ETV Bharat / state

ಫ್ಯಾಮಿಲಿ ಡಾಬದಲ್ಲಿ 1.5 ಕೆ.ಜಿ ಗಾಂಜಾ ವಶಕ್ಕೆ ಪಡೆದ ಪೊಲೀಸರು. ಮಾಲೀಕ ಸೇರಿ ಮೂವರ ಬಂಧನ

ಮಾಮ ಬಾಂಜ ಫ್ಯಾಮಿಲಿ ಡಾಬದಲ್ಲಿ‌‌ 1.5 ಕೆ.ಜಿ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Arrest
Arrest
author img

By

Published : Nov 23, 2020, 9:50 PM IST

ಬಳ್ಳಾರಿ: ನಗರದ ಹೊರ ವಲಯದ ಹೊಸಪೇಟೆ ರಸ್ತೆಯ ಮಾಮ ಬಾಂಜ ಫ್ಯಾಮಿಲಿ ಡಾಬದಲ್ಲಿ‌‌ 1.5 ಕೆ.ಜಿ ಗಾಂಜಾವನ್ನು ವಶಕ್ಕೆ ಪಡೆದು ಡಾಬದ ಮಾಲೀಕ ರಿಚ್ ಪಾಲ್ ಸಿಂಗ್ ಸೇರಿದಂತೆ ಮೂವರನ್ನು ಬಂಧಿಸಿರುವುದಾಗಿ ಗ್ರಾಮೀಣ ಠಾಣೆಯ ಪಿ.ಎಸ್.ಐ ಹನುಮಂತಪ್ಪ ತಿಳಿಸಿದ್ದಾರೆ.

ರಿಚ್ ಪಾಲ್ ಸಿಂಗ್ (30), ಕರಣ್ ಸಿಂಗ್ (28),
ಘನಶ್ಯಾಮ್ (24 ) ಬಂಧಿತ ಆರೋಪಿಗಳು. ಇವರಿಂದ 30 ಸಾವಿರ ರೂ ಮೌಲ್ಯದ 1.5 ಕೆ.ಜಿ ಗಾಂಜಾ ವಶಕ್ಕೆ ಪಡೆದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಗ್ರಾಮೀಣ ಠಾಣೆಯ ಡಿವೈಎಸ್ಪಿ ಸತ್ಯನಾರಾಯಣ ರಾವ್, ಸಿಪಿಐ ಆರ್.ಎಸ್ ಬಿರಾದಾರ, ಪಿ.ಎಸ್.ಐ ಹನುಮಂತ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.