರ ಕುರುಹು ಈಗಲೂ ಸಹ ಇಲ್ಲಿವೆ. ಹೀಗಾಗಿ, 2008ರಲ್ಲಿ ಅಂದಿನ ಪ್ರವಾಸೋದ್ಯಮ ಸಚಿವರಾಗಿದ್ದ ಗಾಲಿ ಜನಾರ್ದನರೆಡ್ಡಿ, ಈ ಸ್ಥಳವನ್ನು ಅಭಿವೃದ್ದಿಪಡಿಸಿ, ಈಗಿನ ಪೀಳಿಗೆಗೆ ನವ ಶಿಲಾಯುಗದ ಮಹತ್ವ ತಿಳಿಸಲು ಸಂಗನಕಲ್ಲು ಗುಡ್ಡದ ಬಳಿಯೇ ಒಂದು ಮ್ಯೂಸಿಯಂ ನಿರ್ಮಿಸಲು ಅಂದಾಜು ರೂ.2.5 ಕೋಟಿಯಷ್ಟು ಅನುದಾನ ನೀಡಿದ್ದರು. ಬಳಿಕ ಕಟ್ಟಡ ನಿರ್ಮಾಣಗೊಂಡರು ಉದ್ಘಾಟನೆಯ ಭಾಗ್ಯ ಸಿಗದೆ ಪಾಳು ಬಿದ್ದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.